ತುಮಕೂರು | ಕೆರೆಯೊಳಗೆ ನಿರ್ಮಾಣವಾಗಿವೆ ಹಲವು ಕಟ್ಟಡಗಳು; ಲೋಕಾಯುಕ್ತಕ್ಕೆ ದೂರು

Date:

Advertisements

ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಾರನಕಟ್ಟೆ ಕೆರೆಯ ಜಾಗದಲ್ಲಿ ಹಲವು ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆ ಕಟ್ಟಡಗಳನ್ನು ಕೆಡವಿ, ಒತ್ತುವರಿ ತೆರವುಗೊಳಿಸಿ ಕರೆಯನ್ನು ಪುನಶ್ಚೇತನಗೊಳಿಸಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ನೈಜ ಹೋರಾಟಗಾರರ ವೇದಿಕೆ, ಕಾಳಜಿ ಫೌಂಡೇಶನ್ ಹಾಗೂ ಮಾಹಿತಿ ಅಧ್ಯಯನ ಕೇಂದ್ರದ ಮುಖಂಡರು ತುಮಕೂರಿನಲ್ಲಿ ಲೋಕಾಯುಕ್ತರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. “ಮಾರನಕಟ್ಟೆ ಕೆರೆಯು ಸುಮಾರು 46 ಎಕರೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ, ಬರೋಬ್ಬರಿ 21 ಎಕರೆಗೂ ಹೆಚ್ಚು ಭೂಮಿಯನ್ನು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಖಾಸಗಿ ಸಂಘ, ಸಂಸ್ಥೆಗಳು ಆಕ್ರಮಿಸಿಕೊಂಡಿವೆ. ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿ ಭಾಗಶಃ ಕೆರೆಯನ್ನೇ ನುಂಗಿಹಾಕಿದ್ದಾರೆ” ಎಂದು ಆರೋಪಿಸಿದ್ದಾರೆ.

“ಕಾನೂನುಗಳನ್ನು ಉಲ್ಲಂಘಿಸಿ ಕೆರೆ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಕೆರೆ ಜಾಗದಲ್ಲಿ ನ್ಯಾಯಾಧೀಶರ ವಸತಿಗೃಹ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಕಟ್ಟಡಗಳಿದ್ದು, ಅವುಗಳನ್ನು ತೆರವುಗೊಳಿಸಬೇಕು. ಕೆರೆಯನ್ನು ಪುನಶ್ಚೇತನಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

Advertisements

ದೂರು ನೀಡುವ ವೇಳೆ, ನೈಜ ಹೋರಾಟಗಾರರ ವೇದಿಕೆಯ ಹೆಚ್.ಎಂ ವೆಂಕಟೇಶ್, ಕಾಳಜಿ ಫೌಂಡೇಶನ್‌ನ ಜಿ.ಎಲ್ ನಟರಾಜ್, ಮಾಹಿತಿ ಹಕ್ಕು ರಾಜ್ಯ ವೇದಿಕೆಯ ಹೆಚ್.ಎಸ್ ಸ್ವಾಮಿ, ಮಾಹಿತಿ ಅಧ್ಯಯನ ಕೇಂದ್ರದ ಎಲ್.ಎಸ್ ಮಲ್ಲಿಕಾರ್ಜುನ್ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. Gubbi ಗುಬ್ಬಿ ತಾಲ್ಲೂಕು ಅನಾಭಿವೃದ್ಧಿಗೆ ನಮ್ಮ ಗುಬ್ಬಿ ತಾಲ್ಲೂಕಿನ ಹೆಮ್ಮೆಯ ಅಧಿಕಾರಿಗಳೇ ಸಂಪೂರ್ಣ ಕರಾಣ , ಈ ದಿನಗಳಲ್ಲಿ ಅಕ್ಕ ಪಕ್ಕದ ತಾಲ್ಲೂಕುಗಳು ಆಗಿರುವ ಅಭಿವೃದ್ಧಿಗೂ ಹಾಗೂ ನಮ್ಮ ಗುಬ್ಬಿ ತಾಲ್ಲೂಕು ಈ 25 ವರ್ಷಗಳಿಂದ ಆಗಿರುವ ಅಭಿವೃದ್ಧಿಗೂ ಅಂದಾಜು ಮಾಡಿ . ನಮ್ಮ ಗುಬ್ಬಿಯ ಅಭಿವೃದ್ಧಿಗಿಂತ ನೀರು ತುಂಬಿದ್ದೆ ಹೆಚ್ಚು , ಸಾರ್ವಜನಿಕ ಆರೋಗ್ಯ ಇಲಾಖೆಯ ಗುಬ್ಬಿ ಆಸ್ಪತ್ರೆಯ ಒಮ್ಮೆ ನೀವು ನೋಡಿ ಅಲ್ಲಿ ಯಾರಾದ್ರೂ ಒಬ್ಬ ರೋಗಿಗೆ ಸಂಪೂರ್ಣ ಚಿಕಿತ್ಸೆ ಸಿಗ್ತಾ ಇದಿಯಾ ಗಮನಿಸಿ , ಹಾಗೂ ಗುಬ್ಬಿ ತಾಲ್ಲೂಕಿನ ನಗರ ಗ್ರಾಮ ಹಳ್ಳಿಗಳ ರಸ್ತೆಗಳಲ್ಲಿ ಒಮ್ಮೆ ನೀವು ಪ್ರಯಾಣ ಮಾಡಿ , ಜೊತೆ ಕುಡಿಯುವ ಹಾಗೂ ಕೃಷಿ ಗೆ ನೀವು ಎಷ್ಟು ನೀರನ್ನು ಕೊಟ್ಟಿದ್ದೀರಾ ಗಮನಿಸಿ . ಸರ್ಕಾರಿ ಶಾಲೆ ಕಾಲೇಜುಗಳು ಯಾವ ಮಟ್ಟಿಗೆ ಅಭಿವೃದ್ಧಿಗೆ ಹೊಂದಿದ್ದವೇ ನೀವೇ ಗಮನಿಸಿ . ಸರ್ಕಾರಿ ಕೆಲಸಗಳಲ್ಲಿ ಜನರಿಗೆ ನಂಬಿಕೆಯೇ ಹೋಗಿದೆ . ಬಡವ ಬಲ್ಲಿಗರಿಗೆ ಇಲ್ಲಿ ಯಾವ ಪ್ರಯೋಜನಗಳು ಇವೆ ಪಟ್ಟಿ ಕೊಡಿ .. ಮೊದಲಿಗೆ ಗುಬ್ಬಿ ತಾಲ್ಲೂಕಿನಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ಕುಂಠಿತವಾದ ಎಷ್ಟೋ ನಗರ ಗ್ರಾಮ ಪ್ರದೇಶಗಳು ಇವೆ . ಇನ್ನೂ ಹೆಚ್ಚಿನ ಸಮಸ್ಯೆಗಳು ನಮ್ಮ ಗುಬ್ಬಿ ತಾಲ್ಲೂಕಿನಲ್ಲಿ ಇವೆ ಅಧಿಕಾರಿಗಳು ಇದರ ಬಗ್ಗೆ ಗಮನ ಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಯುವ ಜನತೆ ಹೋರಾಟದ ಬಾಹುಟ ಹಿಡಿದು ಹಾದಿಗೆ ಬರುವುದು ಖಂಡಿತ .

    ನೀವು ಅಧಿಕಾರಿಗಳು ಎಂಜಲು ಎಲೆಗೆ ಆಸೆ ಪಟ್ಟವರು ಇದ್ದೆರೆ ಜಿಲ್ಲಾ ತಾಲ್ಲೂಕು ಅಭಿವೃದ್ಧಿಗೆ ಎಲ್ಲಿಗೆ ?

    ನೀವು ಪತ್ರಕರ್ತರು ಹಾಗೂ ಮೀಡಿಯಾಗಳು ಇದಕ್ಕೆ ಸಹಕಾರ ಮಾಡಬೇಕು . ಪ್ರಮುಖ ಪ್ರಾಮಾಣಿಕ ಜನ ಹಾಗೂ ಸಮಾಜ ಸೇವೆಗೆ ನೀವು ಕೊಡ ಶ್ರಮಿಸಬೇಕು .
    7483146697

  2. ಇದೆಲ್ಲಾ ಸುಮಾರು ಐದು ಸಲ ಶಾಸಕರ ಕಾಣಿಕೆ.ಅಬಿವೃದ್ಧಿ ಬ್ಯಾನರ್ ಹಾಕಿ ಓಟು ತೆಗೊಳ್ಳೋದು ಆಮೇಲೆ ಬ್ಯಾನರ್ ಕಿತ್ತು ಹಾಕೋದು.ಜನರಿಗೆ ಮಂಕು ಬೂದಿ ಎರಚಿ ಓಟು ಪಡೆದು ಆಮೇಲೆ ಅವರಿಷ್ಟ ಬಂದ ಹಾಗೆ ಸವಾರಿ ಮಾಡೋದು ಇವರ ಕೆಲಸ.ಹೆಸರಿಗೆ ಗುಬ್ಬಿ ಎಂಎಲ್ಎ ವಾಸ ಮಾತ್ರ ತುಮಕೂರು ನಲ್ಲಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X