ತುಮಕೂರು | ಕೊರಟಗೆರೆಯಲ್ಲಿ ದಲಿತರಿಂದ ಮಲ ಸ್ವಚ್ಛಗೊಳಿಸಿದ ಪ್ರಕರಣ: ನಾಲ್ವರ ವಿರುದ್ದ ಎಫ್ಐಆರ್ ದಾಖಲು

Date:

Advertisements

ದಲಿತರಿಂದ ಮಲ ಸ್ವಚ್ಚಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಮಲಹೊರುವ ಪದ್ದತಿ‌ನಿಶೇಧ ಕಾಯ್ದೆ( ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಆಕ್ಟ್ ) ಅಡಿಯಲ್ಲಿ ನಾಲ್ವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ದಲಿತ ಬಾಲಕರನ್ನ ಮಲ ಸ್ವಚ್ಚತೆಗೆ ಕರೆತಂದಿದ್ದ ತುಮಕೂರಿನ ಕೋತಿತೋಪು ನಿವಾಸಿ ಕುಮಾರ್, ಶೌಚಾಲಯದ ಗುತ್ತಿಗೆ ಪಡೆದಿರುವ ನಿಮಿಶಾಂಬ ಎಂಟರ್ ಪ್ರೈಸಸ್ ನ ಸೂಪರ್ ವೈಸರ್ ನಿತೇಶ್, ನಿಮಿಶಾಂಬ ಎಂಟರ್ ಪ್ರೈಸಸ್ ಮಾಲೀಕರಾದ ಶ್ವೇತಾ, ಹಾಗೂ ಕೊರಟಗೆರೆ ಸಾರಿಗೆ ನಿಯಂತ್ರಕ ಸತ್ಯನಾರಾಯಣ ರೇಡ್ಡಿ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಎಫ್ ಐ ಆರ್ ನಲ್ಲಿ ಬಾಲಕಾರ್ಮಿಕ ಕಾಯ್ದೆ ಉಲ್ಲಂಘನೆ ಆಕ್ಟ್ ಹಾಗೂ ಮತ್ತೊರ್ವ ವಯಸ್ಕ ವ್ಯಕ್ತಿಯನ್ನ ಕೈಬಿಡಲಾಗಿದೆ. ಜೊತೆಗೆ ಎಫ್ ಐ ಆರ್ ನ ವಿವರಣೆಯಲ್ಲಿ ಬಾಲಕನಿಂದ ಬರಿಗೈಯಲ್ಲಿ ಸ್ವಚ್ಚತೆ ಮಾಡಿಸಿಲಾಗಿದೆ ಎಂದಷ್ಟೇ ಇದ್ದು ಶೌಚಾಲಯದ ಮಲದ ಗುಂಡಿಯ ಬಗ್ಗೆ ಉಲ್ಲೇಖಿಸದೆ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ. ಅಲ್ಲದೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಾಧ್ಯಮ ಸ್ಪಷ್ಟೀಕರಣ ದಲ್ಲಿ ದಲಿತ ವ್ಯಕ್ತಿಗೆ ಮಾನಸಿಕ ಅಸ್ವಸ್ಥ ಎಂದು ಅಮಾನಸಿದ್ದರ ಬಗ್ಗೆ ದೂರು ದಾಖಲಿಸಬೇಕಿತ್ತು ಆದರೆ ಇದೆಲ್ಲವನ್ನೂ ಎಫ್ ಐ ಆರ್ ನಲ್ಲಿ ಮರೆಮಚಲಾಗಿದೆ ಎಂದು ದಲಿತ ಮುಖಂಡ ದಾಡಿ ವೆಂಕಟೇಶ್ ಹಾಗೂ ಜಟ್ಟಿ ಅಗ್ರಹಾರ ನಾಗರಾಜು ಅಸಮಧಾನ ವ್ಯಕ್ತ ಪಡಿಸಿದ್ದಾರೆ.

Advertisements

ನವೆಂಬರ್ 06 ರಂದು ಕೊರಟಗೆರೆ ಕೆಎಸ್ಆರ್ಟಿಸಿ ಬಸ್‌ನಿಲ್ದಾಣದಲ್ಲಿ ಸಾಋವಜನಿಕ ಶೌಚಾಲಯದ ಪಿಟ್ ತುಂಬಿ ಹೊರಗೆ ಹರಿದಿದ್ದ ಮಲವನ್ನ ದಲಿತ ಬಾಲಕಾರ್ಮಿಕ ಹಾಗೂ ವಯಸ್ಕ ವ್ಯಕ್ತಿಯಿಂದ ಸ್ವಚ್ಚಗೊಳಿಸಿದ್ದರು. ಈ ಬಗ್ಗೆ ವಿಜಯವಾರ್ತೆಯಲ್ಲಿ ದೃಷ್ಯ ಸಮೇತ ವರದಿಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ‌ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಸೂಚನೆ ಮರೆಗೆ ಸಫಾಯಿ ಕರ್ಮಾಚಾರಿ ಆಯೋಗದಿಂದ ತುಮಕೂರು‌ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿತ್ತು.

ಬಳಿಕ ಜಿಲ್ಲಾಧಿಕಾರಿ ಶುಭಾಕಲ್ಯಾಣ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಪಪ್ಪ, ತಹಶಿಲ್ದಾರ್ ಮಂಜುನಾಥ್ ಕೊರಟಗೆರೆ ಬಸ್ ನಿಲ್ದಾಣಕ್ಕೆ ಭೇಟಿ‌ನೀಡಿ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಜಂಟಿ ನಿರ್ದೇಶಕ ಕೃಷ್ಣಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ ಶೌಚಾಲಯದ ಗುಂಡಿ ತುಂಬಿ ಹರಿದಿರುವುದು ಕಂಡು ಬಂದಿದೆ ಎಂದಿದ್ದರು. ಬಳಿಕ ಮಧುಗಿರಿ ಉಪವಿಭಾಗಧಿಕಾರಿ ನೇತೃತ್ವದಲ್ಲಿ ತನಿಖಾ ಸಮೀತಿ ರಚನೆ ಮಾಡಿ ತನಿಖಾ ವರದಿ ನೀಡಿದ ಬಳಿಕ ಶನಿವಾರ ಸಂಜೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕಂದಾಯ ಇಲಾಖೆಯಿಂದ ದೂರು ನೀಡಿ ನಾಲ್ವರ ವಿರುದ್ದ ಎಫ್ ಐ ಆರ್ ದಾಖಲಿಸಲಾಗಿದೆ.

ಶೌಚಗುಂಡಿ ಸ್ವಚ್ಚಗೊಳಿಸುವಂತೆ ಹಲವು 2023 ರಿಂದಲೂ ಕೆಎಸ್ ಆರ್ ಟಿಸಿಗೆ ನೋಟೀಸ್.

ಶೌಚಾಲಯದ ಗುಂಡಿ‌ ತುಂಬಿ ಹರಿದಿರುವ ಬಗ್ಗೆ ಸ್ಪಷ್ಟೀಕರಣ ನೀಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಕೆಎಸ್ ಆರ್ ಟಿಸಿ ಅಧಿಕಾರಿಗಳ ನಿಜಬಣ್ಣ ಬಯಲಾಗಿದೆ. ಶೌಚಾಲಯದ ಗುಂಡಿ ತುಂಬಿ ಹರಿಯುವ ನೀರನ್ನ ಪೈಪ್ ಮೂಲಕ ಚರಂಡಿಗೆ ಹರಿಬಿಡಲಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಕೂಡಲೇ ಪಿಟ್ ಸ್ವಚ್ಚಗೊಳಿಸುವಂತೆ 2023 ನವೆಂಬರ್ 11 ರಂದು ಪಟ್ಟಣ ಪಂಚಾಯಿತಿಯಿಂದ ‌ಕೆಎಸ್ ಆರ್ ಟಿಸಿ ಅಧಿಕಾರಿಗಳಿಗೆ ನೋಟೀಸ್ ನೀಡಿದೆ. ಆದರೆ ಈವರೆಗೂ ಸ್ವಚ್ಚಮಾಡದೆ ನಿರ್ಲಕ್ಷ್ಯ ಮಾಡಿದ್ದರಿಂದ ಅಕ್ಟೋಬರ್ 24, 2024 ರಂದು ಮತ್ತೆ ನೋಟೀಸ್ ನೀಡಿರುವುದು ಬೆಳಕಿಗೆ ಬಂದಿದೆ. ಇಷ್ಟಾದರೂ ಕೆ ಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಪ್ರಕರಣವನ್ನ ಮುಚ್ಚಿಹಾಕಲು ಯತ್ನಿಸಿರುವುದು ಪಟ್ಟಣ ಪಂಚಾಯಿತಿ ನೊಟೀಸ್ ಗಳಲ್ಲೇ ಜಗಜ್ಜಾಹೀರಾಗಿದೆ.

ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿನಿಧಿಸುವ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ದಲಿತ ಬಾಲಕ ಹಾಗೂ ವಯಸ್ಕ ವ್ಯಕ್ತಿಯಿಂದ ಬರಿಗೈಲಿ ಮಲ ಸ್ವಚ್ಚಗೊಳಿಸಿದ ಪ್ರಕರಣ ಇಡೀ ನಾಗರೀಕ ಸಮಾಜವನ್ನೆ ತಲೆ ತಗ್ಗಿಸುವಂತೆ ಮಾಡಿದೆ. ಈ ಪ್ರಕರಣ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಕೆಲ ಅಧಿಕಾರಿಗಳು ಮುಚ್ಚಿಹಾಕಲು ಎಷ್ಟೇ ‌ಪ್ರಯತ್ನಿಸಿದರು ಸಂವಿಧಾನ ಹಾಗೂ ಕಾನೂನಿನ ಮುಂದೆ ಸಾಧ್ಯವಾಗಿಲ್ಲ. ಇಂತಹ ಪ್ರಕರಣಗಳನ್ನ ಸ್ವಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಮಾನವೀಯತೆಯಿಂದ ಯೋಚಿಸಿ ಅನಿಷ್ಠ ಪದ್ದತಿಯ ನಿರ್ಮೂಲಗೆ ಎಲ್ಲರೂ ಕೈಜೋಡಿಸುವ ಕೆಲಸವಾಗಬೇಕಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X