ತುಮಕೂರು | ಸರ್ಕಾರಿ ಶಾಲೆಗೆ ಕೊಠಡಿ ನಿರ್ಮಿಸಿ ಕೊಡುಗೆ ನೀಡಿದ ಚಿಕ್ಕ ಚಂಗಾವಿ ರೈತ ಸಿ.ಕೆ.ಪ್ರಕಾಶ್ : ಜೂನ್ 5 ರಂದು ಲೋಕಾರ್ಪಣೆ

Date:

Advertisements

 ಕಳೆದ ಅರವತ್ತು ವರ್ಷದ ಇತಿಹಾಸವುಳ್ಳ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚಿಕ್ಕ ಚಂಗಾವಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಅಭಿವೃದ್ದಿ ಪಡಿಸಿ ಸುತ್ತಲಿನ ಏಳು ಗ್ರಾಮದ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಸ್ಥಳೀಯ ರೈತ ಸಿ.ಕೆ.ಪ್ರಕಾಶ್ ತಮ್ಮ ವೈಯಕ್ತಿಕ ವೆಚ್ಚದಿಂದ ನೂತನ ಕಟ್ಟಡ ನಿರ್ಮಾಣ ಮಾಡಿ ಇಲಾಖೆಗೆ ಹಸ್ತಾಂತರಿಸಲು ಜೂನ್ 5 ರಂದು ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಚಿಕ್ಕ ಚಂಗಾವಿ ಸುತ್ತಲಿನ ಗ್ರಾಮಗಳಾದ ಬ್ಯಾಟಪ್ಪನಪಾಳ್ಯ, ಬುಕ್ಕಸಾಗರ, ಅಗ್ರಹಾರ ಹೀಗೆ ಅನೇಕ ಗ್ರಾಮದ ಮಕ್ಕಳು ಶಿಕ್ಷಣಕ್ಕೆ ಈ ಭಾಗದಲ್ಲಿ ಉಳಿದೊಂದು ಶಾಲೆ ಈ ಚಿಕ್ಕ ಚಂಗಾವಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಕೊಠಡಿಯ ಕೊರತೆ ಕಂಡು ಸರ್ಕಾರಿ ಅನುದಾನವನ್ನು ಕಾಯದೆ ತಾವೇ ವೈಯಕ್ತಿಕ ಆಸಕ್ತಿ ವಹಿಸಿ ಸಿ.ಕೆ.ಪ್ರಕಾಶ್ ಸುಮಾರು 15 ಲಕ್ಷ ರೂಗಳನ್ನು ವ್ಯಯ ಮಾಡಿ ಅಚ್ಚುಕಟ್ಟಾದ ನೂತನ ದೊಡ್ಡ ಕೊಠಡಿಯನ್ನು ಸುಸಜ್ಜಿತವಾಗಿ ನಿರ್ಮಿಸಿದರು. ಈಗಾಗಲೇ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ಅಡಿಪಾಯ ಹಾಕಿದ ಈ ಶಾಲೆಯನ್ನು ಉಳಿಸಿ ಬೆಳೆಸುವ ಆಲೋಚನೆಯಲ್ಲಿ ಗ್ರಾಮಸ್ಥರನ್ನು ಸೇರಿಸಿಕೊಂಡು ಕೊಠಡಿ ನಿರ್ಮಿಸಿದ್ದಾರೆ.

1001526952

ರೈತ ಮುಖಂಡ ಹಾಗೂ ಕೊಠಡಿಯ ದಾನಿ ಸಿ.ಕೆ.ಪ್ರಕಾಶ್ ಮಾತನಾಡಿ ನಮ್ಮ ಪೂರ್ವಜರು ಸರ್ಕಾರಿ ಶಾಲೆ ಮಂಜೂರಾತಿಯಾದ ಸಮಯದಲ್ಲಿ ತಕ್ಷಣವೇ ಭೂ ದಾನ ನೀಡಿ ಶಾಲೆಯನ್ನು ಊರಿಗೆ ಸಮೀಪದಲ್ಲೇ ನಿರ್ಮಿಸಲು ಅನುವು ಮಾಡಿದ್ದರು. ವರ್ಷಗಳು ಕಳೆದಂತೆ ಖಾಸಗಿ ಶಾಲೆಗಳ ಅಬ್ಬರಕ್ಕೆ ಸರ್ಕಾರಿ ಶಾಲೆಗಳು ಮುಚ್ಚುವ ಕೆಲಸ ನಡೆಯಿತು. ಈಗಾಗಲೇ ಎರಡು ಶಾಲೆಗಳು ಈ ಭಾಗದಲ್ಲಿ ಮುಚ್ಚಿದ್ದವು. ಉಳಿದ ಚಿಕ್ಕ ಚಂಗಾವಿ ಶಾಲೆಯು ಅದೇ ಪರಿಸ್ಥಿತಿಗೆ ತಲುಪುವ ಮುನ್ನ ನಮ್ಮ ಹಿರಿಯರ ಕನಸಿನ ಶಾಲೆಯನ್ನು ಉಳಿಸಲು ಅವಶ್ಯವಿದ್ದ ಕೊಠಡಿಯನ್ನು ಖುದ್ದು ನಾನೇ ಹಣ ವ್ಯಯ ಮಾಡಿ ಮುಂದೆ ನಿಂತು ಸುಸಜ್ಜಿತವಾಗಿ ನಿರ್ಮಿಸಿ ಇಲಾಖೆಗೆ ನೀಡುತ್ತವೆ. ಈ ನಿಟ್ಟಿನಲ್ಲಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

Advertisements

ಜೂನ್ 5 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿಗಳ ಅಮೃತ ಹಸ್ತದಿಂದ ಲೋಕಾರ್ಪಣೆ ಗೊಳ್ಳಲಿದೆ. ನಂತರ 10.30 ಕ್ಕೆ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ವಹಿಸಲಿದ್ದಾರೆ. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ,ಮಾಜಿ ಶಾಸಕ ಮಸಾಲಾ ಜಯರಾಂ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಓ ಜಿ.ಪ್ರಭು, ಡಿಡಿಪಿಐ ಮನ ಮೋಹನ್, ಡಯಟ್ ಉಪ ನಿರ್ದೇಶಕ ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಸೇರಿದಂತೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸೋಮಶೇಖರ್ ಮಾತನಾಡಿ ಸಣ್ಣ ಗ್ರಾಮದಲ್ಲಿನ ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ದುಡಿಮೆಯ ಲಕ್ಷಾಂತರ ಹಣವನ್ನು ಸರ್ಕಾರಿ ಶಾಲೆಗೆ ಸುರಿದು ಕೊಠಡಿ ನಿರ್ಮಿಸಿಕೊಟ್ಟ ರೈತ ಸಿ.ಕೆ.ಪ್ರಕಾಶ್ ಉದಾರ ದಾನಿಗಳು ಎಂದರೆ ಅತಿಶಯೋಕ್ತಿ ಅಲ್ಲ. ತಮ್ಮ ಹಿರಿಯರು ಭೂ ದಾನ ನೀಡಿ ಶಾಲೆ ನಿರ್ಮಿಸಿದ್ದರು. ಅವರ ಹಾದಿಯಲ್ಲೇ ಮತ್ತೊಮ್ಮೆ ಪ್ರಕಾಶ್ ಅವರು ಗ್ರಾಮೀಣ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಚಿಂತಿಸಿರುವುದು ನಮ್ಮ ಊರಿನ ಸೌಭಾಗ್ಯ. ಅವರ ದಾನ ಧರ್ಮ ಸತ್ಕಾರ್ಯದಲ್ಲಿ ಗ್ರಾಮಸ್ಥರೆಲ್ಲರೂ ಕೈ ಜೋಡಿಸಿ ಬೇರೆ ಊರಿಗೆ ಪ್ರೇರಣೆ ನೀಡೋಣ ಎಂದರು.

ಇದೇ ಸಂದರ್ಭದಲ್ಲಿ ಗ್ರಾಪಂ ಸದಸ್ಯ ದೇವರಾಜ್, ಮಾಜಿ ಅಧ್ಯಕ್ಷ ನಾರಾಯಣ, ಎಸ್ ಡಿಎಂಸಿ ಅಧ್ಯಕ್ಷ ಹರೀಶ್, ಸ್ಥಳೀಯರಾದ ವಿಜಯಕುಮಾರ್, ಶ್ರೀನಿವಾಸಗೌಡ, ಜೆಸಿಬಿ ಮೂರ್ತಿ, ದಿಲೀಪ್, ರಾಘು, ಪುನೀತ್, ಮಂಜಣ್ಣ, ದರ್ಶನ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X