ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯಕ್ಕೆ ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಹಾಗೂ ಗುಬ್ಬಿ ತಹಶೀಲ್ದಾರ್ ಬಿ ಆರತಿ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಗಳು ವಸತಿನಿಲಯದ ಅಡುಗೆ ಕೊಠಡಿ, ಶೌಚಾಲಯ, ವಿದ್ಯಾರ್ಥಿಗಳ ಕೊಠಡಿಗಳ ಪರಿಶೀಲನೆ ಮಾಡಿದ್ದು, ವಸತಿನಿಲಯದ ಸಮಸ್ಯೆಗಳ ಬಗ್ಗೆ ಮಕ್ಕಳೊಂದಿಗೆ ಚರ್ಚೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಜನತಾದರ್ಶನ: ವೃದ್ಧೆಗೆ ಆಧಾರ್ ಕಾರ್ಡ್, ಮಾಸಾಶನ ಆದೇಶ ಪತ್ರ ವಿತರಣೆ
ಅಧಿಕಾರಿಗಳ ದಿಢೀರ್ ಭೇಟಿಗೆ ವಸತಿನಿಲಯದ ಸಿಬ್ಬಂದಿಗಳು ತಬ್ಬಿಬ್ಬಾಗಿದ್ದರು. ವಾರ್ಡನ್ ಸಂಜೆ ವೇಳೆ ವಸತಿನಿಲಯದಲ್ಲಿ ಇಲ್ಲದೇ ಇರುವ ಬಗ್ಗೆ ಉಪ ವಿಭಾಗಾಧಿಕಾರಿಗಳು ಸಿಬ್ಬಂದಿಯನ್ನು ಪ್ರಶ್ನಿಸಿದ್ದು, ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.