ತುಮಕೂರು ನಗರದ ರವೀಂದ್ರ ಕಲಾ ನಿಕೇತನ ಸಭಾಂಗಣದಲ್ಲಿ ಭಾನುವಾರ ಪ್ರೊ. ಎಲ್. ಮಣಿಗಯ್ಯ ಅವರ ಒಳಮೀಸಲಾತಿ ಒಲವು, ನಿಲುವು ಕೃತಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಬಾಬು ಜಗಜೀವನರಾಮ್ ಅಧ್ಯಾಯನ ಕೇಂದ್ರದ ನಿರ್ದೇಶಕ ಪ್ರೊ. ಬಿ. ಗಂಗಾಧರ ಬಿಡುಗಡೆ ಮಾಡಿದರು.
ಯಾವುದೇ ಪೂರ್ವಗ್ರಹವಿಲ್ಲದೆ ಒಳಮೀಸಲಾತಿ ಒಲವು, ನಿಲುವು ಕೃತಿಯನ್ನು ರಚಿಸಿರುವ ಮಣಿಗಯ್ಯ ಅವರು ವೈಜ್ಞಾನಿಕವಾಗಿ ದಲಿತರನ್ನು ವರ್ಗಿಕರಣ ಮಾಡುವ ಮೂಲಕ ವಸ್ತಾವದ ಸಂಗತಿ ಆಧಾರಿಸಿ ರಚಿತವಾಗಿರುವ ಈ ಕೃತಿಯಿಂದ ಓದುಗರಿಗೆ ದಲಿತರು ಹೇಗಿರಬೇಕು ಎಂಬ ಪ್ರಶ್ನೆ ಮೂಡಿಸುತ್ತದೆ. ಉದ್ದೇಶಪೂರ್ವಕವಾಗಿ ಕೆಲವರು ಒಳಮೀಸಲಾತಿ ವಿರೋಧಿಸುವ ಮೂಲಕ ಸಾಮಾಜಿಕವಾಗಿ ಬಿಡುಗಡೆ ಪಡೆಯಬೇಕಿದ್ದ ಸಮುದಾಗಳನ್ನು ಅಂಚಿಗೆ ತಳ್ಳುತ್ತಿದ್ದಾರೆ ಎಂದು ಪ್ರೊ. ಬಿ. ಗಂಗಾಧರ ಹೇಳಿದರು.
ತಮಕೂರು ವಿವಿ ವಿಜ್ಙಾನ ಕಾಲೇಜಿನ ಸಹಾಯಕ ಪ್ರಧ್ಯಾಪಕ ಡಾ. ನಾಗಭೂಷಣ್ ಬಗ್ಗನಡು ಮಾತನಾಡಿ ಒಳಮೀಸಲಾತಿ ಒಲವು ನಿಲುವು ಕೃತಿಯನ್ನು ಲೇಖಕರು ಸಮುದಾಯದ ಅಂತರ ಕಾಯ್ದುಕೊಂಡು ಬಲು ಎಚ್ಚರದಿಂದ ಕೃತಿ ರಚಿಸಿದ್ದಾರೆ. ಒಳಮೀಸಲಾತಿ, ಜಾತಿಶ್ರೇಣಿಕರಣ, ಸಾಮಾಜಿಕ ಆಯಾಮಗಳನ್ನು ಒಳಗೊಂಡಂತೆ ಸಸಮಕಾಲೀನ ರಾಜಕಾರಣದ ಬಗ್ಗೆಯೂ ಕೃತಿಯಲ್ಲಿ ಅವಲೋಕಿಸಿದ್ದಾರೆ ಎಂದು ಹೇಳಿದರು.
ಚಿಂತಕ ದೊರೆರಾಜ್ ಮಾತನಾಡಿ ಶೋಷಿತ ಸಮುದಾಯಗಳ ಒಟ್ಟುಗೂಡಿಸಿದಾಗ ಮಾತ್ರ ಶೋಷಣೆಗಳಿಂದ ಹೊರಬರಲು ಸಾಧ್ಯ. ಒಳಮೀಸಲಾತಿ ಒಪ್ಪಿಕಕೊಂಡು ಛಿದ್ರಿಕರಣದಿಂದ ಏಕೀಕರಣದಕಡೆ ಹೋಗಬೇಕು. ದ್ವೇಷ, ಅಸೂಯೆ ಮೀರಿ ಬುದ್ಧ ಚಿಂತನೆ ಬೆಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ. ಮ.ಲ.ನ ಮೂರ್ತಿ, ಲೇಖಕ ತುಂಬಾಡಿ ರಾಮಯ್ಯ, ಡಿಎಸ್ ಎಸ್ ಮುಖಂಡ ವೀರುಪಾಕ್ಷ ಡ್ಯಾಗೇರಹಳ್ಳಿ, ಓ. ನಾಗರಾಜ್, ಪ್ರೊ. ಮಣಿಗಯ್ಯ ಇದ್ದರು.