ತುಮಕೂರು | ಪರಿಷತ್ ಚುನಾವಣೆ; ಮೈತ್ರಿಗೆ ವಿರೋಧಿ ಅಲೆ, ಕಾಂಗ್ರೆಸ್‌ಗೆ ಗೆಲ್ಲುವ ಸವಾಲು

Date:

Advertisements

ಅಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ರಂಗೇರಿದೆ. ಕಣದಲ್ಲಿರುವ ಅಭ್ಯರ್ಥಿಗಳು ಶಿಕ್ಷಕ ಮತದಾರರನ್ನು ಒಲಿಸಿಕೊಳ್ಳಲು ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಗೆಲುವಿನ ಮಂತ್ರ ಜಪಿಸುತ್ತಿದ್ದಾರೆ.

ಅಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ತುಮಕೂರು, ದಾವಣಗೆರೆ (ಹರಿಹರ, ಜಗಳೂರು) ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಸೇರಿದಂತೆ ಒಟ್ಟು ಐದು ಜಿಲ್ಲೆಗಳ ವ್ಯಾಪ್ತಿಯ 34 ತಾಲೂಕುಗಳು ಸೇರಿವೆ. ಐದು ಜಿಲ್ಲೆಯಿಂದ ಒಟ್ಟು 14679 ಮಂದಿ ಪುರುಷರು, 8,835 ಮಂದಿ ಮಹಿಳೆಯರು ಸೇರಿ ಒಟ್ಟು 23,514 ಮಂದಿ ಮತದಾರರಿದ್ದಾರೆ.

1996ರಲ್ಲಿ ಪಕ್ಷೇತ್ರವಾಗಿ ಪುಟ್ಟಸಿದ್ದ ಶೆಟ್ಟಿ, 2000ದಲ್ಲಿ ಜೆಡಿಯುನಿಂದ ಚನ್ನಬಸವಯ್ಯ, 2017ರ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ರಮೇಶ್ ಬಾಬು, 2006ರಿಂದ 2018ವರೆಗೆ ವೈ ಎ ನಾರಯಣಸ್ವಾಮಿ ಅಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಗೆದಿದ್ದಾರೆ.

Advertisements

ಮೊದಲ ಬಾರಿಗೆ ಪಕ್ಷೇತ್ರರವಾಗಿ ಸ್ಪರ್ಧಿಸಿ ಅಧಿಕಾರದ ಗದ್ದುಗೆ ಏರಿದ್ದ ವೈ ಎ ನಾರಯಣಸ್ವಾಮಿ 18 ವರ್ಷಗಳಿಂದ ಅಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಅವರು ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದ್ದಾರೆ. ಈ ಬಾರಿ ಅವರಿಗೆ ಜೆಡಿಎಸ್ ಬೆಂಬಲ ಇದ್ದರೂ ಗೆಲುವೇನು ಅಷ್ಟು ಸುಲಭವಾಗಿಲ್ಲ.

ರಾಜ್ಯ ಗೊಲ್ಲ ಸಮುದಾಯದ ಅಧ್ಯಕ್ಷ ಡಿ ಟಿ ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಶತಾಯಗತಾಯ ಗೆಲ್ಲುವ ಪಣತೊಟ್ಟಿರುವ ಅವರಿಗೆ ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಪೂರ್ಣಿಮ ಪತಿ ಶ್ರೀನಿವಾಸ್ ಗೆಲುವಿಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರಾದ್ಯಂತ ಸಂಚರಿಸಿ ಮತ ಯಾಚಿಸುತ್ತಿದ್ದಾರೆ. ಕಳೆದ ಅಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದ ಶ್ರೀನಿವಾಸ್‌ಗೆ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ನಿರ್ಣಾಯಕವಾಗಲಿದೆ. ಈ ಅನುಕಂಪ ಮತವಾಗಿ ಬದಲಾದರೆ ಗೆಲುವಿಗೆ ನೆರವಾಗಲಿದೆ.

ವಿರೋಧ ಪಕ್ಷಗಳ ಯಡವಟ್ಟಿನಿಂದ ಈವರೆಗೂ ಸುಲಭವಾಗಿ ಗೆಲುವಿನ ದಡ ಸೇರಿದ್ದ ವೈ ಎ ನಾರಾಯಣಸ್ವಾಮಿಗೆ ಈ ಬಾರಿ ಕ್ಷೇತ್ರ ಕಬ್ಬಿಣದ ಕಡಲೆಯಾಗುತ್ತಿದೆ. ಅಡಳಿತ ವಿರೋಧಿ ಅಲೆ ನಡುಕ ಹುಟ್ಟಿಸಿದೆ. ಸಂವಿಧಾನ ಬದಲಾವಣೆ, ಬಿಜೆಪಿ ಕೋಮು ಧ್ರುವೀಕರಣ ಬಿಜೆಪಿಗೆ ಶಿಕ್ಷಕರ ಚುನಾವಣೆಯಲ್ಲಿ ಮಾಸ್ಟರ್ ಸ್ಟ್ರೋಕ್ ಕೋಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

“ವಿರೋಧ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳಿಲ್ಲದೆ ನಿರಾಯಾಸವಾಗಿ ಗೆಲುವಿನ ನಗೆ ಬೀರಿದ್ದ ನಾರಾಯಣಸ್ವಾಮಿ ಕ್ಷೆತ್ರದಿಂದ ದೂರವಿದ್ದು, ಚುನಾವಣೆ ಹತ್ತಿರ ಬಂದಾಗಷ್ಟೇ ಮತದಾರರ ಬಳಿ ಬರುತ್ತಾರೆʼ ಎಂಬ ಆರೋಪವು ಇದೆ. ಹಾಗಾಗಿ ಹೊಸ ಮುಖಕ್ಕೆ ಅವಕಾಶ ಕೋಡಬೇಕು” ಎಂದು ಶಿಕ್ಷಕರ ವಲಯದಲ್ಲಿ ಚರ್ಚೆಯಾಗತ್ತಿದೆ.

ಅಹಿಂದ ಮತಗಳು ಶಿಕ್ಷಕರ ಕ್ಷೇತ್ರದಲ್ಲೂ ಬಿಜೆಪಿಗೆ ಕೈಕೊಡುವ ಎಲ್ಲ ಲಕ್ಷಣವಿದ್ದು, ಮೈತ್ರಿ ಅಭ್ಯರ್ಥಿಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮತ ಬರುವುದು ಅಷ್ಟು ಸುಲಭವಾಗಿಲ್ಲ. ಪೆನ್‌ಡ್ರೈವ್‌ ಪ್ರಕರಣ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬಿರಬಹುದು ಎಂಬ ಚರ್ಚೆಗಳೂ ಕೂಡಾ ನಡೆಯುತ್ತಿವೆ. ಇದು ಮೈತ್ರಿ ಅಭ್ಯರ್ಥಿಗೆ ಹೊಡೆತ ಕೊಡಲಿದೆ ಎಂದು ಹೇಳಲಾಗುತ್ತಿದೆ. ಶಿಕ್ಷಕ ಸಂಘನೆಗಳ ಒಡಾನಟ ವೈ ಎ ನಾರಾಯಣಸ್ವಾಮಿಯನ್ನು ಗೆಲುವಿನ ದಡ ಸೇರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯಾರ್ಥಿಯಾಗಿ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿದ್ದ ಡಿ ಟಿ ಶ್ರೀನಿವಾಸ್ ಅವರಿಗೆ ಕ್ಷೇತ್ರ ಹೊಸದಲ್ಲ. ಅವರ ಪತ್ನಿ ಪೂರ್ಣಿಮಾ ಕೂಡ ಹಲವು ಕೇತ್ರಗಳಲ್ಲಿ ಹಿಡಿತ ಹೊಂದಿದ್ದಾರೆ. ಅಹಿಂದ ಮತಗಳು, ಕಾಂಗ್ರೆಸ್ ಗ್ಯಾರಂಟಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರ ಬೆಂಬಲ, ಐದು ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರ ಪ್ರಬಾಲ್ಯವಿರುವುದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಿ ಟಿ ಶ್ರೀನಿವಾಸ್ ಗೆಲುವಿನ ಹಾದಿ ಸುಗಮವಾಗಿದೆ ಎನ್ನಲಾಗಿದೆ.

ಹಳೆಪಿಂಚಣಿ ವ್ಯವಸ್ಥೆ, ಏಳನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಿಸಲು ಒತ್ತಡ ಹೇರುವ ಭರವಸೆ ನೀಡಿವ ಜೊತೆಗೆ ನಾರಾಯಣಸ್ವಾಮಿಯವರ ವೈಫಲ್ಯವನ್ನು ಹೇಳಿ ಮತದಾರರ ಮನಗೆಲ್ಲುವ ಸತತ ಪ್ರಯತ್ನ ಮಾಡುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ; ನಿಯಮ ಪಾಲನೆಗೆ ಸಹಾಯವಾಣಿ ಸ್ಥಾಪನೆ

ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಡೆಗಣಿಸುವಂತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ರುಪ್ಸ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ಸೇರಿದಂತೆ 19ಮಂದಿ ಕಣದಲ್ಲಿದ್ದಾರೆ. ಒಂದೇ ಹೆಸರಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಎಷ್ಟು ಫಲಕಾರಿಯಾಗಲಿದೆ ನೋಡಬೇಕಿದೆ.

ಚಿಕ್ಕಬಳ್ಳಾಪುರದಲ್ಲಿ 3,510, ತುಮಕೂರು 7,299, ಕೋಲಾರ 4,142, ಚಿತ್ರದುರ್ಗ 4,615, ದಾವಣಗೆರೆಯಲ್ಲಿ 3,948 ಮಂದಿ ಮತದಾರರು ಸೇರಿದಂತೆ ಒಟ್ಟು 23,514 ಮಂದಿ ಮತದಾರಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X