ತುಮಕೂರು | `ಒಲವ ಹಾಡು’ ಕವನ ಸಂಕಲನ ಬಿಡುಗಡೆ

Date:

Advertisements

ಸಿದ್ಧ ಮಾದರಿಗಳನ್ನು ಮೀರುವ ಹಾದಿಯಲ್ಲಿ ದಾರಿಬುತ್ತಿ ಬಳಗ ತನ್ನದೇ ಹೆಜ್ಜೆಗಳನ್ನು ಇಡುತ್ತಿದೆ. ಪ್ರೀತಿಯನ್ನು ಹಂಚುವ ಜತೆ ಜತೆಗೆ ನೇಪಥ್ಯದಲ್ಲಿರಬಹುದಾದ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶವಾಗಿದೆ. ನೋವು ಸಂಕಟ ಮೀರುವಂತೆಯೇ ಸುಖ, ಸಂತೋಷವನ್ನು ಮೀರುವುದಾಗಬೇಕು. ಅದನ್ನು ಕಾವ್ಯ ಕಲಿಸುತ್ತದೆ ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ ಹ ರಮಾಕುಮಾರಿ ಅಭಿಪ್ರಾಯಪಟ್ಟರು.

ತುಮಕೂರು  ನಗರದ ಜನಚಳವಳಿ ಕೇಂದ್ರದಲ್ಲಿ ದಾರಿಬುತ್ತಿ ಪ್ರಕಾಶನದ ವತಿಯಿಂದ ನಡೆದ ಕೆ ಬಿ ಲಕ್ಷ್ಮೀ ಅವರ `ಒಲವ ಹಾಡು’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

“ಪ್ರಕ್ಷುಬ್ದ ಬದುಕಿಗೆ ಪ್ರೀತಿಯೂ, ಸಂಕಟಗಳ ಬಿಡುಗಡೆಗೆ ಸಾಹಿತ್ಯವೂ ಅನಿವಾರ್ಯವಾಗಿದೆ. ದಾರಿಬುತ್ತಿ ಒಂದು ಸಾಹಿತ್ಯದ ಓದು ಬಳಗ. ಸಾಹಿತ್ಯದ ಓದು, ಗ್ರಹಿಕೆ ಮತ್ತು ಅಳವಡಿಕೆ ಮೂಲಕ ನಮ್ಮ ಪರಿವರ್ತನೆಯಾದರೆ ನಂತರ ಸಮಾಜ ಪರಿವರ್ತನೆಯಾಗುತ್ತದೆಯೆಂದು ನಂಬಿ ತಿಂಗಳಿಗೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ” ಎಂದರು.

Advertisements

ಪುಸ್ತಕ ಕುರಿತು ಡಾ ಆಶಾರಾಣಿ ಬಗ್ಗನಡು ಮಾತನಾಡಿ, “ಒಲವ ಹಾಡು ಕವನ ಸಂಕಲನದಲ್ಲಿನ ಕವಿತೆಗಳು ಒಲುಮೆಯ ಮಹತ್ತನ್ನು ಕಾಣಿಸುತ್ತವೆ. ಪರಸ್ಪರ ಅಪನಂಬಿಕೆ, ಅನುಮಾನಗಳು ಆಳುತ್ತಿರುವ ಈ ಹೊತ್ತಿನಲ್ಲಿ ಒಲವು ಸಿನೀಮೀಯವಾಗದೆ, ಸೋಗಾಗದೆ ನಮ್ಮ ಜೀವನೋತ್ಸಾಹವನ್ನು ಹೆಚ್ಚಿಸುವ ಅಗತ್ಯವಿದೆ. ಈ ಕೃತಿಯ ಅಷ್ಟೂ ಕವಿತೆಗಳು ಒಲವನ್ನೇ ಹಾಡಾಗಿಸಿ ಓದುಗರನ್ನು ಮುದಗೊಳಿಸುತ್ತವೆ” ಎಂದರು.

ಲೇಖಕಿ ಚಂದ್ರಪ್ರಭ ಕಠಾರಿ ಮಾತನಾಡಿ, “ಇಂದಿನ ಸಾಹಿತ್ಯದಲ್ಲಿ ಆಶಯಗಳಿವೆ, ಆಕೃತಿಗಳಿಲ್ಲ. ಆಶಯಗಳು ಆಕೃತಿಯಾಗಿ ಮೂಡಿದಾಗ ಸಾಹಿತ್ಯದ ಸಾರ್ಥಕತೆ ಆಗುತ್ತದೆ” ಎಂದ ಅವರು ಪುಸ್ತಕ ಪ್ರಕಟಣೆಯಲ್ಲಿ  ಆಗಬಹುದಾದ ವಂಚನೆಗಳ ಎಚ್ಚರಿಕೆ ನೀಡಿದರು.

“ಕವಿಯೊಬ್ಬನಿಗೆ ಪ್ರಕಾಶಕರು ಒತ್ತಾಸೆ ನೀಡುವ ನಿಟ್ಟಿನಲ್ಲಿ ದಾರಿಬುತ್ತಿ ಆಪ್ತವಾಗಿ ಸ್ಪಂದಿಸುವುದು ಅಭಿನಂದನಾರ್ಹ” ಎಂದರು.

ಲೇಖಕಿ ಡಾ. ಜಿ ಸುಧಾ ಮಾತನಾಡಿ, “ಜಗತ್ತು ರೊಟ್ಟಿಗೂ ಹಸಿದಿದೆ, ಪ್ರೀತಿಗೂ ಹಸಿದಿದೆ. ಹಸಿವನ್ನು ಅರ್ಥೈಸಿಕೊಂಡು ಪ್ರೀತಿಯ ಬುತ್ತಿ ಹಂಚುವುದು ನಮ್ಮ ಕರ್ತವ್ಯವೂ ಆಗಬೇಕಿದೆ. ದಾರಿಬುತ್ತಿಯ ಪ್ರಯತ್ನಗಳೆಲ್ಲ ಮನುಷ್ಯತ್ವಕ್ಕೆ ತುಡಿಯುತ್ತಿರುವುದು ಶ್ಲಾಘನೀಯ” ಎಂದು ನುಡಿದರು.

ಕವಯಿತ್ರಿ ಕೆ ಬಿ ಲಕ್ಷ್ಮೀ ಕಾವ್ಯದ ದಾರಿಯ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೃಷ್ಣ, ನಾರಾಯಣಗೌಡ, ರಜನಿ, ಭಾಗ್ಯ ಭಾವಗೀತೆಗಳನ್ನು ಹಾಡಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಸ್ಲಂ ನಿವಾಸಿಗಳ ಕುಂದುಕೊರತೆ ಸಭೆ ನಿಗದಿಗೆ ಒತ್ತಾಯ

ಕಾರ್ಯಕ್ರಮದಲ್ಲಿ ಡಾ. ಗಿರಿಜಾರಾವ್, ಸರ್ಕಾರಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಪುಟ್ಟನರಸಯ್ಯ, ಸಿ ಲಿಂಗಯ್ಯ, ಗಂಗಲಕ್ಷೀ, ಶೈಲಜ, ಲೋಕೇಶ್, ಮನ್ವಿತ್, ಬಿ ಸಿ ಪ್ರವೇಣಿ, ಆನಂದ್, ದಾದಾಪೀರ್, ರಂಜಿತ್, ತಿಲಕ್, ಎಂ ಎನ್ ತರಂಗಿಣಿ, ನಿಮ್ಹಾನ್ಸ್ ಉದ್ಯೋಗಿಗಳು, ಸುಕಾಂಕ್ಷ ಟ್ರಸ್ಟ್‌ನ ಯಶೋಧ, ಜ್ಞಾನೇಂದ್ರ, ಮಧುಸೂದನ ಬೆಳಗುಲಿ, ಲೇಖಕಿ ಗೀತಾಲಕ್ಷ್ಮಿ,  ಪ್ರವೀಣ, ಎಸ್ ಆರ್ ದರ್ಶನ್, ಲೇಖಕಿ ರಂಗಮ್ಮ ಹೊದೆಕಲ್‌, ವಿದ್ಯಾರ್ಥಿ ರಂಜಿತ್, ಕವಯಿತ್ರಿಯ ತಂದೆ ಕೆ ಬಸವರಾಜು, ತಾಯಿ ಎಂ ಹೆಚ್ ದೇವರಾಜಮ್ಮ ಸೇರಿದಂತೆ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X