ತುಮಕೂರು | ಜನಪ್ರತಿನಿಧಿಗಳು ಜಾತಿ ನಾಯಕರಾದರೆ ಜನನಾಯಕರಾಗಲು ಸಾಧ್ಯವಿಲ್ಲ : ಸಚಿವ ಕೆ. ಎನ್. ರಾಜಣ್ಣ

Date:

Advertisements

ಜನಪ್ರತಿನಿಧಿಗಳು ಜಾತಿ ನಾಯಕರಾಗುವುದರಿಂದ ಜನನಾಯಕರಾಗಲು ಸಾಧ್ಯವಿಲ್ಲ.ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿದಾಗ ಮಾತ್ರ ಹೆಚ್ಚು ದಿನ ರಾಜಕೀಯ ಅಧಿಕಾರ ಅನುಭವಿಸಲು ಸಾಧ್ಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ತುಮಕೂರು ನಗರದ ಎಂಪ್ರೆಸ್ ಕೆಪಿಎಸ್ ಶಾಲೆ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘ(ರಿ) ,ಶ್ರೀ ವಾಲ್ಮೀಕಿ ವಿದ್ಯಾವರ್ಧಕ ಸಂಘ, ಜಿಲ್ಲಾ ನಾಯಕ ಮಹಿಳಾ ಸಮಾಜ, ಶಬರಿ ಮಹಿಳಾ ಪತ್ತಿನ ಸಹಕಾರ ಸಂಘ.ನಿ, ತುಮಕೂರು ವಾಲ್ಮೀಕಿ ಸಹಕಾರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2023-24 ನೇ ಸಾಲಿನ ವಾಲ್ಮೀಕಿ ಸಮಾಜದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ಅಧಿಕಾರವೆಂಬುದು ಅತಿ ಮುಖ್ಯ ಅಂಗವಾಗಿದೆ.ಅಧಿಕಾರ ದೊರೆತ ಸಂದರ್ಭದಲ್ಲಿ ಧ್ವನಿ ಇಲ್ಲದ ಸಮುದಾಯಗಳ ಪರವಾಗಿ ಕೆಲಸ ಮಾಡಿದಾಗ ಮಾತ್ರ ಜನರ ಪ್ರೀತಿಗಳಿಸಲು ಸಾಧ್ಯ ಎಂದರು.

1000569996

ನಾಯಕ ಸಮುದಾಯದ ಮಕ್ಕಳು ಜಿಲ್ಲಾಮಟ್ಟದಲ್ಲಿ 250 ಕ್ಕೂ ಹೆಚ್ಚು ಮಕ್ಕಳು ಶೇ 80 ಫಲಿತಾಂಶ ಪಡೆದಿದ್ದಾರೆ.ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ,ಮಕ್ಕಳು ಹೆಚ್ಚು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ,ವಿದ್ಯೆ ಇಂದಿನ ಸಮಾಜದಲ್ಲಿ ಒಂದು ಪ್ರಮುಖ ಸಾಧನ,ಸಮಾಜದಲ್ಲಿ ಗೌರವವನ್ನು ಸಂಪಾದನೆ ಮಾಡಬೇಕಾದರೆವಿದ್ಯೆ ಅನಿವಾರ್ಯ ಎಂದ ಅವರು, ಪ್ರತಿಯೊಬ್ಬರಿಗೂ ಸಮಾನಾದ ಬುದ್ಧಿಶಕ್ತಿ ಇರುತ್ತದೆ ಅದನ್ನು ಸರಿಯಾಗಿಬಳಸಿಕೊಳ್ಳಬೇಕು ಎಂದು ಸಚಿವ ರಾಜಣ್ಣ ಕಿವಿಮಾತು ಹೇಳಿದರು.

Advertisements

ಇಂದಿನ ಕಾರ್ಯಕ್ರಮದಲ್ಲಿ ಸಮಾಜದ ಹಿತ ಬಯಸುವವರು,ಸಮಾಜ ಕಟ್ಟಿ ಬೆಳಸುವ ಎಲ್ಲರೂ ಒಂದು ಕಡೆ ಸೇರಿರುವುದು ಖುಷಿಕೊಟ್ಟಿದೆ.ಸಮಾಜದ ಮಕ್ಕಳನ್ನು ಪ್ರೊತ್ಸಾಹಿಸುವ ಉದ್ದೇಶದಿಂದ ಪ್ರತಿ ತಾಲೂಕಿನಲ್ಲೂ ಮುಂದಿನ ವರ್ಷದಿಂದ ಪ್ರತಿಭಾ ಪುರಸ್ಕಾರ ನಡೆಸಿದರೆ ಹೆಚ್ಚಿನ ಮಕ್ಕಳಿಗೆ ಸ್ಪೂರ್ತಿ ನೀಡಿದಂತಾಗುತ್ತದೆ ಎಂದ ಅವರು,ಪ್ರತಿಯೊಬ್ಬರು ರಾಜಕೀಯವಾಗಿ ಬೆಳಯಲು ಅಸಾಧ್ಯ,ರಾಜಕೀಯವಾಗಿ ಬೆಳದವರು,ಜನಾಂಗದವರ ಹಿತ ಕಾಪಾಡಬೇಕು.ರಾಜಕೀಯ ಅಧಿಕಾರವನ್ನು ಎಲ್ಲಾರ ಜೊತೆ ಹಂಚಿಕೊಂಡರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತಾರೆ,ಇಲ್ಲವೆಂದರೆ ಸೋಲುತ್ತಾರೆ.ಇಂದಿನ ಚುನಾವಣೆಗಳು ಬಾರಿ ದುಬಾರಿಯಾಗಿವೆ,ಸಮಾಜದವರು ಎಲ್ಲಾ ರಾಜಕೀಯ ಪಕ್ಷದಲ್ಲೂ ಗುರುತಿಸಿ ಕೊಂಡು ಬೆಳೆಯರಿ,ಸಮಾಜದ ವಿಚಾರ ಬಂದಾಗ ಸಂಘಟಿತರಾಗಿ ರಾಜಕೀಯ ಅಧಿಕಾರ ಪಡೆಯಿರಿ ಎಂದು ಸಲಹೆ ನೀಡಿದರು.

1000569983 1

ಮರ್ಹಷಿ ವಾಲ್ಮೀಕಿಯನ್ನು ದರೋಡೆಕೋರ ಎನ್ನುವವರು ಆಯೋಗ್ಯರು,ಮೇಲ್ವರ್ಗದ ಜನ ಸುಖ ಸುಮ್ಮನೆ ತಳ ಸಮುದಾಯದ ಜನರನ್ನು ಕೀಳುಮಟ್ಟದಿಂದ ಕಾಣುವ ಪರಿಸ್ಥಿತಿ ಹೋಗಬೇಕು.ವಾಲ್ಮೀಕಿ ದರೋಡೆಕೋರ ಎಂದು ಯಾರಾದರೂ ಸಭೆಗಳಲ್ಲಿ ಹೇಳಿದರೆ ಅಲ್ಲೇ ಖಂಡನೆ ಮಾಡಿ,ತಳ ಸಮುದಾಯಗಳಪರ ನಾಯಕತ್ವ ವಹಿಸಿ ಅಸಹಾಯಕ ಸಮುದಾಯದವರ ಬೆನ್ನಿಗೆ ನಿಂತು ನಾವು ನಾಯಕರಾಗಿ ಬೆಳಯಬೇಕು ಎಂದು ಯುವ ರಾಜಕಾರಣಿಗಳಿಗೆ ಕಿವಿ ಮಾತು ಹೇಳಿದರು.

ಸತ್ಯಾಗ್ರಹ ಎಂದರೆ ಸತ್ಯಕ್ಕಾಗಿ ಆಗ್ರಹ ಅದರೆ ಇಂದು ಅಸತ್ಯಕ್ಕಾಗಿ ಆಗ್ರಹ ಮಾಡುವ ಕಾಲ ಬಂದಿದೆ, ಈ ಸಿದ್ದರಾಮಯ್ಯ ನವರ ಮುಡಾ ಕೇಸು ಸಹ ಅಷ್ಟೇ.ವಿರೋಧ ಪಕ್ಷಗಳು ರಾಜಕೀಯಕ್ಕಾಗಿ 13 ವರ್ಷಗಳ ಹಿಂದಿನ ಪ್ರಕರಣವನ್ನು ತಂದು ಜನ ಮಾನಸದಲ್ಲಿ ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ.ನಿವೇಶನ ನೀಡಿವರೇ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

1000569995

ಉಪನ್ಯಾಸಕ ಡಾ.ಎಲ್.ಪಿ.ರಾಜು ಮಾತನಾಡಿ ದ್ರೋಣರಿಗೆ ಗುರುಕಾಣಿಕೆಯಾಗಿ ತನ್ನ ಹೆಬ್ಬೆರಳು ನೀಡಿದ ಏಕಲವ್ಯ,ಭಕ್ತಿಗಾಗಿ ಶಿವನಿಗೆ ಕಣ್ಣು ನೀಡಿದ ಬೇಡರ ಕಣ್ಣಪ್ಪನ ಸಮುದಾಯ ನಮ್ಮದು.ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚಿಸಿದ ರಾಮಾಯಣ ಇಡೀ ಜಗತ್ತಿಗೆ ದಾರಿದೀಪವಾಗಿದೆ.ವಾಲ್ಮೀಕಿ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡದ ಮನುವಾದಿಗಳು ವಾಲ್ಮೀಕಿಯನ್ನು ದರೋಡೆಕಾರ ಎಂದು ಬಿಂಬಿಸಿದ್ದಾರೆ. ವಾಲ್ಮೀಕಿಯನ್ನು ತೇಜೋವದೆ ಮಾಡುತ್ತಾ ರಾಮನನ್ನು ವೈಭವೀಕರಣ ಮಾಡುವ ಕೆಲಸವಾಗುತ್ತಿದೆ.ಪಂಜಾಬ್ ಹೈಕೋರ್ಟು ಸಹ ವಾಲ್ಮೀಕಿ ದರೋಡಕೊರ ಅಲ್ಲ,ಆತ ಬೇಡ ಕುಲದ ವ್ಯಕ್ತಿ ಎಂದು ತಿರ್ಪು ನೀಡಿದೆ.ರಾಮನ ವಿಜೃಂಭಣೆಯಲ್ಲಿ ಹಾಗೂ ರಾಮನಬೇಕು,ಬೇಡಗಳ ಮಧ್ಯದಲ್ಲಿ ವಾಲ್ಮೀಕಿಯನ್ನು ನೇಪಥ್ಯಕ್ಕೆ ತಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಶಿಡ್ಲಕೋಣದ ವಾಲ್ಮೀಕಿ ಗುರುಪೀಠದ ಶ್ರೀಸಂಜಯಕುಮಾರಸ್ವಾಮೀಜಿ ಆಶೀರ್ವಚನ ನೀಡಿ, ಸಮುದಾಯ ಮಕ್ಕಳಿಗೆ ಪ್ರತಿಭಾಪುರಸ್ಕಾರ ನಡೆಸುವ ಮೂಲಕ ಶ್ರೀಮತಿ ಶಾಂತಲ ರಾಜಣ್ಣ ಉತ್ತಮ ಕೆಲಸ ಮಾಡುತಿದ್ದಾರೆ.ಯುವಜನತೆಯ ಸಂಘಟನೆಯ ಜೊತೆಗೆ, ಶೈಕ್ಷಣಿಕವಾಗಿ ಅವರನ್ನು ಹುರುದುಂಬಿಸುವ ಕೆಲಸದಿಂದ ಹೆಚ್ಚಿನ ಮಕ್ಕಳಿಗೆ ಅನುಕೂಲವಾಗಲಿದೆ.ಇದು ಮುಂದುವರೆದುಕೊಂಡು ಹೋಗಲಿ ಎಂದು ಶುಭ ಹಾರೈಸಿದರು.

1000569997

ತುಮಕೂರು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷೆ ಶಾಂತಲರಾಜಣ್ಣ ಮಾತನಾಡಿ ಸಮುದಾಯವನ್ನು ಶೈಕ್ಷಣಿಕವಾಗಿ ಬೆಳೆಸುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡುತ್ತಿದೆ.ಪ್ರಾಮಾಣಿಕವಾಗಿ ಶಿಕ್ಷಣಕ್ಕೆ ಹಣಕಾಸಿನ ಕೊರತೆ ಇದ್ದರೆ ಸಂಘ ನಿಮಗೆ ಸ್ಪಂದಿಸಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ಆರ್.ರಾಜಕುಮಾರ್ ಇಲಾಖೆಯಿಂದ ಶೈಕ್ಷಣಿಕ ಅಭಿವೃದ್ದಿಗಾಗಿ ದೊರೆಯುವ ಸೌಲಭ್ಯಗಳ ಕುರಿತು ವಿವರ ನೀಡಿ,ಪ್ರಬುದ್ದ ಯೋಜನೆಯ ಮೂಲಕ ವಿದೇಶದಲ್ಲಿ ಕಲಿಯಲು ಅವಕಾಶವಿದೆ ಎಂದು ತಿಳಿಸಿದರು.

ಇದೇ ವೇಳೆ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಶೇ8ಕ್ಕೀಂತಲು ಅತಿ ಹೆಚ್ಚು ಅಂಕ ಪಡೆದ 220 ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್ ವಹಿಸಿದ್ದರು.

ವೇದಿಕೆಯಲ್ಲಿ ಸಿರಾ ಮಾಜಿ ಶಾಸಕ ಸಾ.ಲಿಂಗಯ್ಯ,ತುಮಕೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಬಿ.ಜಿ ಕೃಷ್ಣಪ್ಪ,ತುಮಕೂರು ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷೆ ಶ್ರೀಮತಿ ಶಾಂತಲರಾಜಣ್ಣ,ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಪ್ಪ, ಅಧಿಕಾರಿಗಳಾದ ಡಾ.ಕೆ.ಆರ್.ರಾಜಕುಮಾರ್,ಕೆ.ಎಸ್.ಗಂಗಾಧರ್,ಡಿ.ಸಿ ಸಿ ಬ್ಯಾಂಕನ ಜಂಗಮಪ್ಪ,ಸಮಾಜದ ಮುಖಂಡರಾದ ಪ್ರತಾಪ್,ಸಿಂಗದಳ್ಳಿ ರಾಜಕುಮಾರ್,ನಿವೃತ್ತ ಬಿ ಇ ಓ,ಬಸವರಾಜ ಮತ್ತಿತರರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X