ಕಾವ್ಯ ಆಧ್ಯಾತ್ಮಿಕ ಮತ್ತು ರಾಜಕೀಯವಾಗಿರಬೇಕೆಂಬುದು ಕೆ ಬಿ ಸಿದ್ದಯ್ಯ ಅವರ ನಿಲುವಾಗಿತ್ತು. ಹಾಗಾಗಿ ಅವರ ಕಾವ್ಯ ಸೆಕ್ಯುಲರ್ ಕಾವ್ಯ ಎಂದು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ತುಮಕೂರು ನಗರದ ಕನ್ನಡ ಭವನದಲ್ಲಿ ಚಲನ ಪ್ರಕಾಶನ ಸಹಕಾರಿ ಮತ್ತು ಕೆ ಬಿ ಗೆಳೆಯರ ಬಳಗದ ವತಿಯಿಂದ ಕೆ ಬಿ ಸಿದ್ದಯ್ಯ ಅವರ ‘ತೊಗಲ ಮಂಟಪ’ ಖಂಡಕಾವ್ಯ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕೆ ಬಿ ಸಿದ್ದಯ್ಯ ಅವರು ಕೆ ಬಿ ಕಾವ್ಯಕ್ಕೆ ವಿಮರ್ಶಕರು ನ್ಯಾಯ ಒದಗಿಸಿಲ್ಲ. ರವಿಕುಮಾರ್ ನೀಹ ವಿಮರ್ಶೆಯಲ್ಲಿ ಸಿದ್ದಯ್ಯ ಅವರ ಕಾವ್ಯಕ್ಕೆ ನ್ಯಾಯ ಒದಗಿಸಿದ್ದಾರೆ. ಕೆ ಬಿ ಸಿದ್ದಯ್ಯ ಕಾವ್ಯ ರಚನೆಯ ಆರಂಭದಲ್ಲೇ ಭಿನ್ನ ಮಾರ್ಗ ಆಯ್ಕೆ ಮಾಡಿಕೊಂಡಿದ್ದರು. ಅನುಭವ ನೆಲೆಯಲ್ಲಿ ಹುಡುಕಾಟ ನಡೆಸುವ ಮೂಲಕ ಕುಲಮೂಲ ಭಾಷೆ ಬಳಸಿದ್ದಾರೆ. ಕೆ ಬಿ ಕಾವ್ಯ ಹಲವರನ್ನು ಪ್ರಭಾವಿಸಿದೆ” ಎಂದರು.
ರಂಗಕರ್ಮಿ ಕೋಟಾಗನಹಳ್ಳಿ ರಾಮಯ್ಯ ಮಾತನಾಡಿ, “ಕೆ ಬಿ ಸಿದ್ದಯ್ಯ ಕಾವ್ಯದ ಮಣೆಗಾರ. ವಿಮರ್ಶೆ ಮತ್ತು ಸ್ಥಾನಮಾನಗಳನ್ನು ಮೀರುವ ಶಕ್ತಿ ಕೆ ಬಿ ಕಾವ್ಯಕ್ಕಿದೆ” ಎಂದರು.
ಐಜಿಪಿ ರವಿಕಾಂತೇಗೌಡ ಮಾತನಾಡಿ, “ಕೆ ಬಿ ಅವರ ಕಾವ್ಯವನ್ನು ಅರ್ಥ ಮಾಡಿಕೊಳ್ಳುವಂತಹ ಸಿದ್ದತೆ ಕನ್ನಡದ ಕಾವ್ಯ ವಿಮರ್ಶಕರಿಗೆ ಪ್ರಾಪ್ತವಾಗಿಲ್ಲ. ಕಾವ್ಯ ಮತ್ತು ಕವಿಯ ಜತೆ ವಿಮರ್ಶೆ ನಡೆಯಬೇಕು. ಕೆ ಬಿ ಸಿದ್ದಯ್ಯ ಲೋಕ ನೀತಿಗೆ ವಿರುದ್ಧವಾಗಿ ಯೋಚಿಸಿದವರು” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕಾರ್ಮಿಕ ವಿರೋಧಿ ನೀತಿ: ವಾಡಿ ಎಸಿಸಿ ಕಾರ್ಖಾನೆ ಗುತ್ತಿಗೆ ಕಾರ್ಮಿಕರಿಂದ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಕರ್ನಾಟಕದ ದೆಹಲಿ ಪ್ರತಿನಿಧಿ ಟಿ ಬಿ ಜಯಚಂದ್ರ, ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿ ಎಂ ಪುಟ್ಟಯ್ಯ, ಕವಯತ್ರಿ ಸವಿತಾ ನಾಗಭೂಷಣ್, ಹಿರಿಯ ಹೋರಾಟಗಾರ ಕೋಟಗಾನಹಳ್ಳಿ ರಾಮಯ್ಯ, ಚರಕ ಆಸ್ಪತ್ರೆಯ ಡಾ ಬಸವರಾಜು, ಗಂಗರಾಜಮ್ಮ ಕೆ ಬಿ ಸಿದ್ದಯ್ಯ, ಕೊಟ್ಟಶಂಕರ್ ಇದ್ದರು.
