ಶಾಂತಿ ಸ್ಥಾಪನೆಗಾಗಿ ಪ್ರತಿಭಟಿಸಿದವರ ಮೇಲೆ ಹಾಕಲಾಗಿರುವ ಮೊಕದ್ದಮೆಯನ್ನು ಹಿಂಪಡೆಯಲು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಅಕ್ಟೋಬರ್ 26, ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲ್ಲಿಸಿದೆ.
ಪ್ರಗತಿ ಪರ ಸಂಘಟನೆಗಳ ಒಕ್ಕೂಟವು ತುಮಕೂರು ಜನಪರ, ಜೀವಪರ, ಶಾಂತಿ ಪರ, ರೈತ, ದಲಿತ, ಕಾರ್ಮಿಕ, ಸಾಮಾಜಿಕ ಸಂಘಟನೆಗಳ ಒಕ್ಕೂಟವಾಗಿದ್ದು, ಸೌರ್ಹಾದತೆ ಮತ್ತು ಸಹಬಾಳ್ವೆಗಾಗಿ, ಜನತೆಯ ಹಿತದೃಷ್ಟಿಯಿಂದ ಸಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ದುಡಿಯುತ್ತಾ ಬಂದಿದೆ. ಒಕ್ಕೂಟವು ಜೀವ ವಿರೋಧಿ ಸಂವಿಧಾನಿಕ ಹಕ್ಕುಗಳಿಗೆ ಧಕ್ಕೆಯಾಗುವ ಯಾವುದೇ ಕೃತ್ಯ ನಡೆದರು ಶಾಂತಿಯುತ ಪ್ರತಿರೋಧ ದಾಖಲಿಸುವ ಮತ್ತು ಜನತೆಯನ್ನು ಎಚ್ಚರಿಸುವ ಕೆಲಸ ಮಾಡುತ್ತಾ ಬಂದಿದೆ ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
ಅಕ್ಟೋಬರ್ 20ರಂದು ಯುದ್ಧ ವಿರೋಧಿ ಪ್ರತಿಭಟನೆಯನ್ನು ಶಾಂತಿಯುತವಾಗಿ ನಗರದ ಟೌನ್ ಹಾಲ್ ವೃತ್ತದಲ್ಲಿ ನಡೆಸಲಾಗಿತ್ತು. ಪ್ರತಿಭಟನೆಯು ಜಾಗತಿಕ ಶಾಂತಿಬಯಸಿ, ಯುದ್ಧ ನಿಲ್ಲಿಸುವಂತೆ ಒತ್ತಾಯಿಸಿ ನಡೆಸಲಾದ ಪ್ರತಿಭಟನೆಯಾಗಿತ್ತು. ಆ ಬಳಿಕ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ಮುಖಂಡರ ಮೇಲೆ ದೂರಿನಲ್ಲಿ ದಾಖಲಿಸಿರುವ ವಿಚಾರವು ಸತ್ಯಕ್ಕೆ ದೂರವಾದ ವಿಚಾರ. ತಾವು ಈ ವಿಚಾರವನ್ನು ಪರಿಶೀಲಿಸಿ ಆಗಿರುವ ಅವಘಡವನ್ನು ಸರಿಪಡಿಸಿ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.