ತುಮಕೂರು | ಬ್ರಾಹ್ಮಣ ಧರ್ಮ ಶೂದ್ರ ಸಮಾಜವನ್ನು ನಿಯಂತ್ರಣದಲ್ಲಿಟ್ಟುಕೊಂಡಿದೆ : ನಟರಾಜು ಬೂದಾಳ್

Date:

Advertisements

ಭಾರತೀಯರೆಲ್ಲಾ ಒಂದೇ.ಅವರ ನಡುವೆ ಭಾಷೆ, ಜಾತಿ, ಧರ್ಮದ ಹೆಸರಿನಲ್ಲಿ ಭಿನ್ನತೆ ಇರಬಾರದು ಎಂಬುದು ನಿಸರ್ಗಕ್ಕೆ ವಿರುದ್ದವಾಗಿದೆ. ಬಹುತ್ವವೇ ಭಾರತದ ನಿಜವಾದ ತಿರುಳು ಎಂದು ಹಿರಿಯ ಚಿಂತಕ ಹಾಗೂ ನಿವೃತ್ತ ಪ್ರಾದ್ಯಾಪಕ ಡಾ.ನಟರಾಜು ಬೂದಾಳ್ ಪ್ರತಿಪಾದಿಸಿದರು.

ತುಮಕೂರು ನಗರದ ಏಂಪ್ರೆಸ್ ಕೆಪಿಎಸ್ ಶಾಲೆಯ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿರುವ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನ ಎರಡನೇ ದಿನದ ವಿಚಾರಗೋಷ್ಠಿಯಲ್ಲಿ ದಲಿತ ಚಳವಳಿಯ ಚಾರಿತ್ರಿಕ ಮಹತ್ವ ಮತ್ತು ವರ್ತಮಾನದ ಸವಾಲುಗಳು ಎಂಬ ವಿಷಯ ಕುರಿತು ಮಾತನಾಡಿದ ಅವರು, ನಿಸರ್ಗ ಹೇಗೆ ಎಲ್ಲಾ ಪ್ರಾಣಿ ಪಕ್ಷಿಗಳಿಗೆ ಅದರದ್ದೇ ಆದ ರೀತಿಯಲ್ಲಿ ಬದುಕಲು ಅವಕಾಶ ನೀಡಿದೆಯೋ, ಅದೇ ರೀತಿ ದೇಶದಲ್ಲಿ ಬದುಕುತ್ತಿರುವ ಎಲ್ಲಾ ಸಮುದಾಯಗಳ ನಡುವೆ ಭಿನ್ನತೆ ಇದೆ.ಅವರ ಆಚಾರ, ವಿಚಾರಗಳು ಬೇರೆ ಬೇರೆಯಾಗಿವೆ.ಎಲ್ಲವೂ ಒಂದೇ ಎಂಬುದು ಪ್ರಕೃತಿಗೆ ವಿರುದ್ದವಾಗಿದೆ ಎಂದರು.

ಪುರಾಣದ ಬಲಿ ಚಕ್ರವರ್ತಿಯ ಪ್ರಕರಣ ಇಂದಿಗೂ ಮುಂದುವರೆದಿದೆ.ಶೇ2.5ರಷ್ಟಿರುವ ಬ್ರಾಹ್ಮಣ ಧರ್ಮ, ಶೇ.97 ರಷ್ಟಿರುವ ಶೂದ್ರ ಸಮಾಜವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದೆ.ಶೂದ್ರ ಸಮಾಜ ತಮ್ಮ ಆಚಾರ,ವಿಚಾರಗಳನ್ನು ಬದಿಗಿರಿಸಿ ನಿಧಾನವಾಗಿ ಬ್ರಾಹ್ಮಣ ಧರ್ಮವನ್ನು ಅನುಸರಿಸಲು ಮುಂದಾಗುತ್ತಿದ್ದೇವೆ. ಮನೆ ಕಟ್ಟುವುದು,ಮಗುವಿನ ಹೆಸರಿಡುವುದು. ಮಗನಿಗೆ ಮದುವೆ ಇಂತಹ ವಿಚಾರಗಳಲ್ಲಿ ಈಗಾಗಲೇ ಹಾಸು ಹೊಕ್ಕಾಗಿದೆ.ಇದನ್ನು ತಿರಸ್ಕರಿಸುವ ಧೈರ್ಯವನ್ನು ವಿದ್ಯಾವಂತ ದಲಿತರು ತೋರುತ್ತಿಲ್ಲ.ಇದು ವಿಪರ್ಯಾಸದ ಸಂಗತಿ. ವೈಜ್ಞಾನಿಕವಾಗಿ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಬೇಕಿದೆ.ಇದೇ ಮುಂದಿರುವ ದೊಡ್ಡ ಸವಾಲು ಎಂದು ಡಾ.ನಟರಾಜ್ ಬೂದಾಳ್ ತಿಳಿಸಿದರು.

Advertisements

ಒಳಮೀಸಲಾತಿ ಸುಪ್ರಿಂಕೋರ್ಟಿನ ತೀರ್ಪು ಮತ್ತು ಸಾಮಾಜಿಕ ನ್ಯಾಯ ಕುರಿತು ಮಾತನಾಡಿದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀಹ, ಪರಿಶಿಷ್ಟರೆಲ್ಲಾ ಒಂದೇ ಎಂಬ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರ ತೀರ್ಪನ್ನು 2024ರ ಆಗಸ್ಟ್ 01ರಂದು ಬಂದ ಸುಪ್ರಿಂಕೋರ್ಟು ತೀರ್ಪ ಒಡೆದು ಹಾಕಿದೆ. ಹೇಗೆ ಪ್ರಕೃತಿಯಲ್ಲಿ ಭಿನ್ನತೆ ಇದೆಯೋ, ಅದೇ ರೀತಿ ಪರಿಶಿಷ್ಟ ಜಾತಿಗಳಲ್ಲಿಯೂ ಭಿನ್ನತೆ ಇದೆ ಎಂಬುದು ಒಪ್ಪಿಕೊಂಡೇ, ಸಾಮಾಜಿಕ ನ್ಯಾಯ ಹಾಗೂ ಸಮಾನ ಪ್ರಾತಿನಿದ್ಯ ಹಾಗೂ ಅದಕ್ಕೆ ಬೇಕಾದ ದತ್ತಾಂಶಗಳೊಂದಿಗೆ ಹೆಜ್ಜೆ ಇಡುವಂತೆ ಸೂಚಿಸಿದೆ.ಸಾಮಾಜಿಕ ನ್ಯಾಯ ವಿಲ್ಲದೆ ಸಮಾನತೆ ಎಂಬುದು ಮರೀಚಿಕೆ. ಹಾಗಾಗಿ ಈ ಎರಡು ವಿಷಯಗಳಲ್ಲಿ ದಸಂಸಕ್ಕೆ ಪ್ರಮುಖವಾಗಿದೆ. ಸಂವಿಧಾನದ ಆಧಾರದಲ್ಲಿ ಸಮಾಜಶಾಸ್ತ್ರೀಯ ವಾಸ್ತವವನ್ನು ಮುಂದಿಟ್ಟುಕೊಂಡು, ಈಗಿರುವ ಎಜೆ ಸದಾಶಿವ ಆಯೋಗದ ವರದಿ ಮತ್ತು ಕಾಂತರಾಜು ಆಯೋಗದ ವರದಿಯನ್ನು ದತ್ತಾಂಶಗಳ ಮೂಲಕ ಒಳಮೀಸಲಾತಿ ಜಾರಿಗೆ ಮುಂದಾಗಬೇಕು. ಒಳಮೀಸಲಾತಿಯನ್ನು ಅನುಮಾನದಿಂದ ನೋಡುತ್ತಿರುವವರು, ಫಲಾನುಭವಿಗಳ ಗುಂಪು, ಹೊಲಯ, ಮಾದಿಗರ ವಿಘಟನೆ ಈ ಎಲ್ಲಾ ಸವಾಲುಗಳ ಮೆಟ್ಟಿನಿಂತು ಒಳಮೀಸಲಾತಿ ಜಾರಿಗೆ ತರಬೇಕಾದ ಸವಾಲು ನಮ್ಮ ಮುಂದಿದೆ ಎಂದರು.

ಗೋಷ್ಠಿಯ ಅಧ್ಯಕ್ಷತೆಯನ್ನು ದಸಂಸ ರಾಜ್ಯ ಸಮಿತಿ ಸದಸ್ಯ ರಮೇಶ್ ಡಾಕುಳಕಿ ವಹಿಸಿದ್ದರು.

ಈ ವಿಚಾರವಾಗಿ ಸಿಂಗದಹಳ್ಳಿ ರಾಜಕುಮಾರ್, ರಂಗನಾಥ್ ಕೆ.ಜೆ.ಎಪ್,ಗುರುಪ್ರಸಾದ್ ಕಂಟಲಗೆರೆ ಸೇರಿದಂತೆ ಹಲವರು ಪ್ರತಿಕ್ರಿಯೆ ನೀಡಿದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X