ವೀಚಿ (ವೀ. ಚಿಕ್ಕವೀರಯ್ಯ) ಸಾಹಿತ್ಯ ಪ್ರತಿಷ್ಠಾನವು ತುಮಕೂರು ಜಿಲ್ಲೆಯ ಮೊಟ್ಟಮೊದಲ ಸಾಹಿತ್ಯಿಕ ಪ್ರತಿಷ್ಠಾನ (ಸ್ಥಾಪನೆ:2000) ವಾಗಿದ್ದು, 2023ರಲ್ಲಿ ಪ್ರಕಟವಾದ ಸಾಹಿತ್ಯ ಕೃತಿಗಳನ್ನು ಪರಿಗಣಿಸಿ 2024 ನೇ ಸಾಲಿನ ಸಾಹಿತ್ಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಬೆಂಗಳೂರಿನ ಪಿ. ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿಗೆ 25 ಸಾವಿರ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡ ‘ವೀಚಿ ಸಾಹಿತ್ಯ ಪ್ರಶಸ್ತಿ’ ಹಾಗೂ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದರಾಜು ಎಂ. ಕಲ್ಲೂರು ಇವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥಾಸಂಕಲನಕ್ಕೆ 5,000 ರೂ.ಗಳ ನಗದು ಪುರಸ್ಕಾರ ಮತ್ತು ಸ್ಮರಣಿಕೆಯನ್ನು ಒಳಗೊಂಡ ‘ವೀಚಿ ಯುವ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಕತೆಗಾರ ತುಂಬಾಡಿ ರಾಮಯ್ಯ, ರಂಗಕರ್ಮಿ ಬೇಲೂರು ರಘುನಂದನ್, ಕವಿ ಟಿ. ಯಲ್ಲಪ್ಪ ಅವರಿದ್ದ ತೀರ್ಪುಗಾರರ ಸಮಿತಿಯಿಂದ ಸಲ್ಲಿಕೆಯಾಗಿದ್ದ 180 ಕೃತಿಗಳನ್ನು ಪರಿಶೀಲಿಸಿ, ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಪುರಸ್ಕೃತರನ್ನು ಪ್ರತಿಷ್ಠಾನದ ಗೌರವ ಸಲಹೆಗಾರರಾದ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರು ಅಭಿನಂದಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜೂನ್ ತಿಂಗಳಲ್ಲಿ ಆಯೋಜಿಸಲಾಗುವುದೆಂದು ವೀಚಿ ಸಾಹಿತ್ಸ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಎಂ.ಎಚ್. ನಾಗರಾಜ್ ತಿಳಿಸಿದ್ದಾರೆ