ತುಮಕೂರು | ಅಕ್ರಮ ಭೂ ಪರಿವರ್ತನೆ ಆರೋಪ : ಜಿಲ್ಲಾಧಿಕಾರಿಗೆ ನಾಗರಿಕ ಸನ್ಮಾನದ ವಿನೂತನ ಪ್ರತಿಭಟನೆಗೆ ಪೊಲೀಸರ ಅಡ್ಡಿ ; ಬಂಧನ

Date:

Advertisements

ಅಕ್ರಮ ಭೂ ಕಬಳಿಕೆಗೆ ಕಾರಣವಾಗಿದ್ದಾರೆ ಎಂಬ ಆರೋಪ ಹೊತ್ತಿರುವ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ನಾಗರಿಕ ಸನ್ಮಾನವನ್ನು ಶುಕ್ರವಾರ ಕೆಆರ್‌ಎಸ್ ಪಕ್ಷದ ವತಿಯಿಂದ ನಗರದ ಟೌನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಕ್ರಮ ಭೂ ಕಬಳಿಕೆ ಮತ್ತು ಅಕ್ರಮ ಗಣಿಗಾರಿಕೆಗೆ ಪ್ರೋತ್ಸಾಹ ನೀಡಿ ಜಿಲ್ಲೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಶ್ರಮಿಸುತ್ತಿದ್ದಾರೆ ಎಂದು ಆರೋಪಿಸಿ ತುಮಕೂರು ಜಿಲ್ಲಾಧಿಕಾರಿಗೆ ಶಾಲು, ಪೇಟ, ರೇಷ್ಮೆ ಸೀರೆ ನೀಡಿ ಸನ್ಮಾನ ಮಾಡಲು ಟೌನ್‌ಹಾಲ್ ನಿಂದ ಡಿಸಿ ಕಚೇರಿ ಕಡೆಗೆ ಹೊರಟಿದ್ದ ಕೆಆರ್‌ಎಸ್ ಪಕ್ಷದ ಸೈನಿಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.ಸನ್ಮಾನ ಕಾರ್ಯಕ್ರಮಕ್ಕೂ ಮುನ್ನ ಟೌನ್‌ಹಾಲ್ ನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸೈನಿಕರು ಪೊಲೀಸರ ಸರ್ಪಗಾವಲಿನ ನಡುವೆಯೂ ಸಭೆ ಸೇರಿದ್ದರು. 

ಪೊಲೀಸರು ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಕ್ಷಣ ಹೊತ್ತು ವಗ್ವಾದ ನಡೆಯಿತು. ಡಿಸಿಯವರಿಗೆ ಸನ್ಮಾನ ಮಾಡಲು ಅವಕಾಶ ಕೊಡದ ಪೊಲೀಸರ ವರ್ತನೆ ಖಂಡಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಸ್ಥಳದಲ್ಲಿಯೇ ಪ್ರತಿಭಟನೆಗೆ ಕುಳಿತು ವಿಡಂಬಿಸುವ ನಿಟ್ಟಿನಲ್ಲಿ‌ ಪೊಲೀಸರು ಹಾಗೂ ಜಿಲ್ಲಾಡಳಿತಕ್ಕೆ ಜೈಕಾರ ಕೂಗಿದರು.

Advertisements

ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನ ಸಿಂಧು ಸ್ವಾಮಿ ಮಾತನಾಡಿ, ಅಕ್ರಮ ಭೂ ಮಂಜೂರಾತಿಯು ಡಿಸಿ ಅವರ ಅನುಮತಿ ಇಲ್ಲದೆ ಸಾಧ್ಯವೇ ಇಲ್ಲ. ಇದಕ್ಕೆ ನೇರ ಹೊಣೆಯನ್ನು ಜಿಲ್ಲಾಧಿಕಾರಿಯವರೇ ಹೊರಬೇಕು ಎಂದು ಆರೋಪಿದರು.

ಮಧುಗಿರಿಯಲ್ಲಿನ 40 ಎಕ್ಕರೆ ಅಕ್ರಮ ಭೂ ಮಂಜೂರಾತಿಯಲ್ಲಿ‌ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಇದರ ವಿರುದ್ಧ ಕೆಆರ್‌ಎಸ್ ಪಕ್ಷ ಹೋರಾಟ ಮಾಡುತ್ತಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಸಾಮಾನ್ಯರ ಕೆಲಸವಾಗುತ್ತಿಲ್ಲ. ಪ್ರತಿಯೊಂದಕ್ಕೂ ಲಂಚ ಕೊಡಬೇಕಾಗಿದೆ. ರಿಯಲ್ ಎಸ್ಟೇಟ್ ಕೆಲಸಗಳು ಮಾತ್ರ ಸರಾಗವಾಗಿ ಆಗುತ್ತಿವೆ. ಅದರೊಂದಿಗೆ ಭೂ ಕಬಳಿಕೆಯೂ ನಡೆಯುತ್ತಿದೆ ಎಂದು ದೂರಿದರು.

ಜಿಲ್ಲಾಧಿಕಾರಿಗಳು ಅಕ್ರಮ ಮಾಡುತ್ತಿದ್ದರೆ ನಾಗರಿಕರು ಅದನ್ನು ನೋಡಿಕೊಂಡು ಸುಮ್ಮನಿಕರಬೇಕಾ ಎಂದು ಜ್ಞಾನ ಸಿಂಧು ಸ್ವಾಮಿ ಪ್ರಶ್ನಿಸಿದರಲ್ಲದೆ, ಸರ್ಕಾರಿ ಭೂಮಿ ಜನರ ಸ್ವತ್ತು. ಅದನ್ನು ಅಕ್ರಮವಾಗಿ ಪರಬಾರೆ ಮಾಡುವುದು ತಪ್ಪು. ತಪ್ಪಿಗೆ ತಕ್ಕ ಶಿಕ್ಷೆಯಾಗಬೇಕು. ನಾವು ಬಸವಾದಿ ಶರಣರ ಮೊಮ್ಮಕ್ಕಳು‌. ಶ್ರೀ ಶಿವಕುಮಾರ ಸ್ವಾಮೀಜಿಯವರು ನಡೆದಾಡಿದ ಈ ನೆಲದಲ್ಲಿ ಅಕ್ರಮ ಎಸಗುವುದು ಮಹಾಪರಾಧ ಎಂದು ನುಡಿದರು.

ಕೆಆರ್‌ಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ರಘು ಜಾಣಗೆರೆ ಮಾತನಾಡಿ, ಸನ್ಮಾನ ಮಾಡುವುದು ನಮ್ಮ ಹಕ್ಕು. ಅದನ್ನು ಮಾಡಲು ಹೊರಟಿದ್ದೇವೆ. ಕಳ್ಳರು, ರೌಡಿ ಶೀಟರ್‌ಗಳು ಪೊಲೀಸರಿಗೆ ಸನ್ಮಾನ ಮಾಡುವುದು ಸರಿಯಾದರೆ ಈ ಜಿಲ್ಲೆಯ ಪ್ರಜ್ಞಾವಂತ ನಾಗರಿಕರಾದ ನಾವು ಸನ್ಮಾನ ಮಾಡುವುದರಲ್ಲಿ ತಪ್ಪೇನಿದೆ ಎಂದು ಡಿವೈಎಸ್ಪಿ ಚಂದ್ರಶೇಖರ್ ಅವರನ್ನು ಉದ್ದೇಶಿಸಿ ಕೇಳಿದರು.

ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಜಿಲ್ಲಾಧಿಕಾರಿಗಳ ರಕ್ಷಣೆಗಾಗಿ ಪೊಲೀಸರು ತಮ್ಮ ಸಮಯ‌ ಮತ್ತು ಸಂಪನ್ಮೂಲವನ್ನು ವ್ಯರ್ಥ ಮಾಡುತ್ತಿದ್ದಾರೆ. ಮೆರವಣಿಗೆಗೆಂದು ತಂದಿರುವ ಬ್ಯಾನರ್ ಹಾಗೂ ಶಾಲು, ಪೇಟ ಹಾರಗಳನ್ನು ಕಸಿದುಕೊಂಡಿರುವುದೂ ಅಲ್ಲದೆ, ವಾಕ್ ಸ್ವಾತಂತ್ರವನ್ನು ದಮನ ಮಾಡುವ ನಿಟ್ಟಿನಲ್ಲಿ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ ಎಂದು ಜಾಣಗೆರೆ ಆರೋಪಿಸಿದರು.

ಡಿಸಿಯವರಿಗೆ ಒತ್ತಡ ಹಾಕಿ ಈ ಅಕ್ರಮವನ್ನು ಮಾಡಿಸಿರಬಹುದು ಅಥವಾ ಆಮಿಷಕ್ಕೆ ಒಳಗಾಗಿಯೂ ಈ ಭ್ರಷ್ಟ ಕೆಲಸಕ್ಕೆ ಕೈ ಹಾಕಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ‌ ಮಾತನಾಡಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸತ್ಯ ಮೇವ ಜಯತೆಯ ಅರ್ಥವನ್ನು ಮರು ವ್ಯಾಖ್ಯಾನಿಸಿದ್ದಾರೆ. ಸತ್ಯವನ್ನು ನಿತ್ಯ ಮೇಯುವುದೇ ಸತ್ಯ ಮೇವ ಜಯತೆ ಎಂಬುದು ಡಿಸಿಯವರ ಉದ್ಧರಣ. ಸಾರ್ವಜನಿಕ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಬಂದಿರದ ಈ ಅಧಿಕಾರಿ ಜನ ಸೇವೆ ಮಾಡಲು ಸಾಧ್ಯವಿದೆಯೇ? ಮಧುಗಿರಿಯಲ್ಲಿ 40 ಎಕರೆ ಸರ್ಕಾರಿ ಭೂಮಿಯನ್ನು ಕಾಂಗ್ರೆಸ್ ಎಂಎಲ್‌ಎ ಮಗನಿಗೆ ಮಂಜೂರು ಮಾಡಿರುವುದರಲ್ಲಿ ಡಿಸಿಯವರ ನೇರ ಪಾತ್ರವಿರುವ ಶಂಕೆ ಇದೆ. ಇವರ ಇವರ ವಿರುದ್ಧ ಕ್ರಮವಾಗಬೇಕು. ಪ್ರಕರಣ ದಾಖಲಿಸಿ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಪೊಲೀಸರ ದೌರ್ಜನ್ಯ ಖಂಡಿಸಿ ಸ್ಥಳದಲ್ಲಿಯೇ ಕುಳಿತಿದ್ದ ಪಕ್ಷದ ಕಾರ್ಯಕರ್ತರ ಬಳಿಯಿದ್ದ ಹಾರ ಶಾಲುಗಳನ್ನು ಪೊಲೀಸರು ದಬ್ಬಾಳಿಕೆಯಿಂದ ಕಸಿದುಕೊಳ್ಳುತ್ತಿದ್ದಂತೆಯೇ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿಯವರು ಡಿವೈಎಸ್ಪಿ ಕಾಲಿಗೆ ಬೀಳುವ ಮೂಲಕ ವಿಶಿಷ್ಟ ರೀತಿಯ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಎಲ್ಲರನ್ನೂ ವಶಕ್ಕೆ ತೆಗೆದುಕೊಳ್ಳುವಂತೆ ಡಿವೈಎಸ್ಪಿ ಸೂಚಿಸಿದರು. ಪೊಲೀಸರು ಕೆಆರ್‌ಎಸ್ ಕಾರ್ಯಕರ್ತರನ್ನು ಪೊಲೀಸ್ ವಾಹನಕ್ಕೆ ತುಂಬಿದರು.

ಪ್ರತಿಭಟನೆಯಲ್ಲಿ ಕೆಆರ್‌ಎಸ್ ಪಕ್ಷದ ಮಹಿಳಾ ಘಟಕದ ಸದಸ್ಯರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

Download Eedina App Android / iOS

X