ತುಮಕೂರು | ಕೊಳಗೇರಿ ಪ್ರದೇಶಗಳಲ್ಲಿ ಬೀದಿ ಸಭೆಗಳ ಮೂಲಕ ಮತದಾನ ಜಾಗೃತಿಗೆ ನಿರ್ಣಯ

Date:

Advertisements
  • ಕೊಳಗೇರಿ ಜನರ ಮತ, ವಸತಿ ಮತ್ತು ಉದ್ಯೋಗ ಖಾತ್ರಿಗಾಗಿ ಜಾಗೃತಿ ಅಭಿಯಾನ
  • ಕೊಳಗೇರಿ ಜನರ ಸ್ವಅಧಿಕಾರ ರಕ್ಷಿಸುವ ಉದ್ದೇಶದ ಮೇಲೆ ಮತ ಚಲಾಯಿಸಲು ಬೀದಿ ಸಭೆ

ಕೊಳಗೇರಿ ಜನರ ಮತ, ವಸತಿ ಮತ್ತು ಉದ್ಯೋಗ ಖಾತ್ರಿ ಹಾಗೂ ಬಡತನ ಮುಕ್ತಕ್ಕಾಗಿ ವಿಧಾನಸಭಾ ಚುನಾವಣೆ ಹಿನ್ನೆಲೆ ಕೊಳಗೇರಿಗಳಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲು ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಕಾರ್ಯಕಾರಿ ಸಮಿತಿ ಸಭೆ ನಡೆಯಿತು.

ತುಮಕೂರಿನ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಎ ನರಸಿಂಹಮೂರ್ತಿ ಅಧ್ಯಕ್ಷತೆಯಲ್ಲಿ ಕೊಳಗೇರಿ ಜನರ ಪ್ರಣಾಳಿಕೆ 2023ರ ಸಮಾಲೋಚನೆ ನಡೆಸಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕೊಳಗೇರಿ ಜನರ ಪ್ರಣಾಳಿಕೆಯ ಸಂವಿಧಾನ ಉಳಿಸಿ ಬಹುತ್ವ ಕರ್ನಾಟಕ ರಕ್ಷಿಸಿ, ನಮ್ಮ ಮತ, ವಸತಿ, ನಗರ, ಉದ್ಯೋಗ ಖಾತ್ರಿ ಮತ್ತು ಬಡತನ ಮುಕ್ತಕ್ಕಾಗಿ ಕಾರ್ಯಕರ್ತರ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಗುವುದು. ಬಳಿಕ ಚುನಾವಣೆಯಲ್ಲಿ ಕಾರ್ಯಕರ್ತರು ಪಕ್ಷಗಳ ಬಾಲಂಗೋಚಿಯಾಗದೆ ಸ್ಲಂ ಜನರ ಸ್ವಅಧಿಕಾರ ಮತ್ತು ಸಂವಿಧಾನ ರಕ್ಷಿಸುವ ಉದ್ದೇಶದ ಮೇಲೆ ಮತ ಚಲಾಯಿಸಲು ಬೀದಿ ಜಾಗೃತಿ ಸಭೆಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

Advertisements

“ಚುನಾವಣಾ ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಅನ್ವಯದಂತೆ ನಡೆದುಕೊಳ್ಳಬೇಕು. ಈ ಬಗ್ಗೆ ಚುನಾವಣಾ ಆಯೋಗ ಮತ್ತು ಅಧಿಕಾರಿಗಳು ನಿಗಾ ವಹಿಸಬೇಕಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಚುನಾವಣೆಗೆ ಕೊಳಗೇರಿ ಜನರನ್ನು ಸರಕಾಗಿಸಿಕೊಂಡು ಯುವಜನರನ್ನು ಕಾಲಾಳಾಗಿಸಿಕೊಳ್ಳುವ ಕುತಂತ್ರದ ಬಗ್ಗೆ ಎಚ್ಚರವಹಿಸಬೇಕು” ಎಂದು ಕೊಳಗೇರಿ ಜನಾಂದೋಲನ ಕರ್ನಾಟಕ ಸಂಚಾಲಕ ಎ ನರಸಿಂಹಮೂರ್ತಿ ಕರೆ ನೀಡಿದರು.

“ಮೂರು ಪಕ್ಷಗಳ ಅಭ್ಯರ್ಥಿಗಳೊಂದಿಗೆ ನಮ್ಮ ಪ್ರಣಾಳಿಕೆ ಮೇಲೆ ಚರ್ಚೆ ನಡೆಸಿ ಕೊಳಗೇರಿ ಜನರ ಜಲ್ವಂತ ಸಮಸ್ಯೆಗಳನ್ನು ಪರಿಹರಿಸುವಂತವರಿಗೆ ನಾವು ಬೆಂಬಲಿಸಬೇಕಾಗಿದೆ” ಎಂದು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿದರು.

“ಏಪ್ರಿಲ್ 2ರಿಂದ 14ರವರೆಗೆ ಹಲವು ಕೊಳಗೇರಿ ಪ್ರದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಏಪ್ರಿಲ್ 16ರಂದು ಬಾಬು ಜಗಜೀವನ್‌ರಾಂ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ ಮಾಡಬೇಕು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಮೂಲಸೌಕರ್ಯ ಕೊರತೆ; ಚುನಾವಣೆ ಬಹಿಷ್ಕರಿಸುವುದಾಗಿ ನೊಂದ ಗ್ರಾಮಸ್ಥರ ಎಚ್ಚರಿಕೆ

“ಏಪ್ರಿಲ್ 18ರಿಂದ 28ರವರೆಗೆ 40 ಕೊಳಚೆ ಪ್ರದೇಶಗಳಲ್ಲಿ ಕೊಳಗೇರಿ ಜನರ ಪ್ರಣಾಳಿಕೆ ಅಭಿಯಾನ ಮತ್ತು ಬೀದಿ ಜಾಗೃತಿ ಸಭೆಗಳನ್ನು ಕೈಗೊಳ್ಳುವುದು, ಏಪ್ರಿಲ್ 30ರಂದು ಯುವಜನರೊಂದಿಗೆ ಚುನಾವಣೆ ಕುರಿತು ಸಂವಾದ ನಡೆಸಲಾಗುವುದು” ಎಂದರು.

ಈ ಸಭೆಯಲ್ಲಿ ಕೊಳಗೇರಿ ಸಮಿತಿ ಗೌರವಧ್ಯಕ್ಷೆ ದೀಪಿಕಾ, ಪದಾಧಿಕಾರಿಗಳಾದ ಕಣ್ಣನ್, ಜಾಬೀರ್‌ಖಾನ್, ಚಕ್ರಪಾಣಿ, ಶಾರದಮ್ಮ, ಗುಲ್ನಾಜ್, ಗಂಗಾ, ಕೃಷ್ಣಮೂರ್ತಿ, ಪುಟ್ಟರಾಜು, ಅಶ್ವತ್, ಗೊಂವಿಂದರಾಜು ನಿವೇಶನ ರಹಿತ ಹೋರಾಟ ಸಮಿತಿಯ ಮಂಗಳಮ್ಮ, ಸುಧಾ, ದೇವರಾಜು, ಪೂರ್ಣಿಮಾ, ಯುವಸಮಿತಿಯ ಮುಖಂಡರು ಧನಂಜಯ್, ಚಕ್ರಪಾಣಿ, ಗಣೇಶ್, ಶಿರಾ ಸಂಚಾಲಕ ತಿರುಮಲಯ್ಯ, ಭಾರತಿ ನಗರದ ಮಾಣಿಕ್ಯಮ್ಮ, ತುಮಕೂರು ವಿ ವಿ ಸಮಾಜಶಾಸ್ತ್ರ ವಿಭಾಗದ ಅರವಿಂದ್, ಮನೋಹರ್ ಸೇರಿದಂತೆ ಇತರರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X