ತುಮಕೂರು | ಊಹೆ ಸಾಹಿತ್ಯಕ್ಕೆ ಜನಮನ್ನಣೆ ಸಿಗುವುದಿಲ್ಲ : ಸಹಕಾರ ಸಚಿವ ಕೆ ಎನ್ ರಾಜಣ್ಣ

Date:

Advertisements

ಊಹೆಯ ಸಾಹಿತ್ಯಕ್ಕೆ ಎಂದಿಗೂ ಜನಮನ್ನಣೆ ಸಿಗುವುದಿಲ್ಲ. ಆದರೆ ಅನುಭವದ ಸಾಹಿತ್ಯ ಜನಸಾಮಾನ್ಯರ ಅಂತಃಕರಣವನ್ನು ತಟ್ಟುತ್ತದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

 ವೀಚಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ತುಮಕೂರು ನಗರದ ರವೀಂದ್ರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ 2024ರ ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು, ಇಂದು ಎಲ್ಲರೂ ಮೊಬೈಲ್ ಲೋಕದಲ್ಲಿ ಮುಳುಗಿದ್ದು, ಪ್ರಯಾಣದ ವೇಳೆ ಪಕ್ಕದಲ್ಲಿ ಕೂತಿರುವವರು ಯಾರು ಎಂದು ಅರಿಯದಿರುವುದಷ್ಟು ಮಾನವ ಸಂಬಂಧಗಳು ಶಿಥಿಲವಾಗುತ್ತಿದೆ. ಯುವ ಪೀಳಿಗೆಯಲ್ಲಿ ಸಾಹಿತ್ಯ, ಸಂಸ್ಕೃತಿ, ಕಲಾ ಪ್ರಕಾರಗಳ ಅಭಿರುಚಿ ಕಡಿಮೆಯಾಗುತ್ತಿದ್ದು, ಇಂತಹ ಸಾಹಿತ್ಯ ಕಾರ್ಯಕ್ರಮ, ಗೋಷ್ಠಿ ಕಾರ್ಯಗಾರಗಳು ಹೆಚ್ಚೆಚ್ಚು ನಡೆಯುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಮಾತೃಭಾಷೆಗೆ ಅಪಚಾರವಾದಾಗ ಸಿಡಿದೇಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದ ಸಚಿವ ಕೆಎನ್‌ಆರ್ ಅವರು ವೀಚಿ ಅವರು ಕೃಷಿ, ರಾಜಕೀಯ, ಸಾಹಿತ್ಯ ಮೂರು ಪ್ರಕಾರದಲ್ಲಿ ಹೆಸರುಮಾಡಿದವರು. ಎಚ್.ಜಿ.ಸುಡ್ಡಗುಡ್ಡಯ್ಯ, ಕೆ.ಆರ್.ನಾಯಕರು, ವೀಚಿ, ಲೋಹಿತಾಶ್ವ ಅವರೆಲ್ಲ ಒಟ್ಟಾಗಿ ಸೇರುತ್ತಿದ್ದವರು. ಸಾಹಿತ್ಯ ಪುಸ್ತಕಗಳ ಓದು, ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದರಿಂದ ಹೊಸ ಚಿಂತನೆ, ಜ್ಞಾನದ ಅರಿವನ್ನು ಬೆಳೆಸಿಕೊಳ್ಳಬಹುದು. ವೀಚಿ ಪ್ರಶಸ್ತಿಗೆ ಆಯ್ಕೆಯಾದ ಕಾದಂಬರಿಗಾರ್ತಿ ಪಿ.ಚಂದ್ರಿಕಾ ಅವರ ಮೂವರು ಮಹಮದರು ಕೃತಿ, ಯುವ ಕವಿ ಡಾ.ಗೋವಿಂದರಾಜು ಎಂ.ಕಲ್ಲೂರು ಅವರ ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು ಕೃತಿ ಮುಂದುವರಿದ ಹೊಸ ಆಲೋಚನೆಗಳಿಗೆ ಸಾಕ್ಷಿಯಾಗಿದೆ ಎಂದರು.

Advertisements

 ಪ್ರಶಸ್ತಿ ಪುರಸ್ಕೃತರೆಲ್ಲರನ್ನೂ ಅಭಿನಂದಿಸಿ ವೀಚಿ ಸಾಹಿತ್ಯ ಪ್ರತಿಷ್ಠಾನ ಮುಂದಿನ ವರ್ಷ ನಡೆಸಲಿರುವ ರಜತ ಕಾರ್ಯಕ್ರಮ ಬೃಹತ್ ಪ್ರಮಾಣದಲ್ಲಿ ನಾವೆಲ್ಲರೂ ಸೇರಿ ನಡೆಸೋಣ ಎಂದು ಆಶಿಸಿದರು.

ಆಶಯ ನುಡಿಗಳನ್ನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವೀಚಿ ಅವರು ಕೃಷಿ, ಸಾಹಿತ್ಯ ಎರಡರಲ್ಲೂ ಬದ್ಧತೆಯಿಂದ ಗುರುತಿಸಿಕೊಳ್ಳುವ ಮೂಲಕ ಲೋಕದರ್ಶನ ಮಾಡಿಸಿದವರು. ಇಂದು ಸರ್ಕಾರಗಳಿಂದಲೆ ಭೂದಾಹ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ.ಭೂಸ್ವಾಧೀನ ಪಡಿಸಿಕೊಂಡ ಭೂಮಿಯೇ ಶೇ.60ರಷ್ಟು ಪಾಳು ಬಿದ್ದಿರುವಾಗ ರೈತರಿಗೆ ತೊಂದರೆ ನೀಡಿ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ಸರಿಯಿಲ್ಲ. ಇಂದು ರಾಜಕೀಯ ಕ್ಷೇತ್ರ ಮಾತ್ರವಲ್ಲ ಸಾಹಿತ್ಯ ಕ್ಷೇತ್ರವೂ ದುರ್ಬಲಗೊಂಡಂತೆ ಭಾಸವಾಗುತ್ತಿದೆ. ಪ್ರಭುತ್ವದ ಅನ್ಯಾಯದ ವಿರುದ್ಧ ಧ್ವನಿಎತ್ತುವ ಸಾಹಿತಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಹೇಳಿ ಉತ್ತಮ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆಮಾಡಿಕೊಟ್ಟ ತೀರ್ಪುಗಾರರನ್ನು, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

ಶುದ್ಧ ಮನಸ್ಸಿಗೆ ಸಗಣಿ ಎರಚುವವರ ಬಗ್ಗೆ ಎಚ್ಚರದಿಂದಿರಿ: ಅಭಿನಂದನಾ ನುಡಿಗಳನ್ನಾಡಿದ ಸಾಹಿತಿ ಡಾ.ಬಸವರಾಜ ಸಾದರ ಅವರು ಪ್ರಶಸ್ತಿಗಳನ್ನು ಕೊಡುವವರು, ಪಡೆದುಕೊಳ್ಳುವವರ ನಡುವೆ ಪ್ರತಿಷ್ಠೆಯಂತಾಗಿರುವ ಈ ಸಂದರ್ಭದಲ್ಲಿ ಸಾಹಿತ್ಯ ಕೃತಿಗಳನ್ನು ನಿಷ್ಪಕ್ಷಪಾತವಾಗಿ ಆಯ್ಕೆಮಾಡುವ ವೀಚಿ ಪ್ರತಿಷ್ಠಾನದ ಪುರಸ್ಕಾರಗಳು ಹೆಚ್ಚು ಮೌಲ್ಯಯುತವಾದವು. ಪ್ರಶಸ್ತಿಗೆ ಆಯ್ಕೆಯಾದ ಪಿ.ಚಂದ್ರಿಕಾ ಅವರ ಮೂವರು ಮಹಮದರು, ಡಾಗೋವಿಂದರಾಜ ಅವರ ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು ಕೃತಿಯನ್ನು ಅವಲೋಕಿಸಿದಾಗ ಕಟ್ಟುವ, ಬೆಸೆಯುವ ಸಂಗತಿಗಳನ್ನು ಹೆಚ್ಚು ಕಾಣಬಹುದಾಗಿದೆ. ಬರಹಗಾರರು ಸಮಸ್ಥಿತಿಯನ್ನು ರೂಢಿಸಿಕೊಳ್ಳಬೇಕು. ಪರಿಶುದ್ಧ ಮನಸ್ಸುಗಳಿಗೆ ಸರಣಿ ಎರಚುವವರ ಬಗ್ಗೆ ಎಚ್ಚರದಿಂದಿರಬೇಕು ಎಂದರು.ಪ್ರಶಸ್ತಿ ಆಯ್ಕೆ ತೀರ್ಪುಗಾರರಾದ ಕತೆಗಾರ ತುಂಬಾಡಿರಾಮಯ್ಯ ಹಾಗೂ ಡಾ.ಬೇಲೂರು ರಘುನಂದನ ಮಾತನಾಡಿ, 2ಕೃತಿಗಳು ಶ್ರೇಷ್ಠತೆಯ ವ್ಯಸನವನ್ನು ಬದಿಗೆ ಸರಿಸಿ ಅಂತಃಕರಣವನ್ನು ಸಾರುತ್ತಿವೆಯೆಂದರು. 

ಪ್ರಶಸ್ತಿ ಸ್ವೀಕರಿಸಿದ ಪಿ.ಚಂದ್ರಿಕಾ ಮಾತನಾಡಿ ಸಾಂಪ್ರದಾಯಿಕ ಬ್ರಾಹ್ಮಣ ಮನೆತನದಿಂದ ಬಂದ ನಾನು ನನ್ನ ಸುತ್ತಲಿನ ಸಂಗತಿಗಳನ್ನು ಅವಲೋಕಿಸಿದಾಗ ಎಲ್ಲಾ ಧರ್ಮಗಳು ಆಳದಲ್ಲಿ ಒಳಿತನ್ನೇ ಬಯಸುತ್ತವೆ ಎಂಬುದು. ಇದು ನನ್ನ ಮೂವರು ಮಹಮದರು ಕೃತಿಯಲ್ಲಿ ಹಾಸುಹೊಕ್ಕಾಗಿದೆ ಎಂದು ಹೇಳಿ ಪ್ರಶಸ್ತಿ ಆಯ್ಕೆಗೆ ಧನ್ಯವಾದ ಅರ್ಪಿಸಿದರು. ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿಎಂ.ಬಸವಯ್ಯ ಅವರು ಗಾಂಧಿ ತತ್ವದ ಅವಶ್ಯಕತೆಯನ್ನು ಒತ್ತಿಹೇಳಿದರು. 

ಕೆಎನ್‌ಆರ್ ಸಚಿವರಷ್ಟೇ ಅಲ್ಲ, ಗಂಭೀರ ಓದುಗರು ಹೌದು: ವೀಚಿ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಸ್.ನಾಗಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಎನ್‌ಆರ್ ಅವರು ಕೇವಲ ರಾಜಕಾರಣಿಯಷ್ಟೇ ಅಲ್ಲ. ಓರ್ವ ಗಂಭೀರ ಪುಸ್ತಕ ಓದುಗರು ಸಹ ಹೌದು. ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ ನೆರವೇರಿಸಿದ ಸಚಿವರು ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದಾರೆ.

ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಎಂ.ಎಚ್.ನಾಗರಾಜು ಇತರರು ವೀಚಿ ಸಾಹಿತ್ಯ ಪ್ರತಿಷ್ಠಾನದಡಿ ರಚನಾತ್ಮಕ ಕಾರ್ಯಕ್ರಮಗಳು ನಡೆಯಲು ಸಹಕರಿಸುತ್ತಿರುವ ಜೊತೆಗೆ ನಿಷ್ಪಕ್ಷಪಾತವಾದ ಆಯ್ಕೆಗೆ ಸಹಕಾರ ನೀಡುತ್ತಿದ್ದಾರೆ. ವೀಚಿ ಅವರ ಇಡೀ ಕುಟುಂಬ ಸದಸ್ಯರ ಸಹಕಾರ, ಸಕ್ರಿಯ ಭಾಗವಹಿಸುವಿಕೆ ಪ್ರತಿಷ್ಠಾಪನಕ್ಕೆ ಸ್ಪೂರ್ತಿತಂದಿದೆಯೆಂದು ಹೇಳಿ ಎಲ್ಲಾ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿದರು. 

ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎಚ್.ನಾಗರಾಜ್, ಡಾ.ಹನುಮಂತೇಗೌಡ ಪ್ರತಿಷ್ಠಾನದ ಪ್ರಮುಖರಿದ್ದರು.

ಇದೇ ವೇಳೆ ಪಿ.ಚಂದ್ರಿಕಾ ಅವರಿಗೆ ವೀಚಿ ಸಾಹಿತ್ಯ ಪ್ರಶಸ್ತಿ , ಡಾ.ಗೋವಿಂದರಾಯ ಎಂ.ಕಲ್ಲೂರು ಅವರಿಗೆ ವೀಚಿ ಯುವ ಸಾಹಿತ್ಯ ಪ್ರಶಸ್ತಿ ,ತತ್ಪಪದ ಗಾಯಕ ಜಯರಾಮಯ್ಯ ದುಗ್ಗೇನಹಳ್ಳಿ ಅವರಿಗೆ ವೀಚಿ ಚನಪದ ಪ್ರಶಸ್ತಿ , ಸಾಮಾಜಿಕ ಕಾರ್ಯಕರ್ತೆ ತಾಹೆರಾ ಕುಲ್ಸುಮ್ ಅವರಿಗೆ ವೀಚಿ ಕನಕ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X