ತುಮಕೂರು | ಎಪಿಎಂಸಿ ಮಾರುಕಟ್ಟೆಗಳಲ್ಲಿ ಮದ್ಯವರ್ತಿಗಳ ತಡೆಗೆ ಸರ್ಕಾರ ಕ್ರಮ : ಸಚಿವ ಡಾ.ಜಿ.ಪರಮೇಶ್ವರ್

Date:

Advertisements

ಎಪಿಎಂಸಿ ಮಾರುಕಟ್ಟೆಗಳಲ್ಲಿ ಮದ್ಯವರ್ತಿಗಳು, ದಲ್ಲಾಳಿಗಳ ಹಾವಳಿ ತಡೆಗಟ್ಟಿ ರೈತರು ಮತ್ತು ವರ್ತಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು

ತುಮಕೂರು ನಗರದ ಅಂತರಸನಹಳ್ಳಿಯಲ್ಲಿರುವ ಎಪಿಎಂಪಿ ಪ್ರಾಂಗಣದಲ್ಲಿ ತರಕಾರಿ, ಹೂವು, ಹಣ್ಣು, ವಿಳ್ಯದೆಲೆ ಮಾರಾಟಗಾರರ ಸಂಘದಿಂದ ಆಯೋಜಿಸಿದ್ದ ಅಭಿನಂಧನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಮ್ಮದು ಕೃಷಿ ಪ್ರಧಾನ ಸಮಾಜ. ಇದುವರೆಗು ಆಡಳಿತ ನಡೆಸಿರುವ ಯಾವ ಸರಕಾರದಲ್ಲಿಯೂ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಕ್ಕಿಲ್ಲ.ಎಂ.ಎಸ್.ಪಿ ಯಲ್ಲಿ ಖರೀದಿಸುವ ಪ್ರಮಾಣಕ್ಕೆ ಮಿತಿ ಇದೆ. ಇದರಿಂದ ದೊಡ್ಡ ರೈತರಿಗೆ ಹೊಡೆತ ಬೀಳಲಿದೆ.ಅಲ್ಲದೆ ಎಂ.ಎಸ್.ಪಿಯಲ್ಲಿ ಖರೀದಿಸುವ ಬೆಳೆಗಳಿಗೆ ಒಂದು ವರ್ಷವಾದರೂ ಹಣ ಬರುವುದಿಲ್ಲ.ಇದರ ಅನುಭವ ನನಗೂ ಆಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಹಲವಾರು ಬದಲಾವಣೆಗಳನ್ನು ತಂದು ರೈತರು ಮತ್ತು ವರ್ತಕರನ್ನು ಶಕ್ತಿ ಶಾಲಿಗೊಳಿಸಲಾಗಿದೆ ಎಂದರು.

ತುಮಕೂರಿನಲ್ಲಿ 1952 ರಿಂದಲೂ ಎಪಿಎಂಸಿ ಮಾರುಕಟ್ಟೆ ಕೆಲಸ ಮಾಡುತ್ತಿದೆ.ನಗರದ ಬಾಳನಕಟ್ಟೆ ಏರಿಯ ಮೇಲೆ ಆರಂಭವಾಗಿ ಕಿರಿದಾದ ಕಾರಣ ಸುಮಾರು 48 ಎಕರೆ ವಿಸ್ತೀರ್ಣ ಇರುವ ಬಟವಾಡಿಗೆ ಸ್ಥಳಾಂತರಿಸಲಾಯಿತು.ಆದರೆ ಇಂದಿಗೂ ಅಲ್ಲಿನ ಕೆಲವು ಅಂಗಡಿಮಗಳು ಖಾಲಿ ಇವೆ.2013ರಲ್ಲಿ ಪ್ರಾರಂಭವಾದ ಅಂತರಸನಹಳ್ಳಿಯ ಈ ಮಾರುಕಟ್ಟೆ ಇದುವರೆಗಗೂ ಸುಮಾರು 56 ಕೋಟಿ ರೂ ತೆರಿಗೆ ಕಟ್ಟಿದೆ.ಇದನ್ನು ಗಮನಿಸಿದರೆ ಮಾರುಕಟ್ಟೆ ಸುವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ.ಇಲ್ಲಿನ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಡೂಮ್ ಲೈಟ್, ಸಿಸಿ ರಸ್ತೆ ಸೇರಿದಂತೆ ಹಲವು ಕೆಲಸಗಳು ಆಗಿವೆ ಎಂದು ಡಾ.ಜಿ..ಪರಮೇಶ್ವರ್ ನುಡಿದರು.

Advertisements

ಪ್ರಸ್ತುತ ತರಕಾರಿ, ಹೂವು, ಹಣ್ಣು,ವಿಳ್ಯದೆಲೆ ಮಾರಾಟಗಾರರ ಸಂಘ ನೀಡಿರುವ ಸಂಘದ ಕಚೇರಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿದರೆ ತಕ್ಷಣವೇ ಕ್ರಮ ಕೈಗೊಳ್ಳಲು ಸಿದ್ದ. ಹಾಗೆಯೇ ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಪಾಲಿಕೆಯ ಆಯುಕ್ತರು ಮತ್ತು ಜಿಲ್ಲಾ ಎಸ್ಪಿ ವರಿಗೆ ಸೂಚನೆ ನೀಡಿದ ಉಸ್ತುವಾರಿ ಸಚಿವರು,ಮಳೆ, ಬಿಸಿಲಿನಿಂದ ಕೃಪಿ ಉತ್ಪನ್ನಗಳ ರಕ್ಷಣೆಗೆ ಸುಮಾರು 14 ಕೋಟಿ ರೂಗಳಲ್ಲಿ ಮೇಲ್ಚಾವಣಿ ನಿರ್ಮಿಸಿಕೊಡಲು ಸಿದ್ದ, ಇನ್ನೊಂದು ವಾರದ ಒಳಗೆ ಪ್ರಾಸ್ತಾವನೆ ಸಲ್ಲಿಸುವಂತೆ ಕೃಷಿ ಮಾರುಕಟ್ಟೆ ಕಾರ್ಯದರ್ಶಿ ಅವರಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

ಎಪಿಎಂಸಿ ಮಾರುಕಟ್ಟೆಯಲ್ಲಿರುವ ಬಹುತೇಕ ಜನ ಅಗ್ನಿವಂಶ ಕ್ಷತ್ರಿಯ ಸಮುದಾಯಕ್ಕೆ ಸೇರಿದವರು. ಶ್ರಮಜೀವಿಗಳು 50-50 ಜಾಗ ಸಿಕ್ಕರೂ ಅದರಲ್ಲಿಯೇ ಸೊಪ್ಪು, ತರಕಾರಿ ಬೆಳೆದು ಜೀವನ ನಡೆಸುತ್ತಾರೆ.ಇಂತಹ ಕಷ್ಟ ಜೀವಿಗಳಿಗೆ ಸಹಕಾರ ನೀಡುವುದು ನಮ್ಮ ಕೆಲಸ.ಹಾಗಾಗಿ ನಿಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದ್ದೇನೆ. ಇದಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರು ಸಹ ಸಹಮತ ವ್ಯಕ್ತಪಡಿಸಿದ್ದಾರೆ.ಅವರ ಒಪ್ಪಿಗೆ ಪಡೆದೆ ನಿಮಗೆ ಭರವಸೆ ನೀಡುತಿದ್ದೇನೆ. ಈ ಮಾರುಕಟ್ಟೆಯ ಒತ್ತಡ ಕಡಿಮೆ ಮಾಡಲು ಇದೇ ರೀತಿಯ ಇನ್ನೊಂದು ಮಾರುಕಟಟೆಯ ನಿರ್ಮಾಣದ ಜೊತೆಗೆ, ನಗರದ ನಾಲ್ಕು ದಿಕ್ಕುಗಳಲ್ಲಿ ಜಾಗ ಹುಡುಕಿ ಮಾರುಕಟ್ಟೆ ನಿರ್ಮಾಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಡಾ.ಜಿ.ಪರಮೇಶ್ವರ ಸೂಚನೆ ನೀಡಿದರು.

ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಮಾತನಾಡಿ,ಬೋಗ್ಯಕ್ಕಿದ್ದ ಅಂಗಡಿ ಮಳಿಗೆಗಳು ಈ ಸರಕಾರದ ದೃಢ ನಿರ್ಧಾರದಿಂದ ಸ್ವಂತ ಆಸ್ತಿಯಾಗಿ ಮಾರ್ಪಾಡಾಗಿವೆ.ಇದಕ್ಕಾಗಿ ಸರಕಾರಕ್ಕೆ ನಿಮ್ಮ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.ರೈತ ಬೆಳೆದರೆ ಮಾತ್ರ ಅನ್ನ. ಹಾಗಾಗಿ ರೈತನಿಗೆ ಮೊದಲ ಅದ್ಯತೆ ನೀಡಬೇಕಾಗಿದೆ.ಇಲ್ಲಿನ ಕೃಷಿ ಉತ್ಪನ್ನಗಳು ವಿದೇಶಗಳಿಗೂ ಅಮದಾಗುವ ರೀತಿ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು. ಡಾ.ಜಿ.ಪರಮೇಶ್ವರ್ ಓರ್ವ ಸಜ್ಜನ ರಾಜಕಾರಣಿ.ಅವರು ನಮ್ಮ ನಡುವೆ ರಾಜಕೀಯ ಏನೇ ಇದ್ದರೂ ಇಂತಹ ಸಜ್ಜನ ರಾಜಕಾರಣಿ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂಬುದು ನಮ್ಮ ಆಶಯ. ಮುಂದಿನ ರಾಜಕೀಯ ಬೆಳೆವಣಿಗೆಗಳಲ್ಲಿ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದರು.

ಪತ್ರಕರ್ತ ಡಾ.ಎಸ್.ನಾಗಣ್ಣ ಮಾತನಾಡಿ,ಇಂದು ವರ್ತಕರಿಗೆ ಶುಭ ದಿನ. 10 ವರ್ಷಗಳ ಲೀಸ್ ಕಂ ಸೇಲ್ ಅವಧಿ ಮುಗಿದ ಕಾರಣ ತೂಗುಕತ್ತಿಯ ಜೀವನ ನಡೆಸುತ್ತಿದ್ದ ನಿಮಗೆ ಈಗ ಒಂದು ಶಾಶ್ವತ ಭದ್ರತೆ ಸಿಕ್ಕಂತಾಗಿದೆ.ಒಂದು ಇಡಿ ಕೊತ್ತಮಿರಿ ಸೋಪ್ಪು ಮತ್ತು ನಾಲ್ಕು ನಿಂಬೆ ಹಣ್ಣನ್ನು ಅನ್‌ಲೈನ್ ನಲ್ಲಿ ತರಿಸಿಕೊಳ್ಳುವ ಇಂದಿನ ಯುಗದಲ್ಲಿ, ಈ ರೀತಿಯ ವ್ಯಾಪಾರ ನಿಜಕ್ಕೂ ತ್ರಾಸದಾಯಕ.ಹಾಗಾಗಿ ನಗರದ ನಾಲ್ಕು ಮೂಲೆಗಳಲ್ಲಿಯೂ ಮಾರುಕಟ್ಟೆ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದರು.

ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ಒಂದು ಕಾಲದಲ್ಲಿ ನೀರು ನಿಲ್ಲುತಿದ್ದ ಜಾಗ. ಹಾಗಾಗಿ ಮಳೆ ಬಂದ ಸಂದರ್ಭದಲ್ಲಿ ಕೆಲಸ ಸಮಸ್ಯೆ ತಲೆ ದೊರೆಲಿದೆ.ಸರಕಾರ ನಿಮ್ಮ ಸಮಸ್ಯೆಗೆ ಸ್ಪಂದಿಸಿದೆ.ನಿಮ್ಮ ಕೋರಿಕೆಯಂತೆ ಮೇಲ್ಚಾವಣಿ, ಪಾರ್ಕಿಂಗ್ ಹಾಗೂ ಸಂಘದ ಕಚೇರಿ ಕಟ್ಟಡಕ್ಕೆ ಶೀರ್ಘವೇ ದೊರೆಯಲಿದೆ ಎಂದರು.

ವೇದಿಕೆಯಲ್ಲಿ ಪಾಲಿಕೆ ಮಾಜಿ ಉಪಮೇಯರ್ ನರಸಿಂಹಮೂರ್ತಿ, ಪಾಲಿಕೆ ಮಾಜಿ ಸದಸ್ಯರಾದ ಶ್ರೀನಿವಾಸ್,ಮಹೇಶ್, ರವೀಶ್ ಜಹಂಗೀರ್,ಡಿಸಿಸಿ ಅಧ್ಯಕ್ಷ ಜಿ.ಚಂದ್ರಶೇಖರಗೌಡ,ಮಾಜಿ ಅಧ್ಯಕ್ಷ ರಾಮಕೃಷ್ಣಪ್ಪ, ಟಿ.ಎನ್.ಮಧುಕರ್, ರಾಕ್ ಲೈನ್ ರವಿಕುಮಾರ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ., ಪಾಲಿಕೆ ಆಯುಕ್ತರಾದ ಅಶ್ವಿಜ. ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ಪುಷ್ಪ, ಅಧಿಕಾರಿ ರಾಜಣ್ಣ,ತರಕಾರಿ, ಹೂವು, ಹಣ್ಣು,ವಿಳ್ಯದೆಲೆ ಮಾರಾಟಗಾರರ ಸಂಘದ ರಾಮಣ್ಣ, ಪಾಪಣ್ಣ, ಆನಂದ್, ಅನಿಲ್, ಟಿ.ಹೆಚ್.ವಾಸುದೇವ್, ಮರಿಗಂಗಯ್ಯ, ಮಾರುತಿ ಶಂಕರ್ ಸೇರಿದಂತೆ ಹಲವರು ಉಸಪ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X