ತುಮಕೂರು | ಸಾಮಾಜಿಕ ಕಾರ್ಯಕರ್ತರಿಗೆ ಮಾಧ್ಯಮದ ನಿರಂತರ ಸಂಪರ್ಕವಿರಬೇಕು : ಸೈಯದ್ ಯೂಸುಫ್ ಉಲ್ಲಾ

Date:

Advertisements

 ಮಾಧ್ಯಮವು ಕೇವಲ ಟಿವಿ ಪರದೆ ಅಥವಾ ಪತ್ರಿಕೆಯ ಪುಟಗಳಷ್ಟೇ ಅಲ್ಲ, ಅದು ಜನಮತವನ್ನು ರೂಪಿಸುವ ಶಕ್ತಿಯಾಗಿದೆ ಎಂದು ಪತ್ರಕರ್ತ ಸೈಯದ್ ಯೂಸುಫ್ ಉಲ್ಲಾ ಅಭಿಪ್ರಾಯಪಟ್ಟರು.

ತುಮಕೂರು ನಗರದ ಬಿಜಿ ಪಾಳ್ಯ ವೃತ್ತದ ಬಳಿ ಇರುವ ಇಸ್ಲಾಮಿಕ್ ಸೆಂಟರ್‌ನಲ್ಲಿ ನಡೆದ “ಮಾಧ್ಯಮ ಮತ್ತು ಸಾಮಾಜಿಕ ಕಾರ್ಯಕರ್ತರ ಜವಾಬ್ದಾರಿ” ವಿಷಯ  ಕುರಿತು ಮಾತನಾಡಿದ ಅವರು,  ಅನೇಕ ಸಾಮಾಜಿಕ ಕಾರ್ಯಕರ್ತರು “ಗೋದಿ ಮೀಡಿಯಾ”, “ಸುಳ್ಳು ಸುದ್ದಿ” ಎಂದು ಮಾಧ್ಯಮವನ್ನು ಟೀಕಿಸುತ್ತಾರೆ ಆದರೆ ತಾವೇ ಮಾಧ್ಯಮದೊಂದಿಗೆ ನಿರಂತರ ಸಂಪರ್ಕ ಬೆಳೆಸುವ ಅಭ್ಯಾಸವಿಲ್ಲ, ದಿನಪತ್ರಿಕೆ ಓದುವುದಿಲ್ಲ, ಟಿವಿ ಸುದ್ದಿಗಳನ್ನು ಗಮನಿಸುವುದಿಲ್ಲ, ಆನ್‌ಲೈನ್‌ನಲ್ಲಿ ವಿಶ್ವಾಸಾರ್ಹ ಮೂಲಗಳನ್ನು ಅನುಸರಿಸುವುದಿಲ್ಲ, ಹೀಗಿರುವಾಗ ಸಮಾಜಕ್ಕೆ ಸರಿಯಾದ ಮಾಹಿತಿ ತಲುಪಿಸುವಲ್ಲಿ ಹೇಗೆ ಯಶಸ್ವಿಯಾಗಬಹುದು?” ಎಂದು ಪ್ರಶ್ನಿಸಿದರು.

ಇದರ ಪರಿಣಾಮ ತಮ್ಮ ಕೆಲಸಕ್ಕೆ ಸಂಬಂಧಿಸಿದ ಸರಿಯಾದ ಮಾಹಿತಿ ಮತ್ತು ಅಂಕಿಅಂಶಗಳ ಕೊರತೆ, ಸಮಾಜದ ಚರ್ಚೆಗಳಲ್ಲಿ ಹಿಂದುಳಿಯುವುದು, ಜನರಿಗೆ ನಿಖರ ಮಾಹಿತಿ ನೀಡುವ ಸಾಮರ್ಥ್ಯ ಕುಸಿಯುವುದು ಕಂಡುಬರುತ್ತಿದೆ ಎಂದರು.

Advertisements

ಮಾಧ್ಯಮದ ಬಗ್ಗೆ ಅರಿವು ಕೊರತೆ, ದಿನನಿತ್ಯ ಸುದ್ದಿಗಳನ್ನು ಅನುಸರಿಸುವ ಮನೋಭಾವದ ಅಭಾವ, ಪೂರ್ವಗ್ರಹ ಹಾಗೂ ಕೆಲ ಮಾಧ್ಯಮದ ತಪ್ಪುಗಳಿಂದ ಸಂಪೂರ್ಣ ಮಾಧ್ಯಮವನ್ನೇ ನಿರ್ಲಕ್ಷಿಸುವ ಪ್ರವೃತ್ತಿ ಸರಿಯಲ್ಲ ಎಂದು ಒತ್ತಾಯಿಸಿದರು.

ಮಾಧ್ಯಮವನ್ನು ಸಂಪೂರ್ಣವಾಗಿ ತಿರಸ್ಕರಿಸುವ ಬದಲು ಅದನ್ನು ಸಹಾಯಕ ಸಾಧನವನ್ನಾಗಿ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ ಯೂಸುಫ್, ಪ್ರತಿದಿನ ಕನಿಷ್ಠ 15–20 ನಿಮಿಷ ದಿನಪತ್ರಿಕೆ ಓದುವುದು, ವಿಭಿನ್ನ ಮೂಲಗಳಿಂದ ಸುದ್ದಿಗಳನ್ನು ಹೋಲಿಸಿ ಓದುವುದು, ಮಾಧ್ಯಮ ಲಿಟರಸಿ ತರಬೇತಿ ಪಡೆದು ಸುಳ್ಳು-ಸತ್ಯ ಬೇರ್ಪಡಿಸುವ ಕೌಶಲ್ಯ ಬೆಳೆಸುವುದು ಮತ್ತು ಮಾಧ್ಯಮದವರೊಂದಿಗೆ ನಿಕಟ ಸಂಬಂಧ ಬೆಳೆಸುವುದು ಸಾಮಾಜಿಕ ಕಾರ್ಯಕರ್ತರಿಗೆ ಅಗತ್ಯವಿದೆ ಎಂದರು.

“ಸಾಮಾಜಿಕ ಕಾರ್ಯಕರ್ತರ ಶಕ್ತಿ ಕೇವಲ ಜನರೊಂದಿಗೆ ಇರುವ ಸಂಪರ್ಕದಲ್ಲೇ ಅಲ್ಲ, ಮಾಹಿತಿಯ ಶುದ್ಧತೆಯಲ್ಲೂ ಇದೆ. ಮಾಧ್ಯಮದ ಸಹಕಾರ ಪಡೆದು, ನಾವು ಎಲ್ಲರೂ ಸೇರಿ ಸುಳ್ಳು ಸುದ್ದಿಗೆ ಕಡಿವಾಣ ಹಾಕಿ, ಸತ್ಯ, ಶಾಂತಿ ಮತ್ತು ನ್ಯಾಯವನ್ನು ಕಾಪಾಡೋಣ” ಎಂದು ಅವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮೌಲಾನ ಅಸ್ರಾರ್ ಅಹಮದ್, ಮಕರಂ ಸೈಯಿದ್ ಸೇರಿದಂತೆ ಸಮಾಜದ ಮುಖಂಡರು ಮತ್ತು ಅನೇಕ ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X