ತುಮಕೂರು | ಹೇಮಾವತಿ ತರಲು ನಡೆದಂತೆ ಮತ್ತೊಮ್ಮೆ ತೀವ್ರ ಹೋರಾಟ: ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ

Date:

Advertisements

ತುಮಕೂರು ಜಿಲ್ಲೆಯ ಜೀವನಾಡಿ ಹೇಮಾವತಿ ನೀರನ್ನು ಕುಣಿಗಲ್ ಮೂಲಕ ಮಾಗಡಿಗೆ ಕೊಂಡೊಯ್ಯುವ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಲು ನಡೆದ ನಿರಂತರ ಹೋರಾಟ ಇದೇ ತಿಂಗಳ 25ರಂದು ಜಿಲ್ಲೆ ಬಂದ್‌ಗೆ ಕರೆ ನೀಡಿ, ಗುಬ್ಬಿ ತಾಲೂಕು ಬಂದ್ ಯಶ್ವಸ್ವಿಯಾಗಿ ನಡೆಸಲು ಸಮಿತಿಯ ಎಲ್ಲ ಮುಖಂಡರು ಸಾಮೂಹಿಕ ನಾಯಕತ್ವದಲ್ಲಿ ಬದ್ದರಾಗಿರುವುದಾಗಿ ತೀರ್ಮಾನಿಸಿದ್ದಾರೆ.

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯ ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು, ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಾಗಿ ಮೂವತ್ತು ವರ್ಷದ ಹಿಂದೆ ಹೇಮಾವತಿ ನೀರು ತರಲು ನಡೆಸಿದ ತೀವ್ರ ಹೋರಾಟದ ಮಾದರಿಯಲ್ಲೇ ಈಗ ನೀರು ಉಳಿಸಿಕೊಳ್ಳಲು ನಿರಂತರ ಹೋರಾಟ ನಡೆಸಲು ಬದ್ಧರಾಗಿದ್ದೇವೆಂದು ತಿಳಿಸಿ ಬಂದ್ ಹೇಗೆ ನಡೆಸಬೇಂಬುದರ ಬಗ್ಗೆ ತಮ್ಮ ಸಲಹೆ ಸೂಚನೆ ನೀಡಿದರು.

ಬಿಜೆಪಿ ಮುಖಂಡ ಎಸ್‌ ಡಿ ದಿಲೀಪ್ ಕುಮಾರ್ ಮಾತನಾಡಿ, “ಈ ಹಿಂದೆ ಲಿಂಕ್ ಕೆನಾಲ್ ಯೋಜನೆಗೆ ಒಪ್ಪಿಗೆ ನೀಡಿದ್ದ ತಾಂತ್ರಿಕ ಸಲಹಾ ಸಮಿತಿಯನ್ನೇ ಮತ್ತೊಮ್ಮೆ ಪರಿಶೀಲನೆಗೆ ನಿಯೋಜಿಸುವ ಸರ್ಕಾರ ಕಣ್ಣೊರೆಸುವ ತಂತ್ರ ಬಳಸಿದೆ. ಕಳ್ಳನ ಮುಂದೆ ಕಣಿ ಕೇಳಿದಂತೆ ಈ ಸಲಹಾ ಸಮಿತಿ ಕಾಮಗಾರಿಗೆ ಅಸ್ತು ನೀಡಲಿದೆ. ಒಂದೆರೆಡು ತಾಲೂಕು ಹಿತಾಸಕ್ತಿಗೆ ಇಡೀ ಜಿಲ್ಲೆಗೆ ಅನ್ಯಾಯ ಮಾಡುವ ಕಾಂಗ್ರೆಸ್ ಸರ್ಕಾರದ ವಿರುದ್ದ ಜನ ಹೋರಾಟವೇ ಆಸ್ತ್ರ. 1440 ಕ್ಯೂಸೆಕ್‌ ನೀರು ಹರಿಯುವ ಆಧುನಿಕ ನಾಲೆಯಲ್ಲಿ ನೀರು ತೆಗೆದುಕೊಂಡು ಹೋಗಲಿ. ಅದನ್ನು ಬಿಟ್ಟು ಲಿಂಕ್ ಕೆನಾಲ್ ಒಮ್ಮೆಲೇ 11 ಟಿಎಂಸಿ ನೀರು ಹರಿಸುವ ಹುನ್ನಾರ ವಿರುದ್ಧ ರೈತರು ದನಿಯಾಗಿ ನಿಲ್ಲಬೇಕು. ಮಂಗಳವಾರ ಬಂದ್ ಯಶ್ವಸ್ವಿಗೆ ಬರಬೇಕು” ಎಂದು ಕರೆ ನೀಡಿದರು.

Advertisements

ಜೆಡಿಎಸ್ ಮುಖಂಡ ಬಿ ಎಸ್ ನಾಗರಾಜು ಮಾತನಾಡಿ, “ಜಿಲ್ಲೆಯ ಎಲ್ಲ ಶಾಸಕರು ಮೀಟಿಂಗ್‌ನಲ್ಲಿ ವಿರೋಧ ವ್ಯಕ್ತಪಡಿಸಿದ್ದು ಸರಿಯಷ್ಟೇ. ಆದರೆ ಬೀದಿಗಿಳಿದು ಹೋರಾಟ ಮಾಡಿದರೆ ಮಾತ್ರ ಕಾಮಗಾರಿ ನಿಲ್ಲಿಸಲು ಸಾಧ್ಯ. ಎಲ್ಲ ಶಾಸಕರು ಹೋರಾಟಕ್ಕೆ ಬೆಂಬಲ ಸೂಚಿಸಿ ಬೆಂಬಲಿಗರೊಂದಿಗೆ ಬರಬೇಕು. ಕಾಮಗಾರಿ ನಡೆಸಲು ಪೊಲೀಸರನ್ನು ಬಳಸುತ್ತಾರೆ. ನಮ್ಮ ಹೋರಾಟ ಹತ್ತಿಕ್ಕಲು ಜೈಲಿನ ಭಯ ತೋರುತ್ತಾರೆ. ಯಾವುದಕ್ಕೂ ಜಗ್ಗದೆ ಈ ತಿಂಗಳ 25ರಂದು ತಮ್ಮ ಗ್ರಾಮದಲ್ಲಿ ಬಂದ್ ನಡೆಸಿ ಗುಬ್ಬಿಗೆ ಬಂದು ಸಾವಿರಾರು ಜನರ ಶಕ್ತಿ ಪ್ರದರ್ಶನ ಆಗಬೇಕು” ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, “ಕುಣಿಗಲ್, ಮಾಗಡಿ, ಕನಕಪುರ, ರಾಮನಗರ, ಚನ್ನಪಟ್ಟಣ ಈ ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳಲು ಡಿಸಿಎಂ ನಮ್ಮ ರೈತರ ಮೇಲೆ ದರ್ಪ ತೋರಲು ಸಿದ್ಧರಿದ್ದಾರೆ. ರೈತರ ಶಕ್ತಿ ಏನೆಂದು ಹೋರಾಟದಲ್ಲಿ ತೋರಬೇಕು. ಬಂದ್ ಯಶಸ್ವಿ ಜೊತೆಗೆ ಕಾನೂನು ಹೋರಾಟದ ಆಲೋಚನೆ ಮಾಡಬೇಕು” ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್ ಟಿ ಭೈರಪ್ಪ ಮಾತನಾಡಿ, “ರಾಷ್ಟ್ರೀಯ ನೀರಾವರಿ ಸಮಿತಿ ಪ್ರಕಾರ ಯಾವುದೇ ಮುಖ್ಯ ನಾಲೆಯಲ್ಲಿ ಲಿಂಕ್ ಕೆನಾಲ್ ಮಾಡುವಂತಿಲ್ಲ. ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ ಈ ಪೈಪ್‌ಲೈನ್ ಮಾಡಿರುವುದು ಅಕ್ರಮ. ಜಿಲ್ಲೆಯ ಏಳೆಂಟು ತಾಲೂಕಿಗೆ ಅನ್ಯಾಯ ಮಾಡುವ ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಟವನ್ನು ನಿರಂತರ ನಿರ್ಣಾಯಕಗೊಳಿಸಬೇಕಿದೆ” ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, “ಸರ್ಕಾರದ ವಿರುದ್ಧ ನಡೆಯುವ ಹೋರಾಟ ಗಂಭೀರತೆ ಹೊಂದಿರಬೇಕು. ಬೆಳಿಗ್ಗೆ 7 ರಿಂದ ಸಂಜೆ 7ರವರೆಗೆ ಬಂದ್ ಯಶಸ್ವಿಯಾಗಿ ನಡೆಯಬೇಕು. ಗ್ರಾಮೀಣ ಭಾಗಕ್ಕೆ ಮೊದಲು ಕರಪತ್ರ ಹಂಚಿ ಪ್ರಚಾರ ಮಾಡಬೇಕು. ಮನದಟ್ಟು ಮಾಡಿ ಹೋರಾಟಕ್ಕೆ ಕರೆ ತರಬೇಕು. ಎಲ್ಲ ಕಚೇರಿಗಳು ಬಂದ್ ಮಾಡಬೇಕು. ಸಂತೆಗಳು, ಶಾಲೆಗಳೂ ಕೂಡ ಬಂದ್ ಆಗಬೇಕು” ಎಂದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | 371(ಜೆ) ವಿರುದ್ಧ ಅಪಸ್ವರ ಖಂಡಿಸಿ ಜೂ.29ರಂದು ಜನಾಂದೋಲನ

ಈ ಸಂದರ್ಭದಲ್ಲಿ ಮುಖಂಡರಾದ ಎಸ್ ನಂಜೇಗೌಡ, ಸಿ ಆರ್ ಶಂಕರ್ ಕುಮಾರ್, ಪಿ ಬಿ ಚಂದ್ರಶೇಖರಬಾಬು, ಜಿ ಡಿ ಸುರೇಶ್ ಗೌಡ, ಯೋಗಾನಂದಕುಮಾರ್, ಹೊನ್ನಗಿರಿಗೌಡ, ಹಾರನಹಳ್ಳಿ ಪ್ರಭಣ್ಣ, ಜಿ ಆರ್ ಶಿವಕುಮಾರ್, ಜಿ ಎನ್ ಅಣ್ಣಪ್ಪಸ್ವಾಮಿ, ಶಶಿಕುಮಾರ್, ಎಚ್ ಡಿ ಯಲ್ಲಪ್ಪ, ವರ್ತಕರ ಸಂಘದ ದಯಾನಂದ್, ಹೋಟೆಲ್ ಮಾಲೀಕರ ಸಂಘದ ಕಾಂತರಾಜ್, ರೈತ ಸಂಘದ ಲೋಕೇಶ್, ಪಾರ್ಥ ಸಾರಥಿ, ಗಂಗಸಂದ್ರ ಮಂಜಣ್ಣ, ಬಿ ಲೋಕೇಶ್ ಸೇರಿದಂತೆ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X