ತುಮಕೂರು ನಗರದ ಹೃದಯ ಭಾಗದಲ್ಲಿನ ಮಂಡಿಪೇಟೆಯ ನೇತಾಜಿ ಟ್ರೇಡರ್ಸ್‌ಗೆ ಆಕಸ್ಮಿಕ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿರುವ ಬೆಂಕಿಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಅವರಿಸಿದೆ.
ನೇತಾಜಿ ಟ್ರೇಡರ್ಸ್‌ನ ಗೋದಾಮಿನಲ್ಲಿ ಪಟಾಕಿ, ಗ್ರಂಧಿಗೆ ಅಂಗಡಿಗೆ ಸಂಬಂಧಿಸಿದ ವಸ್ತುಗಳು,
ಪ್ಲಾಸ್ಟಿಕ್ ವಸ್ತುಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ರಾಮಕೃಷ್ಣ ಎನ್ನುವವರಿಗೆ ಸೇರಿದ ನೇತಾಜಿ ಟ್ರೇಡರ್ಸ್ ಮಳಿಗೆ ಎಂದು ಗೋತ್ತಾಗಿದೆ.

ಸೋಮವಾರ ಮುಂಜಾನೆ 6 ಗಂಟೆಗೆ ಕಾಣಿಸಿಕೊಂಡ ಬೆಂಕಿ, 9 ಗಂಟೆ ಆದ್ರೂ ಬೆಂಕಿ ನಂದಿಸಲಾಗಿಲ್ಲ.
ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಯವರು ಹರಸಾಹಸ ಪಟ್ಟರು. ಪಟಾಕಿ ಶೇಖರಣೆಯ ಪರಿಣಾಮ ಬೆಂಕಿಗೆ ನಿರಂತರವಾಗಿ ಪಟಾಕಿಗಳು ಸಿಡಿಯುತ್ತಿವೆ. ನಿರಂತರವಾಗಿ ಸಿಡಿಯುತ್ತಿರುವ ಪಟಾಕಿಯಿಂದಾಗಿ ಅಕ್ಕ-ಪಕ್ಕದ ನಿವಾಸಿಗಳಲ್ಲಿ ಆತಂಕ ಎದುರಾಗಿದೆ. ವಾಹನ ಸವಾರರನ್ನು ತಡೆಗಟ್ಟಿ ಬೆಂಕಿ ನಂದಿಸಲು ನಗರ ಠಾಣೆ ಪೊಲೀಸರು ಸಹಕಾರ ನೀಡುತ್ತಿದ್ದಾರೆ.
ಮಂಡಿಪೇಟೆ ರಸ್ತೆಯ ಎರಡೂ ಬದಿಯ ವಾಹನ ಸಂಚಾರವನ್ನು ತಕ್ಷಣಕ್ಕೆ ಸ್ಥಗಿತಗೊಳಿಸಲಾಗಿದೆ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
