ತುಮಕೂರು | ಸೌಹಾರ್ದತೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ಸಾಧ್ಯ : ಬಾ.ಹ.ರಮಾಕುಮಾರಿ

Date:

Advertisements

ಸೌಹಾರ್ದ ತುಮಕೂರು ವತಿಯಿಂದ ಮಹಾತ್ಮ-ಹುತಾತ್ಮ ಸೌಹಾರ್ದ ಸಪ್ತಾಹದ ಅಂಗವಾಗಿ ನಗರದ ಟೌನ್‌ಹಾಲ್ ಮುಂಭಾಗದ ಬಿ.ಜಿ.ಎಸ್.ವೃತ್ತದಲ್ಲಿ ಹಮ್ಮಿಕೊಂಡಿದ್ದ ರಾಜ್ಯವ್ಯಾಪಿ ಸೌಹಾರ್ದ ಸಂಕಲ್ಪ ದಿನ, ಸಭೆ-ಪ್ರತಿಭೆ-ಸ್ವೀಕಾರ, ಸೌಹಾರ್ಧ ಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಕುರಿತು ಮಾತನಾಡಿದ ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಧರ್ಮ, ಜಾತಿ, ಭಾಷೆ ಇವೆಲ್ಲವೂ ಜನರ ನಡುವೆ ಸೌಹಾರ್ಧ ಬೆಸೆಯುವ ಅಂಶಗಳು, ಆದರೆ ಇಂದು ಇವುಗಳೇ ಜನರ ನಡುವೆ ದ್ವೇಷ ಬಿತ್ತುವ ವಿಷಯಗಳಾಗಿರುವುದು ನಿಜಕ್ಕೂ ದುರಾದೃಷ್ಟಕರ.ಇಂತಹ ಅಂಶಗಳ ಬಗ್ಗೆ ಜನರು ಯಾವಾಗಲು ಎಚ್ಚರಿಕೆಯಿಂದ ಹೆಜ್ಜೆಗಳನ್ನು  ಇಡಬೇಕಿದೆ. ಮೊದಲು ನಮ್ಮ ನಡುವೆಯೇ ಸೌಹಾರ್ದ ವನ್ನು ಮೈಗೂಡಿಸಿಕೊಂಡು,ನಮ್ಮ ನೆರೆಹೊರೆಯವರನ್ನು ಸಹ ಸೌಹಾರ್ದದೆಡೆಗೆ ತೆಗೆದುಕೊಂಡು ಹೋಗಬೇಕಾಗಿದೆ.ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

ಕರ್ನಾಟಕ,ಹಾಗೆಯೇ ತುಮಕೂರು ಜಿಲ್ಲೆ ರಾಷ್ಟ್ರ ಕವಿ ಕುವೆಂಪು ಅವರ ಮಾತಿನಂತೆ ಶಾಂತಿಯ ತೋಟವಾಗಿದೆ. ನಾವುಗಳು ಇದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ತಾಳ್ಮೆ, ಸಹನೆಯಿಂದ ವರ್ತಿಸಬೇಕಿದೆ.ಎಲ್ಲ ಧರ್ಮ,ಜಾತಿ, ವರ್ಗದ ಜನರೊಂದಿಗೆ ಸ್ನೇಹದಿಂದ ಬೇರತ ಬಾಳುವುದನ್ನು ಕಲಿಯಬೇಕಾಗಿದೆ.ನಮ್ಮಗಳ ನಡುವೆ ಇರುವ ಗೋಡೆಯನ್ನು ಕೆಡವಿ,ಬಾಂಧವ್ಯ ಬೆಸೆಯುವ ಕೆಲಸ ಮಾಡಬೇಕಾಗಿದೆ ಎಂದು ಬಾ.ಹ.ರಮಾಕುಮಾರಿ ತಿಳಿಸಿದರು.

Advertisements
1000976585

ಸಾಹಿತಿ ಡಾ.ಶೈಲಾನಾಗರಾಜು ಮಾತನಾಡಿ, ನಾವು ಹಲವಾರು ದಾರ್ಶನಿಕರ ಬರಹಗಳನ್ನು ಓದುತ್ತೇವೆಯೇ ಹೊರತು, ಅದರಂತೆ ನಡೆದುಕೊಳ್ಳುವುದಿಲ್ಲ.ಬುದ್ದ,ಬಸವ,ಅಂಬೇಡ್ಕರ್ ಸೇರಿದಂತೆ ಅನೇಕ ದಾರ್ಶನಿಕರು ಜಾತಿ,ಧರ್ಮ ಮೀರಿ ನಡೆದು ಹೊಸ ಸಮಾಜ ಕಟ್ಟುವ ಪ್ರಯತ್ನ ನಡೆಸಿದ್ದರು,ಆದರೆ ನಾವುಗಳು ನಮ್ಮಗಳ ನಡುವೆಯೇ ಬೇಲಿಗಳನ್ನು ಹಾಕಿಕೊಂಡು ಬದುಕುತಿದ್ದೇವೆ.ಇಂತಹ ಸಮಯದಲ್ಲಿಯೇ ಸೌಹಾರ್ಧತೆಯಿಂದ ಬದುಕುವುದನ್ನು ಕಲಿಯಬೇಕಿದೆ.ಗಾಂಧಿಜೀ ಸಾವು ಬರಿ ಸಾವಲ್ಲ.ಅದೊಂದು ರಾಕ್ಷಸಿಯ ಗುಣ.ಇಂದಿಗೂ ತೀರ ನಿಕೃಷ್ಟವಾಗಿ ನಡೆದುಕೊಂಡು ವ್ಯಕ್ತಿಯನ್ನು ನಾಥೂರಾಮ್ ಗೂಡ್ಸೆಗೆ ಹೊಲಿಕೆ ಮಾಡುತ್ತೇವೆ.ನಮ್ಮಲ್ಲಿಯೂ ಅಂತಹ ಗುಣಗಳಿವೆ.ಇವುಗಳನೆಲ್ಲಾ ತೊಡೆದು ಹಾಕುವಂತಹ ಮಾನವೀಯ, ಜ್ಯಾತಾತೀತ,ಧರ್ಮಾತೀತಾ ಗುಣಗಳನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಿದೆ.ಸೌಹಾರ್ಧತೆಯನ್ನು ಪ್ರತಿದಿನ ಆಚರಿಸಬೇಕಿದೆ. ಸಂಘರ್ಷಗಳ ಹೊರತಾಗಿ,ಸೌಹಾರ್ಧ,ಶಾಂತಿಯಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.

ತುಮಕೂರು ಸೌಹಾರ್ದ ಜನವರಿ 23 ರಿಂದ 30ರವರಗೆ ಉಪನ್ಯಾಸ ಏರ್ಪಡಿಸಲಾಗಿತ್ತು.

ಸೌಹಾರ್ಧ ತುಮಕೂರಿನ ಸಿ.ಯತಿರಾಜು ಮಾತನಾಡಿ, 77 ವರ್ಷಗಳ ಹಿಂದೆ ನಾಥೂರಾಮ್ ಗೂಡ್ಸೆ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿದ.ಇಂದು ಗೂಡ್ಸೆ ಸಂತಾನ ಹೆಚ್ಚಾಗಿ,ಗಾಂಧಿ ಸಂತಾನ ಕಡಿಮೆಯಾಗಿದೆ. ಇಂದಿಗೂ ವಿದೇಶಗಳು ಭಾರತವನ್ನು ನೋಡುವುದು ಗಾಂಧಿ ನಾಡು ಎಂದು.ತಂತ್ರಜ್ಞಾನದ ಬಲದಿಂದ ಸುಳ್ಳು,ಮತ್ತು ದ್ವೇಷವನ್ನು ವ್ಯಾಪಕವಾಗಿ ಹರಡ ಲಾಗುತ್ತಿದೆ.ಇದನ್ನು ತಡೆಯುವುದು ದೊಡ್ಡ ಸವಾಲಾಗಿದೆ.ಹಾಗಾಗಿ ಸೌಹಾರ್ಧವನ್ನು ವ್ಯಾಪಕವಾಗಿ ಹರಡಬೇಕಾಗಿದೆ. ಸೋಷಿಯಲ್ ಮೀಡಿಯಾ ಮೂಲಕ ತಪ್ಪು ಮಾಹಿತಿ,ಅಜ್ಞಾನವನ್ನು ಹರಡಲಾಗುತ್ತಿದೆ.ನಾನು ತಂತ್ರಜ್ಞಾನವನ್ನು ವಿರೋಧಿ ಸುತ್ತಿಲ್ಲ.ಆದರೆ ಅದರ ದುರ್ಬಳಕೆಯನ್ನು ತಡೆಯಬೇಕಾಗಿದೆ.ಅಮೇರಿಕಾದ ಅಧ್ಯಕ್ಷನಾಗಿ ಡೋನಾಲ್ಡ್ ಟ್ರಂಪ್ ಬಂದ ಮೇಲೆ ಹಲವಾರು ಅವಘಡಗಳ ಮುನ್ಸೂಚನೆ ಬರುತ್ತಿದೆ.ಉದ್ಯಮಿಗಳೇ ಸಚಿವ ಸಂಪುಟದಲ್ಲಿದ್ದಾರೆ. ಇದು ಯೂರೋಪ್‌ಗೂ ಹರಡುವ ಸಾಧ್ಯತೆ ಇದೆ.ವಿದೇಶಿ ಗಣ್ಯರು ಬಂದರೆ ರಾಜ್‌ಘಾಟ್‌ಗೆ ಕರೆದುಕೊಂಡು ಹೋಗುವ ಪ್ರಧಾನಿ ಮತ್ತು ಸಂಸದರು ನಾಥೂರಾಮ್ ಗೂಡ್ಸೆಯನ್ನು ಆಧಾರಿಸುತ್ತಾರೆ. ಈ ರೀತಿಯ ನಾಟಕೀಯ ಭಕ್ತಿಯ ಮುಖವಾಡವನ್ನು ಕಳಚಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಾಟಕಕಾರ ಎಸ್.ಎ.ಖಾನ್,ದಲಿತ ಮುಖಂಡರಾದ ಪಿ.ಎನ್.ರಾಮಯ್ಯ,ಕಾರ್ಮಿಕ ಮುಖಂಡ ಕಂಬೇಗೌಡ, ರಂಗನಿರ್ದೇಶಕ ಹೊನ್ನವಳ್ಳಿ ನಟರಾಜು, ಸಿಐಟಿಯುನ ಎನ್.ಕೆ.ಸುಬ್ರಮಣ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪ್ರತಿಜ್ಞಾ ವಿಧಿ, ಸೌಹಾರ್ಧ ಗೀತ ಗಾಯನ ನಡೆಯಿತು.  

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

Download Eedina App Android / iOS

X