ಜನತೆ ಹಣದಲ್ಲಿ ಕಟ್ಟಿರುವ ಜನರ ರೈಲನ್ನು ಖಾಸಗೀಕರಿಸುವ ನಡೆ ದೇಶ ವಿರೋಧಿಯಾಗಿದೆ. 7-8 ದಶಕಗಳ ಕಾಲ ಜನತೆಯು ಕಟ್ಟಿದ ಸಾರ್ವಜನಿಕ ಉದ್ದಿಮೆಗಳನ್ನು ಮಾರುತ್ತಿರುವ ಬಿಜೆಪಿ ಸರ್ಕಾರವು ದೇಶದ ಲೂಟಿ ಮಾಡುತ್ತಿದೆ ಎಂದು ಸಿಐಟಿಯು ತುಮಕೂರು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಹೇಳಿದರು.
ರೈಲ್ವೆ ಖಾಸಗೀಕರಣದ ವಿರುದ್ಧ ತುಮಕೂರಿನಲ್ಲಿ ಸಿಐಟಿಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಮುಜೀದ್, “70 ವರ್ಷಗಳಲ್ಲಿ ಕಟ್ಟಲಾಗಿರುವ ದೇಶದ ವಿವಿಧ ಅಸ್ತಿಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ. ಇದು ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸುವ ನಡೆಯಾಗಿದೆ” ಎಂದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ಎಸ್.ಡಿ ಪಾರ್ವತಮ್ಮ ಮಾತನಾಡಿ, “ರೈಲ್ವೆಯನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರ ಮಾಡಿ, ಟಿಕೆಟ್ ದರವನ್ನು ಶೇ.43ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧಾರ ಮಾಡಿದೆ. ತನ್ನ ನಿರ್ಧಾರವನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಂಗಧಾಮಯ್ಯ, ಬಿ. ಉಮೇಶ್, ರಪೀಕ್ ಪಾಷ, ಎನ್.ಕೆ.ಸುಬ್ರಮಣ್ಯ, ಕಲೀಲ್, ವೆಂಕಟೇಶ್, ಬೀದಿಬದಿ ವ್ಯಾಪಾರಿಗಳ ಸಂಘದ ರಾಜಶೇಖರ್, ಜಗದೀಶ್. ಮುತ್ತುರಾಜ್, ವಸೀಂ ಅಕ್ರಂ , ಅಟೋ ಚಾಲಕರ ಯೂನಿಯನ್ ನ ಇಂತೀಯಾಜ್ ಪಾಷ, ಹಮಾಲಿ ಕಾರ್ಮಿಕ ಸಂಘ ರಾಮಾಂಜೀನಿ, ಆಂಗನವಾಡಿ ನೌಕರರ ಸಂಘದ ಶಿವಗಂಗಮ್ಮ, ಗೌರಮ್ಮ, ಜಬೀನಾ ಖಾತೋನ್,ಲಕ್ಮಿಕಾಂತ , ಸಮುದಾಯದ ಅಧಕ್ಷ ಅಶ್ವಥ್, ಪಿ.ಎಫ್. ಪಿಂಚಣಿದಾರರು ಬಾಲಕೃಷ್ಣ ಇತರರು ಇದ್ದರು.