ಮೈಸೂರು ಜಿಲ್ಲೆ, ಪಿರಿಯಾಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ಹರಿಕಾರರಾದ ದಿವಂಗತ ಟಿ. ವಿ. ವಸಂತರಾಜ ಅರಸ್ ರ ನೆನಪಿನಾರ್ಥ ನುಡಿ ನಮನ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕ ವೃಂದ,ಹಿರಿಯ ವಿದ್ಯಾರ್ಥಿಗಳು, ಪ್ರಗತಿಪರರು ಸೇರಿ ಅರ್ಥಪೂರ್ಣವಾಗಿ ಆಚರಿಸಿದರು.
ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟತುಂಗಾ ವಿಶೇಷವಾಗಿ ಕರ್ನಾಟಕ ಏಕೀಕರಣದ ಕರ್ತೃ ಡಿ ದೇವರಾಜ ಅರಸ್ ರವರ ಜನ್ಮ ಭೂಮಿ. ಅದೇ ಮಣ್ಣಿನಲ್ಲಿ ಜನಿಸದ ಮತ್ತೋರ್ವ ಸಾಧಕರು, ಸಮಕಾಲಿನರಾಗಿದ್ದ ಶೈಕ್ಷಣಿಕ ಹರಿಕಾರ ಟಿ.ವಿ. ವಸಂತರಾಜ ಅರಸ್.ತಾಲ್ಲೂಕಿಗೆ ಇರ್ವರು ಸ್ಮರಣಿಯರೇ. ಒಬ್ಬರು ರಾಜಕೀಯವಾಗಿ ಹಿಂದುಳಿದ ವರ್ಗಗಳ ಪರ ಕೆಲಸ ಮಾಡಿದರೆ. ಇನ್ನೊಬ್ಬರು ಶೈಕ್ಷಣಿಕವಾಗಿ ಇಡೀ ತಾಲ್ಲೂಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ, ಬದುಕನ್ನು ಕಟ್ಟಿಕೊಳ್ಳಲು ಆಸರೆಯಾದವರು.

ಕಳೆದ ತಿಂಗಳ 26 ರಂದು ಟಿಸಿವಿ ನಿಧನರಾಗಿದ್ದು. ತಾಲ್ಲೂಕಿನ ನಿವೃತ್ತ ಪ್ರಾಧ್ಯಾಪಕ ವೃಂದ, ಹಿರಿಯ ವಿದ್ಯಾರ್ಥಿಗಳು, ಆಪ್ತರು, ಪ್ರಗತಿಪರರು ಸೇರಿ ಅರ್ಥಪೂರ್ಣವಾಗಿ ಅವರೋಟ್ಟಿಗಿನ ಒಡನಾಟ ಮೆಲುಕು ಹಾಕುವುದರೊಂದಿಗೆ. ಅವರ ನಡೆ, ನುಡಿ, ವ್ಯಕ್ತಿತ್ವ ಸ್ಮರಿಸಿ ನುಡಿ ನಮನ ಸಲ್ಲಿಸಿದರು.

ನಿವೃತ್ತ ಉಪನ್ಯಾಸಕರಾದ ಸತೀಶ್ ಚಂದ್ರ ಮಾತನಾಡಿ ” ಜೀವನದಲ್ಲಿ ಏನಾದರೂ ಸಾಧಿಸಿದ ಸಾರ್ಥಕತೆ ಇದ್ದರೆ, ಜೀವನಕ್ಕೆ ದಿಕ್ಕು ತೋರಿದ ನೆಚ್ಚಿನ ಗುರುಗಳ ಪಾತ್ರ ದೊಡ್ಡದು. ಪ್ರತಿಯೊಬ್ಬರ ಜೀವನದಲ್ಲಿ ಒಬ್ಬರಲ್ಲ ಒಬ್ಬರ ನೇರ ಪ್ರಭಾವ ಇದ್ದೇ ಇರುತ್ತದೆ. ಅಂತಹ ಪ್ರಭಾವಕ್ಕೊಳಗಾಗಿ ಕನ್ನಡದಲ್ಲಿ ಓದಿ ಅಧ್ಯಾಪಕ ವೃತ್ತಿಗೆ ಬಂದವನು. ಪ್ರತಿಭೆಗೆ, ಕಲೆಗೆ ನಿರಂತರ ಮಹತ್ವ, ಪ್ರೋತ್ಸಾಹ ಕೊಟ್ಟವರು ಎಂದಿಗೂ ಸ್ಮರಣಿಯ ” ಎಂದರು.

ನಿವೃತ್ತ ಉಪನ್ಯಾಸಕರಾದ ಆರ್. ಎಸ್ ದೊಡ್ಡಣ್ಣ ಮಾತನಾಡಿ ” ವೃತ್ತಿಗೆ ಘನತೆ ತಂದವರು, ವೃತ್ತಿಪರತೆಗೆ ಹೆಚ್ಚು ಒತ್ತು ನೀಡಿ ಶಿಕ್ಷಕ್ಷಕರಾಗಿ ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಜೀವನಮಾರ್ಗ ತೋರಿದವರು. ಕ್ರಿಯಾಶೀಲ ವ್ಯಕ್ತಿಯಾಗಿದ್ದ ಟಿಸಿವಿ ಸದಾ ಚಟುವಟಿಕೆಯಿಂದ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶೈಕ್ಷಣಿಕವಾಗಿ ತಾಲ್ಲೂಕಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಟ್ಟವರು. ಸಾಮಾಜಿಕ ಚಿಂತನೆಯುಳ್ಳ ವ್ಯಕ್ತಿತ್ವ ಇಡೀ ತಾಲ್ಲೂಕಿನಲ್ಲಿ ಎಲ್ಲರಿಗೂ ಮಾದರಿಯಾಗಿ ಸೂಕ್ತವಾದ ಕೆಲಸ ನಿರ್ವಹಣೆ ಮಾಡಿದರು ” ಎಂದರು.

ರಾಜುರವರು ಮಾತನಾಡಿ ” ಅಲಕ್ಶ್ಮಕ್ಕೆ, ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯದಿಂದ ಬಂದ ನನಗೆ ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡಾ ಕೋಟದಲ್ಲಿ ಅವಕಾಶ ಕಲ್ಪಿಸಿ ಬದುಕು ಕಟ್ಟಿಕೊಳ್ಳಲು ನೇರವಾದರು. ನನ್ನಂತೆ ಸಾವಿರಾರು ಜನ ಸಮಾಜದಲ್ಲಿ ಉನ್ನತ ಸ್ಥಾನಕ್ಕೆರಲು ಮಹತ್ವದ ಪಾತ್ರ ವಹಿಸಿದ್ದು ಇದೆ ಟಿಸಿವಿ ” ಎಂದು ನೆನಪಿಸಿದರು.
ಶಿಕ್ಷಕರಾದ ಅಪ್ಪಣ್ಣ ಮಾತನಾಡಿ ” ಅಂದಿನ ಕಾಲದಲ್ಲಿ ಆಸ್ಪಶ್ಯತೆಯ ನಡುವೆ ಇನ್ನಿಲ್ಲದ ಸಂಕಷ್ಟ ಅನುಭವಿಸುವ ವೇಳೆ ವಿದ್ಯಾರ್ಥಿಗಳ ಕಷ್ಟ ಅರಿತು ಸ್ಪಂದಿಸುತಿದ್ದ ಗುಣ ಅನನ್ಯವಾದದ್ದು. ನೆರವು, ಸಲಹೆ, ಸಹಕಾರ, ಮಾರ್ಗದರ್ಶನ ಜೀವನದ ಬದಲಾವಣೆಗೆ ಕಾರಣಿಭೂತರು ” ಎಂದು ಹೇಳಿದರು.

ಕಸಪಾ ನಿಕಟಪೂರ್ವ ಜಿಲ್ಲಾಧ್ಯಕ್ಷ ಹಾಗೂ ನಿವೃತ್ತ ಉಪ ಪ್ರಾಂಶುಪಾಲರಾದ ಬಿ ಎಂ ಶಿವಸ್ವಾಮಿ ಕಾರ್ಯಕ್ರಮ ನಿಯೋಜನೆಯ ಜತೆಗೆ ‘ ಅವರೊಟ್ಟಿಗಿನ ಒಡನಾಟ, ಪ್ರೌಢಶಾಲೆ ಹಾಗೂ ಕಾಲೇಜಿಗೆ ಅವರಿಂದಾದ ನೆರವನ್ನು ಸ್ಮರಿಸಿದಲ್ಲದೆ, ಅರ್ಥಪೂರ್ಣವಾದ ಜೀವನ ನಡೆಸಿದವರು. ಇಂದಿನವರಿಗೂ, ಮುಂದಿನವರಿಗೂ ಆದರ್ಶ, ಅನುಕರಣಿಯ. ಅವರ ನಡೆ, ನುಡಿ, ಶ್ರದ್ದೆ ಜೀವನಕ್ಕೆ ಪಾಠ ‘ ಎಂದೇಳಿದರು.

ಕಸಪಾ ಜಿಲ್ಲಾ ಮಾಜಿ ಜಿಲ್ಲಾಧ್ಯಕ್ಷ ವೈ ಡಿ ರಾಜಣ್ಣ ಮಾತನಾಡಿ ” ಬಡವರಿಗಾಗಿ ಮರುಗುವ ಸ್ವಭಾವ, ತಮ್ಮಿಂದಾಗುವ ಸಹಾಯಹಸ್ತ ಚಾಚುವ ದೊಡ್ಡ ಗುಣ ಅವರದ್ದಾಗಿತ್ತು. ತಾಲ್ಲೂಕಿನ ಜನರ ಮೇಲೆ ಅತ್ಯಂತ ಕಳಕಳಿ ಹೊಂದಿದ್ದವರು. ತಾಲ್ಲೂಕು ಎಂದಿಗೂ ಮರೆಯಲಾಗದ ಚೇತನ ಅಂದರೆ ಅದುವೇ ಟಿಸಿವಿ. ತಾಲ್ಲೂಕಿನ ಆಗು ಹೋಗುಗಳ ಕಡೆಗೆ ವಿಶೇಷ ಆಸಕ್ತಿ ಹಾಗೂ ಸ್ಪಂದನೆ ಜೀವಿತಾವಧಿಯವರೆಗೂ ಪಾಲಿಸಿದವರು ” ಎಂದು ಸ್ಮರಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಮುಂಗಾರಿನ ಮೊದಲ ಉಳುಮೆ ‘ ಹೊನ್ನಾರು ‘
ಕಾರ್ಯಕ್ರಮದಲ್ಲಿ ಬಿ. ವಿ ಮಂಜುನಾಥ, ಪುರಸಭೆ ಅಧ್ಯಕ್ಷ ಪ್ರಕಾಶ್, ಪ್ರಗತಿಪರ ಚಿಂತಕ ಈರಯ್ಯ,ಹಿರಿಯ ಪತ್ರಕರ್ತ ಜೆ ಸೋಮಣ್ಣ,ನಿವೃತ್ತ ಉಪನ್ಯಾಸಕ ರಮೇಶ್, ಉಮಾ ಅರಸ್,ಮಾಜಿ ಪುರಸಭಾ ಅಧ್ಯಕ್ಷ ವೇಣು ಗೋಪಾಲ್,ಹಿರಿಯ ಪತ್ರಕರ್ತ ದೇವಣ್ಣ, ವಿನಯ್ ಶೇಖರ್,ಹೇಮಂತ್, ರಾಜಣ್ಣ,ಸಿದ್ದಯ್ಯ, ಪತ್ರಕರ್ತರಾದ ಪಿ.ಡಿ. ದೇವೇಗೌಡ, ನವೀನ್ ಕುಮಾರ್, ರಾಮೇಗೌಡ ಹಾಗೂ ಮೋಹನ್ ಮೈಸೂರು ಸೇರಿದಂತೆ ಇನ್ನಿತರರು ಇದ್ದರು.