ಮೌಡ್ಯಗಳ ವಿರುದ್ಧ ನಾನಾ ರೀತಿಯಲ್ಲಿ ಕ್ರಿಯಾತ್ಮಕವಾಗಿ ಹೋರಾಟ ಮಾಡುತ್ತಿರುವ ಮಾನವ ಬಂಧುತ್ವ ವೇದಿಕೆಯು ಬಾಗಲಕೋಟೆ ಜಿಲ್ಲೆಯ ಮುಧೋಳದ ಸ್ಮಶಾನದಲ್ಲಿ ಪರಿವರ್ತನಾ ದಿನಾಚರಣೆಯಲ್ಲಿ ಆಚರಿಸಿದೆ
ಕಾರ್ಯಕ್ರಮದಲ್ಲಿ ಮಾತನಾಡಿದ ವೇದಿಕೆಯ ಪ್ರಕಾಶ್ ಚಕ್ರವರ್ತಿ, “ಅಂಬೇಡ್ಕರ್ ಆಶಯಗಳನ್ನು ಈಡೇರಿಸಲು ಸಮಾಜದಲ್ಲಿನ ಭಿನ್ನಾಭಿಪ್ರಾಯಗಳನ್ನು ಹೊರಗಿಟ್ಟು ಒಂದಾಗಬೇಕು” ಎಂದರು.
ಕರಣಕುಮಾರ ಅಂಬಿಕಾ ಮೌರ್ಯ ಮಾತನಾಡಿ, “ಯಾವ ದೇವರಿಂದಲೂ ಶೋಷಿತ ಸಮುದಾಯ ಅಭಿವೃದ್ದಿ ಆಗಿಲ್ಲ. ನಾವು ಇಂದೂ ಎಲ್ಲ ತರನಾಗಿ ಅಭಿವೃದ್ಧಿ ಆಗಿರುವುದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನವೇ ಕಾರಣ” ಎಂದು ಹೇಳಿದರು.
“ಅಂಬೇಡ್ಕರ್ ಅವರು ಶಿಕ್ಷಣದಿಂದ ವಂಚಿತರಾದ ತಳ ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡಿದರು. ಅಂಬೇಡ್ಕರ್ ವಿಚಾರದಿಂದ ತಳ ಸಮುದಾಯದ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಲಕ್ಷ್ಮಣ ಮಾಳಗಿ, ಸಂಜೀವ ಸಾಮ್ರಾಟ, ಯಲ್ಲಪ್ಪಣ್ಣ ಹೆಗಡೆ, ಮಹೇಶ್ ಹುಗ್ಗಿ ಶಿವಾನಂದ ಮ್ಯಾಗೇರಿ, ಶೇಖರ ಕಾಂಬಳೆ, ಸಂಜು ಕುರೆನ್ನವರ, ರಾಜು ನಡುವಿನಕೇರಿ ಇತರರು ಇದ್ದರು.