ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು, ಶೋರೂಂನಲ್ಲಿದ್ದಂತಹ ಬೈಕ್, ಕಂಪ್ಯೂಟರ್‌ಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ತುರುವೇಕೆರೆ ಪಟ್ಟಣದ ವೈ ಟಿ ರಸ್ತೆಯಲ್ಲಿನ ಜೆಮೊಪೈ ಎಂಬ ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಸೋಮವಾರ ಸಂಜೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್‌ಗಳು ಸುಟ್ಟು ಕರಕಲಾಗಿವೆ.
ತಾಲೂಕಿನ ಅರಳಿಕೆರೆ ಗ್ರಾಮದ ಮೋಹನ್‌ಗೆ ಸೇರಿದ ಬೈಕ್ ಶೋ ರೂಂನಲ್ಲಿ ಕಾಣಿಸಿಕೊಂಡ ಬೆಂಕಿಗೆ ಆಹುತಿಯಾದ ಎರಡು ಬೈಕ್‌ಗಳು ಸುಟ್ಟು ಕರಕಲಾಗಿದ್ದರೆ, ಉಳಿದ ಬೈಕ್‌ಗಳು ಬೆಂಕಿಗೆ ಹಾನಿಯಾಗಿವೆ.
ಶೋ ರೂಂನ ಕೆಲಸಗಾರರು ಹಳೆಯ ಬ್ಯಾಟರಿ ಚಾರ್ಜಿಗೆ ಹಾಕಿ ಹೊರಗೆ ಹೋಗಿದ್ದರು. ಬ್ಯಾಟರಿ ಸಿಡಿದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಇಡೀ ಶೋ ರೂಂ ಸೇರಿ ಅಕ್ಕ-ಪಕ್ಕದ ಪ್ರದೇಶದಲ್ಲಿಯೂ ದಟ್ಟ ಹೊಗೆ ಆವರಿಸಿತ್ತು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ‘ಬಹುಸಂಸ್ಕೃತಿ ಉತ್ಸವ’ ಮುಂದೂಡಿಕೆ
ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಶೋ ರೂಂ ಸಿಬ್ಬಂದಿಯ ಸಹಕಾರದಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.