ತುಮಕೂರು | ಸಂಘಟನೆಗಳಿಗೆ ಸೈದ್ಧಾಂತಿಕ ಬದ್ಧತೆ ಬೇಕು : ಪ್ರೊ.ಕೆ. ದೊರೆರಾಜು

Date:

Advertisements

ವಿಜೃಂಭಣೆ ,ಅದ್ದೂರಿತನ ಮಹಾನ್ ವ್ಯಕ್ತಿಗಳ ಚಿಂತನೆಗಳನ್ನು ಆಚರಣೆಗೆ ತರುವ ಬದಲು ಅವರನ್ನು ಆರಾಧನೆಗಷ್ಟೇ ಸಿಮಿತಗೊಳಿಸಿ, ಅವರ ತತ್ವ-ಅದರ್ಶಕಗಳಿಗೆ ತದ್ವಿರುದ್ಧವಾದಂತಹ ನಡವಳಿಕೆಗಳನ್ನು ಅವರ ಅನುಯಾಯಿಗಳಿಂದಲೇ ಅನುಸರಿಸುತ್ತಿರುವ ಪರಿಸ್ಥಿತಿಯಲ್ಲಿ ನಾವಿಂದಿದ್ದೇವೆ ಎಂದು ಪ್ರೊ.ಕೆ. ದೊರೆರಾಜು ಮಾರ್ಮಿಕವಾಗಿ ಕುಟುಕಿದರು.

 ತುಮಕೂರು ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ತುಮಕೂರು ಪೌರಕಾರ್ಮಿಕರ ಸಂಘ, ಸಿಐಟಿಯು, ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ, ಕಸದ ಆಟೋ ಚಾಲಕರು ಮತ್ತು ಸಹಾಯಕರು, ಲೋರ್ಸ್ ಮತ್ತು ಕ್ಲೀರ‍್ಸ್ ಸಂಘ, ನಗರ ಪಾಲಿಕೆ ನೀರು ಸರಬರಾಜು ನೌಕರರ ಸಂಘ,  ಜಂಟಿಯಾಗಿ ಸಂಘಟಿಸಿದ್ದ ಡಾ. ಬಾಬು ಜಗಜೀವನ್ ರಾಮ್ ಹಾಗು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಸುಳ್ಳು ಹೋರಾಟಗಾರರನ್ನು ಸೃಷ್ಟಿಸಲಾಗುತ್ತಿದೆ. ಸಂಘಟನೆಗಳಿಗೆ ಸೈದ್ಧಾಂತಿಕ ಬದ್ಧತೆ ಅಗತ್ಯವಾಗಿದೆ, ಸೈದ್ಧಾಂತಿಕ ಬದ್ದತೆಯ ಹೋರಾಟಗಳೆ ಇವತ್ತು ಜನರನ್ನ ಸಂಕಷ್ಟಗಳಿಂದ ಪಾರುಮಾಡಲು ಸಾಧ್ಯ ಎಂದರು

1001323971

 ಇಂದು ಜಾತಿಯನ್ನು ಬಂಡವಾಳ ಮಾಡಿಕೊಂಡಿರುವ ಕೆಲವರು ತಮ್ಮ ನಾಯಕರ ಅನುಕೂಲಕ್ಕಾಗಿ ಸಂಘಟನೆಗಳನ್ನು ಕಟ್ಟುತ್ತಿದ್ದಾರೆ. ಜಾತಿ- ಜಾತಿಗಳ ನಡುವೆ ವೈಷಮ್ಯವನ್ನು ಹುಟ್ಟು ಹಾಕಿ ಸಮಾಜದಲ್ಲಿ ಜನ ಸಮುದಾಯಗಳ ಛಿದ್ರಿಕರಣಕ್ಕೆ ಕಾರಣವಾಗುತ್ತಿದ್ದಾರೆ, ಇದು ಆರೋಗ್ಯಕರ ಸಮಾಜಕ್ಕೆ ಮಾರಕ ಎಂದು ಕಳವಳ ವ್ಯಕ್ತಪಡಿಸಿದವರು. ಸಾಮಾಜಿಕ ಬದುಕು ಕಟ್ಟಿಕೊಳ್ಳಲು ನಾವೆಲ್ಲರೂ ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ನಮ್ಮದಾಗಿಸಿಕೊಳ್ಳಬೇಕಾಗಿದೆ ಎಂದರು. 

Advertisements

ಸಮುದಾಯಗಳಿಗೆ ಘನತೆಯ ಬದುಕು ಕಟ್ಟಿಕೊಳ್ಳಲು, ಭಾರತೀಯ ಸಂವಿಧಾನ ಕಾರಣ ಅದಕ್ಕೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದವರು .

ಅಂಬೇಡ್ಕರ್ ಅವರನ್ನು ಆರಾಧಿಸಿ ಅದ್ದೂರಿ ತನ ತೋರುವ ಬದಲು ಅವರ ತತ್ವಗಳ ಆಚರಣೆ ಇಂದಿನ ತುರ್ತು ಅಗತ್ಯ ಎಂದು ಅವರು ಪ್ರತಿಪಾದಿಸಿದರು.

 ಮುನಿಸಿಪಲ್ ಕಾರ್ಮಿಕರು ಕಳೆದ 23 ವರ್ಷಗಳಿಂದ ನಿರಂತರವಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಾಗೂ ಡಾ. ಜಗಜೀವನ ರಾಮ್ ಅವರ ಜಯಂತಿಗಳನ್ನು ಆಚರಿಸುತ್ತಿರುವುದು ಹಾಗೆ ಮುನಿಸಿಪಲ್ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಾಧನೆಗೆ ಪ್ರೋತ್ಸಹಿಸುತ್ತಿರುವುದರ ಜೊತೆಗೆ ಕಾರ್ಮಿಕರ ಬದುಕಿನ ಪ್ರಶ್ನೆಗಳಲ್ಲಿ ಬದ್ಧತೆಯ ಹೋರಾಟಕ್ಕೆ ಅವರು ಸಿಐಟಿಯು ಸಂಘಟನೆಯನ್ನು ಅಭಿನಂದಿಸಿದರು.

 ಸಿಐಟಿಯುನ ರಾಜ್ಯ ಕಾರ್ಯದರ್ಶಿ ಕೆ. ಮಹಂತೇಶ್  ಮಾತನಾಡಿ ಆಧುನಿಕ ನಾಗರಿಕ ಸಮಾಜದಲ್ಲೂ ಅಸ್ಪೃಶ್ಯತೆ ಆಚರಣೆ ಇನ್ನೂ ಇರುವುದು ನಾಚಿಕೆಗೇಡಿನ ವಿಚಾರ ಎಂದರು. ಅಂಬೇಡ್ಕರ್ ಅವರು ಹಾಗೂ ಜೀವನ ರಾಮ್ ಅವರ ಕೊಡುಗೆಗಳನ್ನು ವಿವರಿಸಿದವರು .ದಲಿತ ಹಾಗೂ ದಮನಿತ ಸಮುದಾಯಗಳು ಶಿಕ್ಷಣವನ್ನು ನಿರ್ಲಕ್ಷಿಸದೆ ಮಕ್ಕಳನ್ನು ಶಶಿತರಾಗಿಸಲು ಹೆಚ್ಚು ಗಮನ ನೀಡುವಂತೆ ಕೊರಿದರು.

1001323969

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಕೆ ಬಾಲಕೃಷ್ಣ ಮಾತನಾಡಿ 364 ದಿನವೂ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಉಲ್ಲಂಘಿಸುವವರು ಇಂದು ಆಂಬೇಡ್ಕರ್ ಅವರಿಗೆ ಜೊತೆ ಸರಿಸಮವಾದ ಕಟ್ ಔಟ್ ಹಾಕಿಸಿಕೊಂಡು ವಿಜ್ಜರಂಭಿಸುವುದು ವಿಪರ್ಯಾಸ ಎಂದರು. 

ಅಂಬೇಡ್ಕರ್ ನೀಡಿರುವ ಶಿಕ್ಷಣ ಸಂಘಟನೆ ಹೋರಾಟವನ್ನು ಬಿಡದೆ ಮುಂದುವರಿಸಬೇಕೆಂದರು.

ಹಮಾಲಿ ಕಾರ್ಮಿಕರ ಸಂಘಟನೆಯ ಗಂಗಾಧರ್, ನೀರು ಸರಬರಾಜು ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷ ಕುಮಾರ್, ಮಹಾನಗರಪಾಲಿಕೆಯ ವ್ಯವಸ್ಥಾಪಕ ಮನೋಹರ್, ಲಾರಿ ಚಾಲಕರ ಸಂಘಟನೆಯ ಅಧ್ಯಕ್ಷ ಪ್ರಕಾಶ್, ಕಸದ ವಾಹನ ಚಾಲಕರು, ಸಹಾಯಕರು ಲೋಡರ್ಗಳು ಮತ್ತು ಕ್ಲೀನರ್‌ಗಳ ಸಂಘದ ಶ್ರೀನಿವಾಸ್ ಅವರು ಸಮಾರಂಭದಲ್ಲಿ ಮಾತನಾಡಿದರು.

ಸಮಾರಂಭದಲ್ಲಿ ಡಾ.ಬಾಬು ಜನಜೀವನ್ ರಾಮ್ ಪ್ರಶಸ್ತಿ ಪುರಸ್ಕೃತ ಚಿಂತಕ ಪ್ರೋ.ಕೆ. ದೋರೈರಾಜು ಅವರನ್ನು ಅಭಿನಂಧಿಸಲಾಯಿತು. 

ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಮುನಿಸಿಪಲ್ ಕಾರ್ಮಿಕರ ಮಕ್ಕಳನ್ನು ಸಮಾರಂಭದಲ್ಲಿ ಸಮಾರಂಭದಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ತುಮಕೂರು ಮಹಾ ನಗರ ಪಾಲಿಕೆಯಲ್ಲಿ ಎರಡು ಸುತ್ತಿನಲ್ಲಿ ಪೌರ ಕಾರ್ಮಿಕರ ಕಾಯಂಮಾತಿಗೆ ಪ್ರಮಾಣಿಕವಾಗಿ ದುಡಿದವರ ಪೈಕಿ ವ್ಯವಸ್ಥಾಪಕ ಮಧುಸೂಧನ್ ಅವರನ್ನು ಸನ್ಮಾನಿಸಲಾಯಿತು. 

ಈ ಪೈಕಿ ಅಯುಕ್ತರಾದ  ಅಶ್ವಿಜ, ಉಪ ಅಯುಕ್ತರಾದ ಗಿರೀಶ್, ಸಮಾಜ ಕಲ್ಯಾಣ ಇಲಾಖೆ ಸಿಬಂಧಿಯ ಪ್ರಮಾಣಿಕತೆಯನ್ನು ಪೌರಕಾರ್ಮಿಕರು ಸ್ಮರಿಸಿದರು. 

ಕಳೆದ 25 -30 ವರ್ಷಗಳಿಂದ ತುಮಕೂರು ನಗರದಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ಮಾಡಿದ ಪೌರಕಾರ್ಮಿಕರಾದ ಸಂತೆಪೇಟೆ ವೆಂಕಟೇಶ್ ಮತ್ತು ರಂಗಸ್ವಾಮಿಯ ಹಾಗೂ ಚಿಕ್ಕಣ್ಣ ಇವರಿಗೆ ಸನ್ಮಾನಿಸಲಾಯಿತು. 

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ವಹಿಸಿದ್ದರು. ರಾಜೇಶ್  ಸ್ವಾಗತಿಸಿದರೆ ಪ್ರಧಾನ ಕಾರ್ಯದರ್ಶಿ ಎಂ ಕೆ ಸುಬ್ರಹ್ಮಣ್ಯ  ಪ್ರಾಸ್ತಾವಿಕ ಮಾತುಗಳನ್ನಾಡಿದರು,  ಎಂ. ಮಂಜುನಾಥ ವಂದಿಸಿದರು

WhatsApp Image 2024 08 09 at 10.52.48 1578a566
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X