ತುಮಕೂರು | ಪಾರ್ಥಸಾರಥಿಯವರ ನುಡಿನಮನ ಕಾರ್ಯಕ್ರಮ

Date:

Advertisements

ದಲಿತ ಸಂಘರ್ಷ ಸಮಿತಿಯ ಆರಂಭದಿಂದಲೂ ಸಕ್ರಿಯವಾಗಿದ್ದ ಪಾರ್ಥಸಾರಥಿ ಚಳವಳಿಯಲ್ಲಿ ವಿಕಸಿತಗೊಂಡಿದ್ದ ಕ್ರಿಯಾಶೀಲ ಹೋರಾಟಗಾರ ಎಂದು ಚಿಂತಕ ಪ್ರೊ ದೊರೈರಾಜು ಅಭಿಪ್ರಾಯಪಟ್ಟರು.

ತುಮಕೂರು ನಗರದ ಐಎಂಎ ಸಭಾಂಗಣದಲ್ಲಿ ನಡೆದ ಒಳಮೀಸಲಾತಿ ಹೋರಾಟಗಾರ ದಿವಂಗತ ಸಿ ಎಸ್ ಪಾರ್ಥಸಾರಥಿಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಗ್ರಾಮೀಣ ಪ್ರದೇಶದ ಸಂಕುಚಿತ ಮನೋಭಾವದ ವಿದ್ಯಾರ್ಥಿಯಾಗಿದ್ದ ಪಾರ್ಥಸಾರಥಿ, ಚಳವಳಿಯಿಂದ ವಿಸ್ತಾರವಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು. ಪರಿಪೂರ್ಣ ಸಮಾಜದ ಬದಲಾವಣೆಯ ತುಡಿತ ಹೊಂದಿದ್ದ ಪಾರ್ಥ, ನಿರ್ಲಕ್ಷಿತ ಸಮುದಾಯಗಳ ಮಕ್ಕಳಿಗಾಗಿ ಕಂಪ್ಯೂಟರ್ ಶಿಕ್ಷಣ ಪ್ರಾರಂಭಿಸಿದ್ದರು. ದೇವದಾಸಿ ಮಹಿಳೆಯರಿಗಾಗಿ ಮುಧೋಳದಲ್ಲಿ ಮಹಿಳಾ ಸ್ವಸಹಾಯ ಸಂಘವನ್ನು ಪ್ರಾರಂಭಿಸಲು ನೆರವಾಗಿದ್ದರು, ನಿರುದ್ಯೋಗಿ ಯುವಕರಿಗೆ ಕೌಶಲ್ಯ ಕಲ್ಪಿಸಲು ಶ್ರಮಿಸುತ್ತಿದ್ದರು. ಪಾರ್ಥಸಾರಥಿ ಅವರಿಗಿದ್ದ ಸಮುದಾಯ ಕಳಕಳಿ ಬದ್ಧತೆ, ನಮ್ಮ ಸಮುದಾಯದ ರಾಜಕಾರಣಿಗಳಿಗೆ ಇದ್ದಿದ್ದರೆ ನಮ್ಮ ಸಮುದಾಯ ಇನ್ನಷ್ಟು ಅಭಿವೃದ್ಧಿಯಾಗುತ್ತಿತ್ತು. ಪಾರ್ಥ ಮಾಡಿದ ಕೆಲಸದಲ್ಲಿ ಒಂದರಷ್ಟು ಕೆಲಸವನ್ನಾದರೂ ನಾವೆಲ್ಲ ಮಾಡಬೇಕು” ಎಂದು ಮನವಿ ಮಾಡಿದರು.

Advertisements

ಹೈಕೋರ್ಟ್ ವಕೀಲ ಹೆಚ್ ವಿ ಮಂಜುನಾಥ್ ಮಾತನಾಡಿ, “ತಳಸಮುದಾಯಗಳಿಗಾಗಿ ತುಮಕೂರಿನಿಂದ ಸುಪ್ರೀಂಕೋರ್ಟ್‌ವರೆಗೆ ಸಂಪರ್ಕ ಹೊಂದಿದ್ದ ಪಾರ್ಥಸಾರಥಿಯವರು
ಒಳಮೀಸಲಾತಿ, ಸಮುದಾಯದ ವಿಚಾರಕ್ಕಾಗಿ ಸಾಕಷ್ಟು ಬಾರಿ ನನ್ನೊಂದಿಗೆ ಮಾತನಾಡುತ್ತಿದ್ದರು. ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ನೀಡಿ ತಳ ಸಮುದಾಯಗಳಿಗೆ ಆಗುತ್ತಿದ್ದ ಅನ್ಯಾಯವನ್ನು ತೆಗೆದಿಟ್ಟು, ಹೋರಾಟವನ್ನು ರೂಪಿಸಿದ್ದರು. ಅವರಿಂದಲೇ ನಾನು ಸುಳ್ಳು ಜಾತಿ ಪ್ರಮಾಣಪತ್ರದ ಬಗ್ಗೆ ಮಾತನಾಡುವಂತಾಗಿದೆ” ಎಂದು ನೆನಪಿಸಿಕೊಂಡರು.

ರೇಷ್ಮೆ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ. ವೈ ಕೆ ಬಾಲಕೃಷ್ಣಪ್ಪ ಮಾತನಾಡಿ, “ಪಾರ್ಥಸಾರಥಿಯವರು ದಲಿತ ಹೋರಾಟದ ಮುಖ್ಯ ವೇದಿಕೆಯಲ್ಲಿ ಕೆಲಸ ಮಾಡಿದರು. ಬೀದಿ ಹೋರಾಟವನ್ನು ಸಂವಿಧಾನದ ಚೌಕಟ್ಟಿನಲ್ಲಿ ಮೀಸಲಾತಿ ವರ್ಗೀಕರಣ ಮಾಡಿಸಿದ ರೂವಾರಿ, ಅವಕಾಶ ವಂಚಿತ ಸಮುದಾಯದ ಪರವಾಗಿ ಹಗಲು ರಾತ್ರಿ ಕೆಲಸ ಮಾಡಿದ ಹೋರಾಟಗಾರ” ಎಂದು ಸ್ಮರಿಸಿದರು.

“ಪ್ರತಿದಿನ ಸಮುದಾಯದ ಪರವಾಗಿ ತುಡಿಯುತ್ತಿದ್ದ, ದುಡಿಯುತ್ತಿದ್ದ ಪಾರ್ಥಸಾರಥಿ ಅವರಿಗೆ ಒಳಮೀಸಲಾತಿಯಿಂದ ಎಡ-ಬಲ ಸಮುದಾಯಗಳಿಗೆ ಅನುಕೂಲವಾಗಲಿದೆ. ಎರಡು ಸಮುದಾಯಗಳು ಒಂದಾಗದೇ ಹೋದರೆ ಅವಕಾಶಗಳು ಕುಂಠಿತವಾಗಲಿವೆಯೆಂದು ನಂಬಿ ಆನಾರೋಗ್ಯವನ್ನು ಬದಿಗಿಟ್ಟು ಹೋರಾಟ ಮಾಡಿದರು. ಸಮುದಾಯಕ್ಕಾಗಿ ಯಾವುದೇ ವಿಚಾರಧಾರೆಯುಳ್ಳ ಸಂಘ ಸಂಸ್ಥೆಗಳೊಂದಿಗೆ ಒಡನಾಟವನ್ನು ಇಟ್ಟುಕೊಂಡು ಸಮುದಾಯದ ಹಕ್ಕನ್ನು ಪ್ರತಿಪಾದಿಸಿ, ಸಮುದಾಯಕ್ಕಾಗಿ ದಕ್ಕಬೇಕಿರುವ ಸೌಲಭ್ಯವನ್ನು ಕಲ್ಪಿಸಲು ತೆರೆಮರೆಯಲ್ಲಿ ದುಡಿಯುತ್ತಿದ್ದ ಪಾರ್ಥಸಾರಥಿ ವೇದಿಕೆಗೆ ಬರುತ್ತಿರಲಿಲ್ಲ. ವೇದಿಕೆಯಿಂದ ದೂರ ಇರುತ್ತಲೇ ಹೋರಾಟಕ್ಕೆ ಅಗತ್ಯವಾದ ಮಾಹಿತಿಯನ್ನು ಒದಗಿಸುತ್ತಿದ್ದರು” ಎಂದರು.

ಕುವೆಂಪು ವಿಶ್ವವಿದ್ಯಾಲಯದ ಪ್ರೊ.ಶಿವಾನಂದ ಕೆಳಗಿನಮನಿ ಮಾತನಾಡಿ, “ವಿಶ್ವವಿದ್ಯಾಲಯಗಳಲ್ಲಿ ಇರುವವರು ಸಮುದಾಯ, ಹೋರಾಟದಿಂದ ದೂರ ಇರುತ್ತಾರೆ. ಆದರೆ ಇವರೊಂದಿಗಿನ ಒಡನಾಟ ನನ್ನ ವ್ಯಕ್ತಿತ್ವ ಬದಲಾಗಲು ಕಾರಣವಾಯಿತು. ಇಡೀ ಭಾರತದಲ್ಲಿ ಮಾತಂಗ ಸಮುದಾಯ ನೆಲೆಯನ್ನು ಸುದೀರ್ಘವಾಗಿ ಅಧ್ಯಯನ ಮಾಡಿದ್ದರು. ವೈಯಕ್ತಿಕವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ಸಮುದಾಯಕ್ಕಾಗಿ ದುಡಿದ ಪಾರ್ಥಸಾರಥಿಯವರು ವಿಶ್ವವಿದ್ಯಾಲಯಗಳಿಂದ ಉನ್ನತ ಹುದ್ದೆಗಳವರೆಗೆ ನನ್ನ ಸಮುದಾಯದವರು ಇರಬೇಕು ಎಂದು ಆಲೋಚಿಸುತ್ತಿದ್ದರು. ಅವರ ಪ್ರಾಮಾಣಿಕ ಸಮುದಾಯದ ಸೇವೆಯಿಂದ ಉನ್ನತ ಅಧಿಕಾರಿಗಳು, ರಾಜಕಾರಣಿಗಳ ಸಂಪರ್ಕ ಹೊಂದಿದ್ದರೂ ಕೂಡಾ ತನಗಾಗಿ ಏನನ್ನೂ ಮಾಡಿಕೊಳ್ಳಲಿಲ್ಲ” ಎಂದು ಸ್ಮರಿಸಿದರು.

ಜಿ ಪಂ ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, “ಪಾರ್ಥಸಾರಥಿ ಅವರಿಗಿದ್ದ ಸಮುದಾಯದ ಕಾಳಜಿ ಬೇರೆ ಹೋರಾಟಗಾರರಲ್ಲಿ ಕಾಣಲಿಲ್ಲ. ರಾಜಕಾರಣಿಗಳಂತೆ ಸಮುದಾಯಕ್ಕಾಗಿ 24 ಗಂಟೆ ಆಲೋಚಿಸುತ್ತಿದ್ದ ವ್ಯಕ್ತಿ, ಸಮುದಾಯದವರಿಗಾಗಿ ಹಗಲು ರಾತ್ರಿ ಕಳಕಳಿಯಿಂದ ಕೆಲಸ ಮಾಡುತ್ತಿದ್ದ ಅದಮ್ಯ ಉತ್ಸಾಹ ಹೊಂದಿದ್ದ ವ್ಯಕ್ತಿ, ಇಷ್ಟು ಬೇಗ ನಮ್ಮನ್ನು ಅಗಲಿರುವುದು ಸಮುದಾಯಕ್ಕೆ ಆಗಿರುವ ನಷ್ಟ. ಒಳಮೀಸಲಾತಿಗಾಗಿ, ಸಮುದಾಯಕ್ಕಾಗಿ ಆರೋಗ್ಯವನ್ನು ಲೆಕ್ಕಿಸದೆ ಹೋರಾಟ ಮಾಡಿದ್ದರಿಂದ ಅವರು ಇಷ್ಟು ಬೇಗ ನಮ್ಮನ್ನು ಅಗಲಿದರು. ಈಗ ಹೋರಾಟಕ್ಕಿಂತಲೂ ಚೀರಾಟ ಜಾಸ್ತಿ ಆಗಿದೆ. ಪಾರ್ಥಸಾರಥಿ ಚೀರಾಟ ಮಾಡದೆ ಸಮುದಾಯಕ್ಕಾಗಿ ಹೋರಾಡಿದ ಧೀಮಂತ ಹೋರಾಟಗಾರ” ಎಂದು ಹೇಳಿದರು.

ಹೋರಾಟಗಾರ ಕೊಟ್ಟ ಶಂಕರ್, ಡಾ.ಲಕ್ಷ್ಮಣ್‌ದಾಸ್, ಪಾವನ ಆಸ್ಪತ್ರೆಯ ಡಾ.ಮುರುಳೀಧರ್, ಚರಕ ಆಸ್ಪತ್ರೆಯ ಡಾ.ಬಸವರಾಜು, ವಕೀಲ ಬೈಲಪ್ಪ ದೊಡ್ಡೇರಿ, ಐಎಂಎ ಜಿಲ್ಲಾಧ್ಯಕ್ಷ ಡಾ. ಹೆಚ್ ವಿ ರಂಗಸ್ವಾಮಿ, ದಲಿತ ಹೋರಾಟಗಾರ ನರಸೀಯಪ್ಪ, ನಿವೃತ್ತ ಎಂಜನಿಯರ್ ಶಿವಕುಮಾರ್, ಡಿ ಟಿ ವೆಂಕಟೇಶ್, ವಕೀಲ ರಂಗಧಾಮಯ್ಯ, ಪ್ರೊ.ಜಯಶೀಲ, ಹೆಗ್ಗೆರೆ ಪ್ರಸನ್ನಕುಮಾರ್, ತಿಪಟೂರು ಕೃಷ್ಣ, ಎ ನರಸಿಂಹಮೂರ್ತಿ, ನರಸಿಂಹರಾಜು, ಪಾರ್ಥಸಾರಥಿಯವರ ಮಗಳು ಹಸನ್ಮುಖಿ ನುಡಿನಮನ ಸಲ್ಲಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಸೇವೆ ಮರೆತ ಶಿಕ್ಷಣ ಕ್ಷೇತ್ರ ಉದ್ಯಮವಾಗಿದೆ: ಕಸಾಪ ಜಿಲ್ಲಾಧ್ಯಕ್ಷ ಸಿದ್ಧಲಿಂಗಪ್ಪ

ನುಡಿನಮನದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಹಣಕಾಸು ಅಧಿಕಾರಿ ನರಸಿಂಹಮೂರ್ತಿ, ಯೋಜನಾಧಿಕಾರಿ ಸಣ್ಣಮಸೀಯಪ್ಪ, ವಕೀಲರಾದ ಮಾರುತಿ ಪ್ರಸಾದ್, ಮುರುಳಿ ಕುಂದೂರು, ಡ್ಯಾಗೇರಹಳ್ಳಿ ವಿರೂಪಾಕ್ಷ, ಡಾ.ಅರುಂಧತಿ, ಸುಗಂಧಿನಿ ಪಾರ್ಥಸಾರಥಿ ಸೇರಿದಂತೆ ಬಹುತೇಕರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X