ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ), ತುಮಕೂರು ಘಟಕದಿಂದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ಕಳೆದ 2 ವರ್ಷಗಳಿಂದ ವಂಚಿತವಾಗಿರುವ 9ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಪಿ ವಿದ್ಯಾರ್ಥಿವೇತನ ವಿಸ್ತರಣೆ ಮಾಡುವಂತೆ ಒತ್ತಾಯಿಸಿದ್ದಾರೆ
ಎಸ್ಎಸ್‌ಪಿ ವಿದ್ಯಾರ್ಥಿವೇತನ ಸ್ಥಗಿತಗೊಂಡ ಬಳಿಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.ಎಸ್‌ಎಸ್‌ಪಿ ಪ್ರಸ್ತುತ 1 ರಿಂದ 8ನೇ ತರಗತಿಗೆ ಮಾತ್ರ ಲಭ್ಯವಿದ್ದು, 9 ಮತ್ತು 10ನೇ ತರಗತಿಗಳಿಗೆ ಸ್ಥಗಿತಗೊಂಡಿದೆ. ಇದಕ್ಕೆ ಮುಖ್ಯಮಂತ್ರಿ ಅವರ ತುರ್ತು ಹಸ್ತಕ್ಷೇಪ ಅಗತ್ಯವಿದೆ ಎಂದು ಎಸ್‌ಐಒ ಒತ್ತಾಯಿಸಿದೆ.
ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವುದು ತುರ್ತು ಅಗತ್ಯವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಎಸ್‌ಐಒ ತುಮಕೂರು ತನ್ನ ವಿದ್ಯಾ ನ್ಯಾಯದ ಬದ್ಧತೆ ಯನ್ನು ಪುನರುಚ್ಚರಿಸಿ, ಸರ್ಕಾರವನ್ನು ತ್ವರಿತ ಕ್ರಮಕ್ಕೆ ಮನವಿ ಮಾಡಿದೆ.
ನಿಯೋಗದಲ್ಲಿ ಎಸ್ಐಒ ಸ್ಥಾನೀಯ ಅಧ್ಯಕ್ಷ ಮೊಹಮ್ಮದ್ ಖಲೀಲ್ ಖಾನ್, ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಎಹ್ತೇಶಾಂ, ಕಾರ್ಯದರ್ಶಿ ಜೈದ್ ಖಾನ್, ಸದಸ್ಯರಾದ ಇಬ್ರಾಹಿಂ ಸಯೀದ್ ಇದ್ದರು.