ತುಮಕೂರು | ಮಾನವಘನತೆಯ ಬದುಕಿಗೆ ಸ್ಲಂ ನಿವಾಸಿಗಳ ಹೋರಾಟ ಅಗತ್ಯ: ಕೆ ದೊರೆರಾಜ್‌ 

Date:

Advertisements

ತುಮಕೂರು ನಗರದ ಜನರ ಬದುಕನ್ನು ನಿರ್ವಹಣೆ ಮಾಡುತ್ತಿರುವ ಸ್ಲಂ ನಿವಾಸಿಗಳು ದೇಶದ ಅಭಿವೃದ್ಧಿಯಲ್ಲಿ ಹಾಗೂ ಸಮಾಜದ ವ್ಯವಸ್ಥೆಯಲ್ಲಿ ಕೇವಲ ವಸತಿ ಮಾತ್ರ ಕೇಳದೆ ಮಾನವ ಹಕ್ಕುಗಳನ್ನು ಖಾತ್ರಿ ಮಾಡಿರುವ ಸಂವಿಧಾನದ ಮೌಲ್ಯದಂತೆ ಮಾನವಘನತೆಯ ಬದುಕಿಗಾಗಿ ಹೋರಾಟ ಮಾಡುವುದು ಅಗತ್ಯವಾಗಿದೆ ಎಂದು ಹಿರಿಯ ಚಿಂತಕ ಕೆ. ದೊರೆರಾಜ್ ಅಭಿಪ್ರಾಯಪಟ್ಟರು.

ತುಮಕೂರಿನ ಬಾಲಭವನದಲ್ಲಿ ನಡೆದ ಸ್ಲಂ ಜನಾಂದೋಲನ ಕರ್ನಾಟಕ, ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ 20ನೇ ವರ್ಷದ ಅಂಗವಾಗಿ ʼಸ್ಲಂ ಜನರ ನಡಿಗೆ ಸಂವಿಧಾನದೆಡೆಗೆʼ ಮತ್ತು ಸಂಸ್ಕೃತಿ ಸಂಭ್ರಮ ಹಾಗೂ ಮಾನವ ಹಕ್ಕುಗಳ ಘನತೆಗಾಗಿ ದುಡಿದವರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.

“ಸಮಾನತೆಯ ಸಮಾಜ ಕಟ್ಟುವುದು ನಮ್ಮ ಉದ್ದೇಶ. ದುಡಿಯುವ ಜನರಲ್ಲಿ ಮಾನವೀಯ ಮತ್ತು ಜನಸಂಸ್ಕೃತಿ ಇರುತ್ತದೆ. ನಾವು ಯಾರನ್ನೂ ದ್ವೇಷಿಸುವುದಿಲ್ಲ. ಭೇದಭಾವ ಮಾಡುವುದಿಲ್ಲ. ಈ ಸಂಭ್ರಮ ನಮ್ಮ ಜನರಲ್ಲಿ ವ್ಯವಸ್ಥೆಯ ವಿರುದ್ಧದ ಸಂಘರ್ಷವನ್ನು ಮಾತ್ರ ಹುಟ್ಟುಹಾಕುತ್ತದೆ. ಇದುವೇ ನಮ್ಮ ಸಿದ್ಧಾಂತ ಹಾಗೂ ವಾಸ್ತವ. ಭಾರತ ಮತ್ತು ಸಂವಿಧಾನದ ಮೌಲ್ಯವೂ ಹೌದು” ಎಂದು ಹೇಳಿದರು.

Advertisements

ಸ್ಲಂ ಜನಾಂದೋಲನ

“ಈ ದೇಶದಲ್ಲಿ ದುಡಿಯುವಜನರ ನಿಜವಾದ ಸಿದ್ಧಾಂತ ಯಾವುದೆಂದರೆ ಸಂವಿಧಾನದಲ್ಲಿರುವ ಸಮಾನತೆ, ಸ್ವಾತ್ರಂತ್ರ್ಯ ಬಾತೃತ್ವ ಮತ್ತು ಸಾಮಾಜಿಕ ನ್ಯಾಯ ಇದಕ್ಕಾಗಿ ನಮ್ಮ ನಡಿಗೆ ಸಂವಿಧಾನದೆಡೆಗೆ ಸಾವುವುದಾಗಿದೆ. ಇಂದು ಅಭಿವೃದ್ಧಿ ನೆಲೆಯಲ್ಲಿ ನಗರಗಳಲ್ಲಿ ತಾರತಮ್ಯ ಮತ್ತು ಅಸಮಾನತೆ ಹೆಚ್ಚಾಗುತ್ತಿದೆ. ಇದರಿಂದಾಗಿ ಮಾನವ ಹಕ್ಕುಗಳನ್ನು ಸರ್ಕಾರಗಳೇ ಧಮನ ಮಾಡುತ್ತಿರುವುದು ವಿಪರ್ಯಾಸವಾಗಿದೆ. ಹಾಗಾಗಿ ಸಮ ಸಮಾಜಕಟ್ಟಲು ಸಾಧ್ಯವಾಗುತ್ತಿಲ್ಲ” ಎಂದರು.

ಶ್ರೀದೇವಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಎಂ ಆರ್ ಹುಲಿನಾಯ್ಕರ್ ಮಾತನಾಡಿ, “ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಂವಿಧಾನದ ಮೌಲ್ಯ ಸಮಸಮಾಜದ ನಿರ್ಮಾಣ ಮತ್ತು ಸಾಮಾಜಿಕ ನ್ಯಾಯವಾಗಿದೆ. ನಮ್ಮ ಶ್ರೀದೇವಿ ಆಸ್ಪತ್ರೆಯಲ್ಲಿ ಸ್ಲಂಜನರಿಗೆ ಉಚಿತ ಅರೋಗ್ಯ ಸೇವೆ ನೀಡಲು ಬದ್ದವಾಗಿದ್ದೇನೆ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಕೆಲವೊಂದು ಕೋರ್ಸ್‌ಗಳಿಗೆ ಉಚಿತ ಅವಕಾಶ ನೀಡಲು ಸಿದ್ದವಿದ್ದೇನೆ” ಎಂದು ಭರವಸೆ ನೀಡಿದರು.

ಸ್ಲಂ ಜನಾಂದೋಲನ

ಪಿಯುಸಿಎಲ್‌ನ ರಾಷ್ಟ್ರೀಯ ಕಾರ್ಯದರ್ಶಿ ಪ್ರೊ. ವೈ ಜೆ ರಾಜೇಂದ್ರ ಬಸವ ಮಾರ್ಗಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, “ಬುದ್ಧ, ಬಸವ, ಅಂಬೇಡ್ಕರ್‌ ತತ್ವದ ಮೇಲೆ ನಮ್ಮ ಪಾಲು ಪಡೆಯಬೇಕು. ನಾವು ಮಾನವಘನತೆಯನ್ನು ಪಡೆಯಲು ಸಂವಿಧಾನದಲ್ಲಿ ಎಲ್ಲ ಅವಕಾಶಗಳಿವೆ. ನಿಜವಾದ ಮಾನವೀಯತೆಯ ಬೇರು ಸ್ಲಂಗಳಲ್ಲಿ ಇದೆ. ಇಂದಿನ ದ್ವೇಷ ರಾಜಕಾರಣದಲ್ಲಿ ಮನಸ್ಸು ಕಟ್ಟುವ ಕೆಲಸವಾಗಬೇಕು, ನಾವು ಪ್ರಭುತ್ವವನ್ನುಎಚ್ಚರಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕು” ಎಂದರು.

ಕಾರ್ಯಕ್ರಮಕ್ಕೆ ತುಮುಕೂರು ನಗರ ಶಾಸಕ ಜಿ ಬಿ ಜ್ಯೋತಿಗಣೇಶ್ ಆಗಮಿಸಿ ಶುಭಕೋರಿ ಬುದ್ಧ ಬಸವ ಅಂಬೇಡ್ಕರ್‌ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು.

ಚಿಂತಕ ದೊರೈರಾಜ್ ಅವರಿಗೆ ಬುದ್ಧ ಮಾರ್ಗಿ ಪ್ರಶಸ್ತಿ, ತೃತೀಯ ಲಿಂಗಿಗಳ ಘನತೆಯ ಬದುಕಿಗಾಗಿ ಹೋರಾಡುತ್ತಿರುವ ದೀಪಿಕಾರವರಿಗೆ ಶ್ರಮಶ್ರೀ, ಮಾನವ ಹಕ್ಕುಗಳ ಘನತೆಗಾಗಿ ಶ್ರಮಿಸುತ್ತಿರುವ ಕೆ. ದೊರೆರಾಜ್‌ರವರಿಗೆ, ಬುದ್ಧ ಮಾರ್ಗಿ ಮತ್ತು ಪ್ರೊಫೆಸರ್ ವೈ ಜೆ ರಾಜೇಂದ್ರ ಅವರಿಗೆ ಬಸವ ಮಾರ್ಗಿ ಪ್ರಶಸ್ತಿಯನ್ನು ಸಂಪಾದಕ ಎಸ್. ನಾಗಣ್ಣ ಪ್ರದಾನ ಮಾಡಿದರು. ತುಮಕೂರಿನ ವಿವಿಧ ಸ್ಲಂಗಳ 170 ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ರಂಗಭೂಮಿಗೆ ಚಲನಶೀಲ ಗುಣವಿದೆ: ಕಸಾಪ ಜಿಲ್ಲಾಧ್ಯಕ್ಷ ಸಿದ್ಧಲಿಂಗಪ್ಪ 

ಕಾರ್ಯಕ್ರಮದಲ್ಲಿ ಸ್ಲಂಜನಾಂದೋಲನದ ಸಂಚಾಲಕ ಎ.ನರಸಿಂಹಮೂರ್ತಿ, ನಗರಸಭೆಯ ಮಾಜಿ ಅಧ್ಯಕ್ಷ ಎಂ ಪಿ ಮಹೇಶ್, ಕೆಪಿಸಿಸಿ ಕಾರ್ಯದರ್ಶಿ ಇಕ್ಬಾಲ್‌ ಅಹಮದ್, ನಗರ ಪಾಲಿಕೆಯ ಸದಸ್ಯ ಲಕ್ಷ್ಮೀ ನರಸಿಂಹರಾಜು, ಸಿಐಟಿಯು ಅಧ್ಯಕ್ಷ ಸೈಯದ್ ಮುಜೀಬ್, ಜೆಡಿಯು ಕಾರ್ಯದರ್ಶಿ ಹೆಚ್ ಸಿ ಸುರೇಶ್, ಯುವ ಮುಖಂಡ ಶ್ಯಾಮ ಸುಂದರ್, ಎಐಎಂಎಸ್ ನಕಲ್ಯಾಣಿ, ಅರುಣ್, ತಿರುಮಲಯ್ಯಾ, ಕೃಷ್ಣಮೂರ್ತಿ ಹಾಗೂ ವಿವಿಧ ಸ್ಲಂಗಳ ನೂರಾರು ಕಾರ್ಯಕರ್ತರು, ಜೈ ಭೀಮ್‌ ಯುವಪಡೆ, ಸಂಘಮಿತ್ರ ಸೌಹಾರ್ಧ ಸಹಕಾರಿ, ಜ್ಯೋತಿ ಬಾ ಫುಲೆ ಯುವಕರ ಸಂಘದ ಪದಾಧಿಕಾರಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X