ಸೆಂಟರ್ ಆಫ್ ಇಂಡಿಯಾನ್ ಟೇಡ್ ಯೂನಿಯನ್ಸ್ ( ಸಿಐಟಿಯು ) ಕಳೆದ 55 ವರ್ಷಗಳಿಂದ ನಿರಂತರವಾಗಿ ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಗಾಗಿ ಸಂಘಟಿತ – ಅಸಂಘಟಿತ ಕಾರ್ಮಿಕರ ಹಕ್ಕು ಭಾದ್ಯತೆಗಳಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಬಂದಿರುತ್ತದೆ ಮತ್ತು ಮುಂದೆ ಸಹ ಇದಕ್ಕೆ ಕಟಿಬದ್ದವಾಗಿ ದುಡಿಯಲಿದೆ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ತಿಳಿಸಿದರು.
ತುಮಕೂರು ನಗರದ ಜನ ಚಳುವಳಿ ಕೇಂದ್ರದಲ್ಲಿ ಸಿಐಟಿಯು ಸಂಸ್ಥಪನೆಯ 55 ನೇ ವರ್ಷಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಬೇಳೆಯುತ್ತಿರುವ ಅರ್ಥಿಕ – ಸಾಮಾಜಿಕ ಅಸಮಾನತೆಗಳು ಆರೋಗ್ಯಕರ ಸಮಾಜದ ಲಕ್ಷಣವಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಉಮೇಶ್ ಮಾತನಾಡಿ ದುಡಿವ ಜನರ ಹಿತರಕ್ಷಣೆಯನ್ನು ಸರ್ಕಾರಗಳು ಮರೆತು ಉಳ್ಳವರ ಪರ ನೀತಿಗಳನ್ನು ಜಾರಿಮಾಡುತ್ತಿರುವುದನ್ನು ಎಲ್ಲಾ ದುಡಿವ ಜನ ಐಕ್ಯತೆಯಿಂದ ಹಿಮ್ಮೆಟ್ಟಿಸಲು ಅಗತ್ಯ ಪ್ರತಿರೋಧ ಕಟ್ಟುವಲ್ಲಿ ಸಿಐಟಿಯು ಮುಂಚೂಣಿಯಲ್ಲಿದೆ ಎಂದರು.
ಮನೆ ಕೆಲಸಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಪಲ್ಲವಿ ಅವರು ಮಾತನಾಡಿ ಸರ್ಕಾರಗಳು ಮನೆ ಕೆಲಸಗಾರರಿಗೆ ಪಿಂಚಣಿ ಯೋಜನೆ, ಅನಾರೋಗ್ಯ ವೆಚ್ಚ ಭರಿಸು ಯೋಜನೆ, ಮಕ್ಕಳ ಶಿಕ್ಷಣಕ್ಕೆ ಸಹಾಯಕವಾಗುವಂತೆ ವಿಧ್ಯಾರ್ಥಿ ವೇತನಕ್ಕೆ ಸಂಘ ನಡೆಸುವ ಹೋರಾಟಕ್ಕೆ ಕೈ ಜೋಡಿಸುವಂತೆ ಕೊರಿದರು.
ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಂಚಾಲಕಿ ಟಿ.ಆರ್ ಕಲ್ಪನಾ , ಕಟ್ಟಡ ಕಾರ್ಮಿಕ ಸಂಘದ ಕಲೀಲ್.ಸಿಐಟಿಯು ಜಿಲ್ಲಾ ಖಜಾಂಚಿ ಎ . ಲೊಕೇಶ್, ಡಿಸಾ ಕಾರ್ಮಿಕ ಸಂಘ ಷಣ್ಮಖಪ್ಪ, ಪಿ. ಎಫ್ . ಪಿಂಚಣಿದಾರರ ಸಂಘ ಸಂಚಾಲಕ ಟಿ.ಜಿ. ಶಿವಲಿಂಗಯ್ಯ, ಅವರು ಮಾತನಾಡಿದರು.
ಅರಂಭದಲ್ಲಿ ಎನ್. ಕೆ ಸುಬ್ರಮಣ್ಯ ಸ್ವಾಗತಿಸಿ. ಮಧುಸೂದನ್ ವಂದಿಸಿದರು.