ಅಡಕೆ ತೋಟದಲ್ಲಿರುವ 220 ಅಡಕೆ ಮರಗಳ ಪೈಕಿ ಸುಮಾರು 25 ಕ್ವಿಂಟಲ್‌ಗಳಷ್ಟು ಅಡಕೆ ಗೊನೆಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಿಸಿದ್ದ ಕೆಎ- 13, ಸಿ-5531 ನೇ ನಂಬರಿನ ಟಾಟಾ ಎಸಿಇ ವಾಹನ ಮತ್ತು ₹6000 ನಗದು ವಶಪಡಿಸಿಕೊಂಡಿದ್ದಾರೆ.
ಕುಣಿಗಲ್ ತಾಲೂಕು ಹನುಮಾಪುರದ ರೈತ ಯೋಗೀಶ್ ಅವರ ಬೇಗೂರು ತೋಟದಲ್ಲಿ ಹಸಿ ಅಡಕೆ ಕಳ್ಳತನ ಮಾಡಿದ್ದರು. ಬಂಧಿತ ಆರೋಪಿಗಳ ವಿರುದ್ಧ ಕುಣಿಗಲ್ ಠಾಣೆಯಲ್ಲಿ ಒಂದು ಹಾಗೂ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಒಂದು ಅಪರಾಧ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಗದಗ | ಬರಪರಿಹಾರ ಹಾಗೂ ಇತರ ಬೇಡಿಕೆ ಈಡೇರಿಕೆಗೆ ಆಗ್ರಹ
ಮಂಡ್ಯ ತಾಲೂಕಿನ ಕಲ್ಲಳ್ಳಿಯ ರವಿ (58), ಕೆ ಆರ್ ಅಭಿಜಿತ್ (25), ಕೆ ಆರ್ ಅಭಿಷೇಕ್ (25), ಬೆಟ್ಟಹಳ್ಳಿಯ ಬಿ ಕೆ ಮಂಜುನಾಥ (27) ಹಾಗೂ ಜಿ ಮಲ್ಲಿಗೆರೆಯ ಎಂ ಕೆ ಮನು (25) ಬಂಧಿತ ಆರೋಪಿಗಳು.