ದೂರಿನ ಆಧಾರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿದೆ. ಈಗ ತನಿಖೆ ಆರಂಭವಾಗಿದೆ. ಇಂದು ಬೆಳಿಗ್ಗೆ ಪೊಲೀಸರು ನ್ಯಾಯಾಧೀಶರ ಮುಂದೆ ಮುನಿರತ್ನ ಅವರನ್ನು ಹಾಜರುಪಡಿಸಿದ್ದು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ವೈರಲ್ ಆಗುತ್ತಿರುವ ಆಡಿಯೋವನ್ನು ಧ್ವನಿ ಪರೀಕ್ಷೆಗೆ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಅದು ಮುನಿರತ್ನ ಅವರ ಧ್ವನಿ ಹೌದಾ? ಅಲ್ಲವಾ? ಎಂದು ಪರಿಶೀಲನೆ ಮಾಡಲಾಗುತ್ತದೆ” ಎಂದು ತಿಳಿಸಿದರು.
ದ್ವೇಷದ ರಾಜಕಾರಣ ಮಾಡ್ತಿದ್ದಾರೆ ಅನ್ನೋ ಬಿಜೆಪಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅವರು ಕಂಪ್ಲೇಂಟ್ ಕೊಟ್ಟಿದ್ದಾರೆ, ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ತಗೊಂಡಿದ್ದಾರೆ. ಇದರಲ್ಲಿ ದ್ವೇಷ ಎಲ್ಲಿ ಬರುತ್ತೆ. ಅವರ ಜೊತೆಗೆ ಇದ್ದವರೇ ದೂರು ನೀಡಿದ್ದಾರೆ. ಕಾಂಗ್ರೆಸ್ ನವರು ಏನಾದರು ಕಂಪ್ಲೇಂಟ್ ಕೊಟ್ಟಿದ್ದೀರಾ ಅಥವಾ ಇನ್ಯಾರಾದ್ರೂ ಕೊಟ್ಟಿದ್ದಾರಾ..?, ಅವರ ಜೊತೆಗಿದ್ದವರೇ, ಬೈಗುಳ ತಿಂದವರು ಕಂಪ್ಲೆಂಟ್ ಕೊಟ್ಟಿದ್ದಾರೆ.ಕ್ರಮ ತಗೊಂಡಿಲ್ಲ ಅಂದ್ರೆ ಅದಕ್ಕೂ ಹೇಳ್ತಾರೆ. ನೋಡಿ ಕಂಪ್ಲೆಂಟ್ ಕೊಟ್ಟರೂ ಕ್ರಮ ತಗೊಂಡಿಲ್ಲ ಅಂತಾ ಅದಕ್ಕೂ ಟೀಕೆ ಮಾಡ್ತಾರೆ. ಹಾಗಾಗಿ ಕಾನೂನು ರೀತಿ ಏನು ಕ್ರಮ ತಗೋಬೇಕೋ ಅದನ್ನ ಪೊಲೀಸರು ಮಾಡಿದ್ದಾರೆ ಎಂದು ಹೇಳಿದರು.
