ವೃದ್ಧೆಯ ತೆಂಗಿನ ತೋಟ ನಾಶವಾಗಿದ್ದು, ದುಷ್ಕರ್ಮಿಗಳ ದ್ವೇಷದ ಅಟ್ಟಹಾಸಕ್ಕೆ 42 ತೆಂಗಿನ ಮರಗಳು ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಜಮೀನು ವಿವಾದದ ಹಿನ್ನೆಲೆಯಲ್ಲಿ ತುರುವೇಕೆರೆ ತಾಲೂಕಿನ ಅಪ್ಪಸಂದ್ರ ಗ್ರಾಮದ ವೃದ್ದೆ ಸಿದ್ದಗಂಗಮ್ಮ ಎಂಬುವರಿಗೆ ಸೇರಿದ 42 ತೆಂಗಿನ ಮರಗಳನ್ನು ಕಿಡಿಗೇಡಿಗಳು ಕಡಿದುರುಳಿಸಿದ್ದಾರೆ. ಸುಮಾರು 12 ವರ್ಷಗಳಿಂದ ಕಷ್ಟಪಟ್ಟು ಕಾಪಾಡಿಕೊಂಡು ಬಂದಿದ್ದ ತೆಂಗಿನ ತೋಟ ಫಲಬಿಡುವ ಹೊತ್ತಿನಲ್ಲಿ ದುಷ್ಕರ್ಮಿಗಳ ದ್ವೇಷದ ಅಟ್ಟಹಾಸಕ್ಕೆ ಬಲಿಯಾಗಿದೆ.
ವೃದ್ದೆ ಸಿದ್ದಗಂಗಮ್ಮ ಅವರಿಗೆ ಅಪ್ಪಸಂದ್ರ ಗ್ರಾಮದ ಸರ್ವೆ ನಂ 120 ರಲ್ಲಿ 04 ಎಕರೆ 01 ಗುಂಟೆ ಪಿತ್ರಾರ್ಜಿತವಾಗಿ ಬಂದಿತ್ತು. ಕೆಲವು ವರ್ಷಗಳಿಂದ ಪಕ್ಕದ ಜಮೀನಿನ ಮಾಲಿಕ ಕಾಳೇಗೌಡರ ಮಕ್ಕಳಾದ ಉಮೇಶ, ರಾಜ ಎಂಬುವರಿಗೂ ವೃದ್ದೆ ಸಿದ್ದಗಂಗಮ್ಮ ನಡುವೆ ಜಮೀನು ವಿವಾದವಿತ್ತು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಗುಡ್ಡ ಕುಸಿತ; ಚಾರ್ಮಾಡಿ ಘಾಟ್ ರಸ್ತೆಯೂ ಬಂದ್
“ಇತ್ತೀಚೆಗೆ ಸರ್ವೆ ಅಧಿಕಾರಿಗಳು ಇಬ್ಬರ ಜಮೀನನ್ನೂ ಸರ್ವೇ ಮಾಡಿ, ಇಬ್ಬರ ಜಮೀನಿಗೆ ಗಡಿ ಗುರುತು ಮಾಡಿದ್ದರು. ಇದೇ ಕಾರಣಕ್ಕೆ ಉಮೇಶ, ರಾಜ ಅತಿಕ್ರಮವಾಗಿ ಪ್ರವೇಶ ಮಾಡಿ ತೆಂಗಿನ ಮರಗಳನ್ನು ಕಡಿದು ಹಾಕಿದ್ದಾರೆ” ಎಂದು ವೃದ್ದೆ ಸಿದ್ದಗಂಗಮ್ಮ ಆರೋಪಿಸಿದ್ದಾರೆ.
ಈ ಕುರಿತು ವೃದ್ಧೆ ಸಿದ್ಧಗಂಗಮ್ಮ ದಂಡಿನಶಿವರ ಪೊಲೀಸರಿಗೆ ದೂರು ನೀಡಿದ್ದು, ಸೂಕ್ತ ರಕ್ಷಣೆ ಮತ್ತು ಪರಿಹಾರ ಕೊಡಿಸಿ ಎಂದು ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಆತ್ಮೀಯರೇ, ಈ ದುಷ್ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com
ತುಮಕೂರು ಪೋಲೀಸ್ ಇಲಾಖೆ ಅಧಿಕಾರಿಗಳು ಇಂತಹ ಪ್ರಕರಣಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು…. ಜನರಿಗೆ ಪೋಲೀಸ್ ಇಲಾಖೆಯ ಮೇಲೆ ನಂಬಿಕೆ ಇಲ್ಲ ಭಯ ಮೊದಲೇ ಇಲ್ಲ…ಮಾನ್ಯ ಗೃಹ ಸಚಿವರು ಕಠಿಣ ಕಾನೂನು ಕ್ರಮಕ್ಕೆ ಆದೇಶ ನೀಡಬೇಕು…. ಮರಗಳನ್ನು ಕಡಿದವರ ಕೈ ಕಡಿದು ಪಾಠ ಕಲಿಸಿ…. ಇದನ್ನು ನೋಡಿ ಬೇರೆಯವರು ಕೂಡ ಭಯದಿಂದ ಇರುತ್ತಾರೆ…ಕೆಲಸ ಬಾರದ ಸಂಘಟನೆಗಳು ಚಳಿ ಮಳೆಗೆ ಬೆಚ್ಚಗೆ ಮಲಗಿದ್ದಾರೆ…..ಸಮಾಜ ತಲೆ ತಗ್ಗಿಸುವ ಘಟನೆ ಇದು