ತುಮಕೂರು | ಆಧುನಿಕತೆಯ ಹಾವಳಿಯಲ್ಲಿ ಜಾನಪದ ಸೌಂದರ್ಯ ನಲುಗಿಹೋಗಿದೆ : ಡಾ.ಗೊ.ರು. ಚನ್ನಬಸಪ್ಪ

Date:

Advertisements

ಕಾಲದ ಧೂಳಿನಿಂದ, ಆಧುನಿಕತೆಯ ಹಾವಳಿಯಲ್ಲಿ ಜಾನಪದ ಸೌಂದರ್ಯ ನಲುಗಿಹೋಗಿದೆ. ನಗರದಲ್ಲಿ ಕೂತು ಜಾನಪದ ಸೌಂದರ್ಯವನ್ನು ಸವಿಯಲು ಸಾಧ್ಯವಿಲ್ಲ. ಕೇಂದ್ರೀಕೃತ ಮನಸ್ಸಿನಿಂದ ಜಾನಪದ ಸಾಹಿತ್ಯವನ್ನು ಕಲಿಯಬಹುದು ಎಂದು ಹಿರಿಯ ಸಾಹಿತಿ ಹಾಗೂ 87ನೆಯ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ಗೊ.ರು. ಚನ್ನಬಸಪ್ಪ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗವು ಕರ್ನಾಟಕ ಸಾಹಿತ್ಯಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ಚಕೋರ’ ಸಾಹಿತ್ಯ ವಿಚಾರ ವೇದಿಕೆಯನ್ನು ಉದ್ಘಾಟಿಸಿ ‘ಕನ್ನಡಜಾನಪದ ಸಂಸ್ಕೃತಿ’ ಕುರಿತುಮಾತನಾಡಿದರು.

ಮನಸ್ಸಿನ ಚಾಂಚಲ್ಯದಿಂದಜಾನಪದ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಷಾದನೀಯ.ಅರಿವನ್ನು ಸೇವಿಸಿ ಬದುಕಬೇಕೆಂಬುದು ಈಗಿನ ಯುವ ಸಮೂಹಕ್ಕೆ ತಿಳಿಯದ ವಿಷಯವಾಗಿದೆ.ಜಾನಪದರುಅನುಕರಣೆಯಿಂದ ಸಂಸ್ಕೃತಿಗೆ ಸತ್ವತಂದುಕೊಟ್ಟವರಲ್ಲ. ಅದೊಂದು ಸಹಜ ಹೂವಿನ ರೀತಿ. ಜಾನಪದವೇ ಬಹುದೊಡ್ಡ ಸಂಸ್ಕೃತಿ ಎಂದು ತಿಳಿಸಿದರು.

Advertisements
1000747613

ಜಾನಪದವೆಂದರೆ ಸಮಾನತೆ, ಗೌರವ, ಪರಿಸರ ಕಾಳಜಿ, ಪ್ರೇಮ, ಸಂಬಂಧ, ಮೌಲ್ಯ, ನೈತಿಕತೆ. ಜಾನಪದ ಸಾಹಿತ್ಯದ ವಯಸ್ಸನ್ನು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಜಾನಪದ ಸಾಹಿತ್ಯವುಅನಕ್ಷರಸ್ತರಿಂದ ಸೃಷ್ಟಿಯಾದದ್ದು. ಜಾನಪದರು ಹುಟ್ಟು ಸಾವಿನ ಹಂಗಿಲ್ಲದೆ ಭೂತಾಯಿಯನ್ನು ನಂಬಿ ಬದುಕಿದವರು. ಜಾನಪದರುದೇವರನ್ನುಆಡುಪದಗಳಿಂದ ಏಳಿಸುವ ಶಕ್ತಿ ಹೊಂದಿದವರು ಎಂದರು.

ಕರ್ನಾಟಕ ಸಾಹಿತ್ಯಅಕಾಡೆಮಿಯ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಮಾತನಾಡಿ  ‘ಕನ್ನಡ ಸಾಹಿತ್ಯ ಪರಂಪರೆ’ ಕುರಿತು ಮಾತನಾಡುತ್ತ, ಕನ್ನಡದ ಹಲವು ಮಹಾ ಕಾವ್ಯಗಳನ್ನು ಅನಕ್ಷರಸ್ತದಲಿತ ಹೆಣ್ಣುಮಕ್ಕಳು ಕಟ್ಟಿದರು.ನಮ್ಮನ್ನು ಆಳಿದವರು ಜಾನಪದರ ಕಾವ್ಯಗಳನ್ನು ಜನರಿಗೆತಲುಪದರೀತಿನೋಡಿಕೊಂಡರು. ವಯೋಮಾನದ ಹಂಗಿಲ್ಲದಜಾನಪದ ಸಾಹಿತ್ಯದಲ್ಲಿ ನೋವು, ಸಂಕಟ, ಸಂತಾಪ, ಸಂತೋಷವಿದೆ ಎಂದು ತಿಳಿಸಿದರು.

1000747610

ಕವಿಯಾಗಲು ದೈವ ಕೃಪೆ ಬೇಕಿಲ್ಲವೆಂದು ಜಾನಪದರು ತಿಳಿಸಿಕೊಟ್ಟರು.ಕನ್ನಡ ಸಾಹಿತ್ಯ ಪರಂಪರೆಯಬಸವ ಶರಣರು, ದಾಸರು, ಜಾನಪದರುಸಂವಿಧಾನವನ್ನು ಸಾವಿರಾರು ವರ್ಷಗಳ ಹಿಂದೆಯೇತಮ್ಮ ಕಾವ್ಯಗಳಲ್ಲಿ ನಿರೂಪಿಸಿದ್ದಾರೆ. ಅಂದಿನ ಮಹಾ ಕಾವ್ಯಗಳೇ ಇಂದಿನ ಕಾನೂನಿನ ವಕ್ತಾರರು.ಆದಿಪುರಾಣ, ವಿಕ್ರಮಾರ್ಜುನ ವಿಜಯ, ಕವಿರಾಜಮಾರ್ಗ ಕಾವ್ಯಗಳಲ್ಲಿ ಕನ್ನಡಿಗರ ವ್ಯಕ್ತಿತ್ವ ಪರಿಚಯದಟ್ಟವಾಗಿದೆಎಂದರು.

ಕಾರ್ಯಕ್ರಮದಲ್ಲಿ ಕುಲಸಚಿವೆ ನಾಹಿದಾ ಜಮ್, ಜಮ್ , ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ., ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ್ ಎಂ.ಶೇಟ್, ಕರ್ನಾಟಕ ಸಾಹಿತ್ಯಅಕಾಡೆಮಿಯ ಸದಸ್ಯೆ ಸುಮಾ ಸತೀಶ್, ಜಿಲ್ಲಾ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಸಂಚಾಲಕರಾದ ಮಲ್ಲಿಕಾ ಬಸವರಾಜು, ಡಾ ನಾಗಭೂಷಣ ಬಗ್ಗನಡು, ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೆಂಕಟರೆಡ್ಡಿರಾಮರೆಡ್ಡಿ ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X