ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆ ನಂತರ ಗುಬ್ಬಿ ಶಾಸಕರ ಬೆಂಬಲಿಗರು ಸಹಕಾರ ಸಚಿವಕೆ.ಎನ್.ರಾಜಣ್ಣ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಸಾಮಾಜಿಕಜಾಲತಾಣದಲ್ಲಿ ತೇಜೋವಧೆ ಪೋಸ್ಟರ್ ಗಳನ್ನು ಹಾಕುತ್ತಿರುವುದು, ಅವಮಾನಕಾರಿ ಹೇಳಿಕೆ ನೀಡುತ್ತಿರುವುದನ್ನು ಹಿಂದುಳಿದ ವರ್ಗಗಳ ಮುಖಂಡರು ತೀವ್ರವಾಗಿ ಖಂಡಿಸಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಸಮಾಜಗಳ ಮುಖಂಡರು, ಗುಬ್ಬಿ ಶಾಸಕರ ಬೆಂಬಲಿರುತೇಜೋವಧೆ ಮಾಡುವ ಚಟುವಟಿಕೆಯನ್ನು ಇಲ್ಲಿಗೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಬಲಿಜ ಸಮಾಜದ ಮುಖಂಡ ಆಡಿಟರ್ ಟಿ.ಆರ್.ಆಂಜನಪ್ಪ ಮಾತನಾಡಿ, ನಮ್ಮ ಸಮಾಜಕ್ಕೆ ಕೆ.ಎನ್.ರಾಜಣ್ಣನವರು ಹೆಚ್ಚು ಸಹಾಯ ಮಾಡಿದ್ದಾರೆ.ಅವರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿ, ಅವಮಾನ ಮಾಡುವುದನ್ನು ನಿಲ್ಲಿಸಬೇಕು.ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

1996ರಿಂದ ಹಿಂದುಳಿದ ವರ್ಗಗಗಳು, ದಲಿತರರಿಗೆ ಯಾವುದೇ ರೀತಿಯ ಘಾಸಿಯಾಗುವಂತಹ ಪ್ರಕರಣ ನಡೆದಾಗ ಹಿಂದುಳಿದ ವರ್ಗಗಳ ಒಕ್ಕೂಟ ಅವರ ಬೆಂಬಲಕ್ಕೆ ನಿಂತು ಧ್ವನಿ ಮಾಡಿದೆ.ಹಿಂದುಳಿದ ವರ್ಗಗಳ ಅಂಗಗಳಾದ ಯಾವುದೇ ಸಣ್ಣಪುಟ್ಟ ಜಾತಿಗೆ ಅನ್ಯಾಯವಾದಾಗ ಒಕ್ಕೂಟ ಅವರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದೆ.ನಾವು ಒಟ್ಟಾಗಿದ್ದೇವೆ ಎಂಬ ಸಂದೇಶ ನೀಡುತ್ತೇವೆ ಎಂದರು.
ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನ ಚುನಾವಣೆ ವಿಚಾರವಾಗಿ ಜಿಲ್ಲಾ ಮಂತ್ರಿ ಡಾ.ಪರಮೇಶ್ವರ್, ಸಹಕಾರ ಮಂತ್ರಿ ಕೆ.ಎನ್.ರಾಜಣ್ಣಅವರು ಸಂಬಂಧಿಸಿದ ಎಲ್ಲರ ಅಭಿಪ್ರಾಯ ಪಡೆದು ಅದರಂತೆ ನಿರ್ಧಾರಕೈಗೊಂಡಿದ್ದಾರೆ. ಈಗ ಒಬ್ಬರು ಒಕ್ಕೂಟದ ಅಧ್ಯಕ್ಷರಾಗಿದ್ದಾರೆ.ಮುಂದೆ ಮತ್ತೊಬ್ಬರು ಆಗುತ್ತಾರೆ.ಅವಕಾಶ ಬರುವವರೆಗೆ ಕಾಯಬೇಕಾಗುತ್ತದೆ.ಆದರೆ ಇದೇ ನೆಪ ಮಾಡಿಕೊಂಡು ಸಚಿವಕೆ.ಎನ್.ರಾಜಣ್ಣಅವರನ್ನು ತೇಜೋವಧೆ ಮಾಡುವುದನ್ನು ಸಹಿಸಲಾಗುವುದಿಲ್ಲ. ಗುಬ್ಬಿ ಶಾಸಕರ ಬೆಂಬಲಿಗರು ಇನ್ನುಮೇಲಾದರೂ ಕೆ.ಎನ್.ಆರ್ ವಿರುದ್ಧ ಸಾಮಾಜಿಕಜಾಲತಾಣದಲ್ಲಿ ಅವಹೇಳನಾಕಾರಿ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಲಿ ಎಂದುಟಿ.ಆರ್.ಆಂಜನಪ್ಪ ಹೇಳಿದರು.
ನೇಕಾರ ಸಮಾಜದ ಮುಖಂಡ ಧನಿಯಾಕುಮಾರ್ ಮಾತನಾಡಿ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಬೆಂಬಲಿಗರು ಸಚಿವರಾದಕೆ.ಎನ್.ರಾಜಣ್ಣಹಾಗೂ ಡಾ.ಜಿ.ಪರಮೇಶ್ವರ್‌ಅವರನ್ನುತೇಜೋವಧೆ ಮಾಡುವುದನ್ನು ಬಿಡಬೇಕು. ಈ ಎಲ್ಲಾ ನಾಯಕರುಒಂದೇ ಪಕ್ಷದವರಾಗಿದ್ದು, ಒಟ್ಟಾಗಿ ಹೋಗಬೇಕು.ಆಗ ಜಿಲ್ಲೆಯಅಭಿವೃದ್ಧಿಗೆ ಸಹಕಾರಿಯಾಗುತ್ತದೆ.ಸಚಿವರಾಜಣ್ಣನವರುಒಂದುಜಾತಿಗೆ ಸೀಮಿತವಾದ ನಾಯಕರಲ್ಲ, ಎಲ್ಲಾಜಾತಿಯವರ ಪರವಾಗಿದ್ದಾರೆ.ಡಿಸಿಸಿ ಬ್ಯಾಂಕಿನಲ್ಲಿ ಎಲ್ಲಾಜಾತಿಯವರಿಗೂ ಉದ್ಯೋಗ ದೊರೆಕಿಸಲು ನೆರವಾಗಿದ್ದಾರೆ ಎಂದರು.

ಡಿಎಸ್‌ಎಸ್ ಮುಖಂಡ ಕೊಟ್ಟ ಶಂಕರ್ ಮಾತನಾಡಿ, ಗುಬ್ಬಿ ಶಾಸಕರ ಹಿಂಬಾಲಕರು ಸಚಿವ ಕೆ.ಎನ್.ರಾಜಣ್ಣಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಹಚ್ಚುತ್ತಿರುವುದಕ್ಕೆ ನಾವು ಪ್ರತಿಕ್ರಿಯೆ ನೀಡಿ ಮತ್ತೊಂದು ಕಿಡಿ ಹಚ್ಚುವ ಕೆಲಸ ಮಾಡುವುದಿಲ್ಲ. ಕೆ.ಎನ್.ಆರ್. ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಬಾರದು ಎಂದು ಗುಬ್ಬಿ ಶಾಸಕರು ತಮ್ಮ ಬೆಂಬಲಿಗರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಯಾವ ರೀತಿಯೋ ಜಿಲ್ಲೆಗೆ ಕೆ.ಎನ್.ರಾಜಣ್ಣನವರು ಅದೇರೀತಿ. ಸಣ್ಣಪುಟ್ಟ ಜಾತಿಗಳಿಗೆ ಆರ್ಥಿಕ ಶಕ್ತಿ ತುಂಬಿ, ಅವರು ಸಾಮಾಜಿಕವಾಗಿ ಮೇಲೆ ಬರಲು ನೆರವಾಗುತ್ತಿದ್ದಾರೆ.ಅವರ ಬಗ್ಗೆ ವೈಯಕ್ತಿಕ ನಿಂದನೆ ಮಾಡುವುದನ್ನು ಸಹಿಸಿಕೊಳ್ಳಲಾಗದು.ಗುಬ್ಬಿ ಶಾಸಕರ ಬೆಂಬಲಿಗರು ತಮ್ಮ ವರ್ತನೆಯನ್ನು ಇಲ್ಲಿಗೇ ನಿಲ್ಲಿಸಬೇಕು ಎಂದರು.
ವಾಲ್ಮೀಕಿ ಸಮಾಜದ ಮುಖಂಡ ಸಿಂಗದಹಳ್ಳಿ ರಾಜ್‌ಕುಮಾರ್ ಮಾತನಾಡಿ,ಕೆ.ಎನ್.ರಾಜಣ್ಣನವರು ತಮ್ಮ 50 ವರ್ಷಗಳ ರಾಜಕಾರಣದಲ್ಲಿಎಲ್ಲಾ ವರ್ಗದ ಬಡವರ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸಹಕಾರಿ ಕ್ಷೇತ್ರದ ಧುರೀಣರಾದ ಇವರ ತೇಜೋವಧೆಯನ್ನು ಸಹಿಸಲಾಗುವುದಿಲ್ಲ. ಗುಬ್ಬಿ ಶಾಸಕರ ಬೆಂಬಲಿಗರು ಸಚಿವರಾದ ಕೆ.ಎನ್.ರಾಜಣ್ಣ, ಡಾ.ಪರಮೇಶ್ವರ್‌ಅವರ ಅವಮಾನ ಮಾಡುತ್ತಿದ್ದಾರೆಂದರೆ ಅದು ಹಿಂದುಳಿದ ವರ್ಗದವರು, ದಲಿತರನ್ನುಅವಮಾನ ಮಾಡಿದಂತೆ ಎಂದು ಭಾವಿಸಬೇಕಾಗುತ್ತದೆ ಎಂದರು.
ಗುಬ್ಬಿ ಶಾಸಕ ಶ್ರೀನಿವಾಸ್‌ಅವರು ಪಕ್ಷಾಂತರ ಮಾಡುವಾಗ ಮೊದಲಿಗೆಕೆ.ಎನ್.ರಾಜಣ್ಣನವರ ಮನೆಯಲ್ಲೇ ನಿರ್ಧಾರ ಮಾಡಿದರು, ಅವರುಕೆ.ಎನ್.ರಾಜಣ್ಣನವರ ಬೆಂಬಲದಿಂದಲೇ ಗುಬ್ಬಿಕ್ಷೇತ್ರದಲ್ಲಿ ಚುನಾವಣೆಗೆದ್ದರು.ಈಗ ಅವರ ಬೆಂಬಲಿಗರುಕೆ.ಎನ್.ರಾಜಣ್ಣನವರ ತೇಜೋವಧೆ ಮಾಡುತ್ತಿರುವುದುಖಂಡನೀಯ, ಈ ಚಟುವಟಿಕೆ ಮುಂದುವರೆಸಿದರೆ ಅದು ಅವರಿಗೇ ಮಾರಕವಾಗುತ್ತದೆ.ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾಗುತ್ತದೆಎಂದು ಹೇಳಿದರು.
ವಿವಿಧ ಸಮಾಜಗಳ ಮುಖಂಡರಾದ ಗಂಗಣ್ಣ, ಎಂ.ನಾಗರಾಜು, ಪಿ.ಮೂರ್ತಿ, ಮಂಜೇಶ್, ಶಾಂತಕುಮಾರ್, ನಾಗಮ್ಮ, ಡಮರುಗೇಶ್, ಮಲ್ಲಸಂದ್ರ ಶಿವಣ್ಣ, ಗುರುರಾಘವೇಂದ್ರ, ಎಂ.ಡಿ.ಸತೀಶ್, ಚಂದ್ರಕಲಾ, ರಾಘವೇಂದ್ರಸ್ವಾಮಿ, ನಟೇಶ್ ಮೊದಲಾದವರು ಭಾಗವಹಿಸಿದ್ದರು.