ಬಿಜೆಪಿ ಪಕ್ಷದ ಪ್ರಚಾರಕಿ ನಟಿ ಶ್ರುತಿ ಅವರ ಫ್ರಿ ಬಸ್ ಕುರಿತ ನೀಡಿರುವ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಿದನ್ನು ಖಂಡಿಸಿರುವ ಸ್ಲಂ ಸಮಿತಿಯ ಅರುಣ್ ಶ್ರುತಿಯವರು ತಮ್ಮ ಹೇಳಿಕೆ ಹಿಂಪಡೆಯುಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಉಚಿತ ಸಾರಿಗೆ ಮತ್ತು ತಿಂಗಳಿಗೆ 2000 ರೂ. ಭಾಗ್ಯದಿಂದ ಪುರುಷ ಸಹವಾಸ ಇಟ್ಟು ಕೊಂಡು ಪರಾರಿಯಾಗುತ್ತಾರೆ ಎಂದು ತುಚ್ಛ್ವಾಗಿ ಮಾತಾಡಿರುವುದು ಸರಿಯಲ್ಲ ಎಂದ ಅವರು,
ಬಣ್ಣ ಹಾಕಿ ನಟಿಸುವ ನಟಿ ನಿಜ ಜೀವನದ ಮಹಿಳೆಯರ ಬಗ್ಗೆ ಅವಹೇಳನ ಭಾಷಣ ಮಹಿಳಾ ವಿರೋಧಿ ನಡೆಯಾಗಿದೆ. ನಾಲಿಗೆ ಹರಿಬಿಟ್ಟು ಮಾತನಾಡುವ ಮುನ್ನ ಸಲ್ಪ ಎಚ್ಚರಿಕೆ ಇರಲಿ. ಮಹಿಳಾ ನಾಯಕಿ ಶ್ರುತಿರವರನ್ನು ಬಿಜೆಪಿ ಕೂಡಲೇ ವಜಾಗೊಳಿಸಲಿ. ಪರದೆ ಮುಂದೆ ಬಣ್ಣ ಹಾಕುವ ನಟಿಗೆ ಮಹಿಳೆಯರು ಬುದ್ದಿ ಕಲಿಸಲೇ ಬೇಕು ಎಂದು ಸ್ಲಂ ಸಮಿತಿ ಅರುಣ್ ಹೇಳಿದರು.
