ಕೋಮು ಉದ್ವಿಗ್ನತೆ ಹಿನ್ನೆಲೆ ಅಮಿತ್‌ ಶಾ ಬಿಹಾರ ಭೇಟಿ ರದ್ದು; ಜನ ಬಾರದ ಕಾರಣ ವಾಪಸ್‌ ಎಂದ ಜೆಡಿಯು

Date:

  • ಏಪ್ರಿಲ್‌ 2ರಂದು ನಳಂದ ಜಿಲ್ಲೆಯ ಸಸರಾಮ್‌ನಲ್ಲಿ ಕಾರ್ಯಕ್ರಮ ನಿಗದಿ
  • ನಳಂದ ಜಿಲ್ಲೆಯಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲ ಎಂದ ಜೆಡಿಯು ನಾಯಕರು

ಭಾನುವಾರ (ಏಪ್ರಿಲ್ 2) ಬಿಹಾರದ ಸಸಾರಾಮ್‌ನಲ್ಲಿ ಮೌರ್ಯ ಚಕ್ರವರ್ತಿ ಅಶೋಕ ಜನ್ಮದಿನದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಮನವಮಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆಯ ನಂತರ ಪ್ರದೇಶದಲ್ಲಿ ಉಂಟಾದ ಕೋಮು ಉದ್ವಿಗ್ನತೆಯ ಹಿನ್ನೆಲೆಯಲ್ಲಿ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ.

ಆದರೆ ಬಿಜೆಪಿ ಕಾರ್ಯಕ್ರಮಕ್ಕೆ ಜನರು ಆಗಮಿಸದ ಕಾರಣ ಅಮಿತ್‌ ಶಾ ಬಿಹಾರಕ್ಕೆ ಬರುತ್ತಿಲ್ಲ ಎಂದು ಜೆಡಿಯು ಕಾನೂನು ಸುವ್ಯಸ್ಥೆಯ ಕಾರಣವನ್ನು ನಿರಾಕರಿಸಿದೆ.

ಸಸಾರಾಮ್‌ನಲ್ಲಿ ನಗರದಲ್ಲಿ ಇನ್ನೂ ನಿಷೇಧಾಜ್ಞೆ ಜಾರಿಯಲ್ಲಿದೆ. “ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಸಸಾರಂ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿದ್ದಾರೆ. ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ಸಸಾರಾಮ್‌ನಲ್ಲಿ ನಿಷೇಧಾಜ್ಞೆ ಇನ್ನೂ ಜಾರಿಯಲ್ಲಿದೆ. ಈ ಹಿನ್ನಲೆಯಲ್ಲಿ ನಾವು ಸಭೆ ನಡೆಸಲು ಸಾಧ್ಯವಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಾಮ್ರಾಟ್ ಚೌಧರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಿಜೆಪಿ ಆರೋಪವನ್ನು ನಿರಾಕರಿಸಿರುವ ರಾಜ್ಯ ಜೆಡಿಯು ವಕ್ತಾರ ನೀರಜ್ ಕುಮಾರ್, “ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಅಮಿತ್ ಶಾ ರ್‍ಯಾಲಿಗೆ ಸ್ಥಳೀಯ ಆಡಳಿತ ಸಿದ್ಧಗೊಳಿಸಿತ್ತು. ಆದರೆ ಜನರು ಬಾರದ ಕಾರಣ  ರಾಜ್ಯ ಬಿಜೆಪಿ ಅಮಿತ್ ಶಾ ಅವರ ಪ್ರವಾಸ ರದ್ದುಗೊಳಿಸಿದೆ. ಸಸಾರಂ ಬಾಬು ಜಗಜೀವನ್ ರಾಮ್ ಅವರ ಜನ್ಮಭೂಮಿ. ಅವರ ಹೆಸರಿನ ಯೋಜನೆಯನ್ನು ಕೇಂದ್ರವು ಸ್ಥಗಿತಗೊಳಿಸಿದೆ. ಸಮಾಜವಾದಿಗಳ ನಾಡಾಗಿರುವ ಶಹಾಬಾದ್ ಪ್ರದೇಶದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ಪದವಿ ಪ್ರಮಾಣಪತ್ರ ನೀಡಬೇಕಾಗಿಲ್ಲ ಎಂದ ಗುಜರಾತ್ ಹೈಕೋರ್ಟ್; ಕೇಜ್ರಿವಾಲ್‌ಗೆ ₹25 ಸಾವಿರ ದಂಡ

ರಾಜ್ಯ ಸರ್ಕಾರವನ್ನು ಟೀಕಿಸಿದ ಸಾಮ್ರಾಟ್‌ ಚೌಧರಿ, “ಸಿಎಂ ನಿತೀಶ್ ಕುಮಾರ್ ಅವರು ಕೇಂದ್ರ ಗೃಹ ಸಚಿವರನ್ನು ಬಿಹಾರದಿಂದ ದೂರವಿಡಲು ಬಹುಶಃ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಆದರೆ ಒಂದು ವಿಷಯ ಸ್ಪಷ್ಟವಾಗಿದೆ. ನಿತೀಶ್ ಕುಮಾರ್ ಅವರಿಗೆ ಈಗ ಬಿಹಾರವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅವರ ಹುಟ್ಟೂರಾದ ಬಿಹಾರ ಶರೀಫ್, ನಳಂದದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ತಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದು ಬಿಹಾರ ಸರ್ಕಾರದ ‘ವಿಧ್ವಂಸಕ’ ಪ್ರಯತ್ನ” ಎಂದು ಖಂಡಿಸಿದ್ದಾರೆ.

ಸಸಾರಾಮ್ ಮತ್ತು ಬಿಹಾರಶರೀಫ್ ಪಟ್ಟಣಗಳು ರೋಹ್ತಾಸ್ ಮತ್ತು ನಳಂದದ ಜಿಲ್ಲಾ ಕೇಂದ್ರಗಳಾಗಿವೆ. ರಾಮನವಮಿ ಮೆರವಣಿಗೆಯಲ್ಲಿ ಕೋಮು ಸಂಘರ್ಷ ವರದಿಯಾದ ನಂತರ ಎರಡೂ ಪಟ್ಟಣಗಳಲ್ಲಿ ನಿಷೇಧಾಜ್ಞೆ ವಿಧಿಸಲಾಯಿತು.

ಹಿಂದುಳಿದ ವರ್ಗ ಕುಶ್ವಾಹ ಸಮುದಾಯವು ಅಶೋಕ ಚಕ್ರವರ್ತಿಯನ್ನು ತಮ್ಮ ಪೂಜನೀಯ ಎಂದು ಭಾವಿಸುತ್ತಾರೆ. ಸಸಾರಾಮ್ ಭಾಗವಾಗಿರುವ ಶಹಾಬಾದ್ ಪ್ರದೇಶವು ಗಣನೀಯ ಪ್ರಮಾಣದ ಕುಶ್ವಾಹ ಜನಸಂಖ್ಯೆ ಹೊಂದಿದೆ. ಕುಶ್ವಾಹ ನಾಯಕ ಸಾಮ್ರಾಟ್ ಚೌಧರಿ ಅವರನ್ನು ರಾಜ್ಯ ಬಿಜೆಪಿ ಮುಖ್ಯಸ್ಥರನ್ನಾಗಿಸಲು ಇದು ವೇದಿಕೆಯಾಗಿತ್ತು. ಆದರೆ ಜನರು ಸೇರುವುದಿಲ್ಲ ಎಂಬ ಕಾರಣಕ್ಕೆ ಸಭೆಯನ್ನು ಬಿಜೆಪಿ ರದ್ದುಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಚ ರಾಜ್ಯಗಳ ಎಕ್ಸಿಟ್ ಪೋಲ್: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಾಧ್ಯತೆ

ಐದು ರಾಜ್ಯಗಳ ಮತದಾನ ಮುಕ್ತಾಯವಾಗಿದ್ದು ವಿವಿಧ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಯ(ಎಕ್ಸಿಟ್ ಪೋಲ್)...

ಆಸ್ಟ್ರೇಲಿಯನ್ ಹೂಡಿಕೆದಾರರಿಗೆ ಸಿಎಂ ಸಿದ್ದರಾಮಯ್ಯ ಆಹ್ವಾನ

ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ವಲಯದಲ್ಲಿ ಹೂಡಿಕೆ ಗ್ರೀನ್ ಫೀಲ್ಡ್...

ಸರ್ಕಾರದ ಉಚಿತ ಕೊಡುಗೆಗಳು ಜನರಲ್ಲಿ ಖರೀದಿಸುವ ಶಕ್ತಿ ಹೆಚ್ಚಿಸುತ್ತವೆ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಇನ್ಫೋಸಿಸ್‌ ಸ್ಥಾಪಕಾಧ್ಯಕ್ಷ ನಾರಾಯಣ ಮೂರ್ತಿ...

ಅರ್ಹ ರೈತರಿಗೆ ತಲಾ 2000 ರೂ.ವರೆಗೆ ಬೆಳೆ ಪರಿಹಾರ: ಸಿದ್ದರಾಮಯ್ಯ ಘೋಷಣೆ

ಕೇಂದ್ರದಿಂದ ಹಣ ಬರುವವರೆಗೂ ಕಾಯಲು ಸಾಧ್ಯವಿಲ್ಲ: ಸಿಎಂ ಮೊದಲನೇ ಕಂತಿನಲ್ಲಿ...