ಬಾಲಕಿಯೊಬ್ಬಳು ಚಿರತೆಯಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಚಿಕ್ಕಬೆಳ್ಳಾವಿಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಚಿಕ್ಕಬೆಳ್ಳಾವಿಯಲ್ಲಿ ಮಂಗಳವಾರ ಸಂಜೆ ಮನೆಯ ಅಂಗಳದಲ್ಲಿ ಲೇಖನ ಎಂಬ ಬಾಲಕಿ ಆಟ ಆಡುತ್ತಿದ್ದಾಗ ಚಿರತೆ ಏಕಾಏಕಿ ದಾಳಿ ನಡೆಸಿದೆ.
ಈ ವೇಳೆ ತಂದೆ ರಾಕೇಶ್ ಚಿರತೆಯನ್ನು ಎದುರಿಸಿ ಜೋರಾಗಿ ಕೂಗಿ, ದೊಣ್ಣೆಯಿಂದ ಬೆದರಿಸಿದ್ದಾರೆ. ಆಗ ಚಿರತೆ ಬಾಲಕಿಯನ್ನು ಬಿಟ್ಟು ಹೋಗಿದೆ. ಆಕೆಯ ಕಾಲಿಗೆ ಪರಚಿದ ಗಾಯಗಳಾಗಿವೆ.
ವಿಶೇಷವೆಂದರೆ ಈಕೆಯ ತಂದೆಯೇ ಇವಳನ್ನು ರಕ್ಷಿಸಿದ್ದಾರೆ. ತಂದೆ ರಾಕೇಶ್ ಚಿರತೆಯನ್ನೇ ಎದುರಿಸಿ ಮಗಳನ್ನು ರಕ್ಷಣೆ ಮಾಡಿಕೊಂಡಿದ್ದಾರೆ.
ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ