ಈ ದಿನ ಡಾಟ್ ಕಾಮ್ ನ್ಯೂಸ್ ಆ್ಯಪ್ ಮತ್ತು ‘ನಮ್ಮ ಕರ್ನಾಟಕ: ನಡೆದ 50 ಹೆಜ್ಜೆ, ಮುಂದಿನ ದಿಕ್ಕು’ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಜನವರಿ 12ರ ಭಾನುವಾರದಂದು ತುಮಕೂರು ನಗರದ ಟೌನ್ ಹಾಲ್ ಬಳಿಯಿರುವ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಗೃಹಸಚಿವ ಡಾ. ಜಿ ಪರಮೇಶ್ವರ್ ಅವರು ಈದಿನ ನ್ಯೂಸ್ ಆ್ಯಪ್ ಬಿಡುಗಡೆ ಮಾಡಲಿದ್ದು, ಸಹಕಾರ ಸಚಿವ ಕೆ ಎನ್ ರಾಜಣ್ಣನವರು ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷೆ ಬಾ ಹ ರಮಾಕುಮಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ತುಮಕೂರು ವಿವಿ ಕುಲಸಚಿವರಾದ ನಹೀದಾ ಜಮ್ ಜಮ್ ಹಾಗೂ ಈ ದಿನ ಡಾಟ್ ಕಾಮ್‌ನ ಡಾ. ಎಚ್ ವಿ ವಾಸು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇರಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಂಗಳೂರು | ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗ ದಾನ; ಇತಿಹಾಸ ನಿರ್ಮಿಸಿದ ವೆನ್ಲಾಕ್ ಆಸ್ಪತ್ರೆ
ಚಿಂತಕ ಕೆ ದೊರೈರಾಜು, ಪರಿಸರವಾದಿ ಸಿ ಯತಿರಾಜು, ದಸಂಸ ಮುಖಂಡ ಕುಂದೂರು ತಿಮ್ಮಯ್ಯ, ರೈತಸಂಘದ ಜಿಲ್ಲಾಧ್ಯಕ್ಷ ಎ ಗೋವಿಂದರಾಜು, ಸಾಮಾಜಿಕ ಕಾರ್ಯಕರ್ತರಾದ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಎಂ ಆರ್ ರಂಗಮ್ಮ, ಜನಸ್ಪಂದನಾ ಟ್ರಸ್ಟ್‌ನ ಟೂಡಾ ಶಶಿಧರ್, ಎಸ್‌ಸಿ/ಎಸ್‌ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಡಾ. ವೈ ಕೆ ಬಾಲಕೃಷ್ಣಪ್ಪ, ಸುಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಎಸ್ ರಮೇಶ್, ಸ್ಲಂ ಜನಾಂದೋಲನ ಸಮಿತಿಯ ಎ ನರಸಿಂಹಮೂರ್ತಿ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಸಹಬಾಳ್ವೆ ಸಂಘಟನೆಯ ಅಧ್ಯಕ್ಷೆ ದೀಪಿಕಾ, ಚಿಂತಕ ನಿಕೇತ್ ರಾಜ್ ಮೌರ್ಯ, ಹಿರಿಯ ಪತ್ರಕರ್ತ ಸಿ ಕೆ ಮಹೇಂದ್ರ, ಎಯಟಿಯುಸಿಯ ಗಿರೀಶ್, ಸಾಮಾಜಿಕ ಹೋರಾಟಗಾರರಾದ ತಾಜುದ್ದೀನ್ ಷರೀಫ್ ಭಾಗವಹಿಸಲಿದ್ದಾರೆ. ವಹಿಸಲಿದ್ದಾರೆ.~