ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ 50ವರ್ಷದ ಸಂಭ್ರಮದಲ್ಲಿದೆ. ಬುದ್ಧ, ಬಸವ, ಅಂಬೇಡ್ಕರ್ ರಚಿಸಿ ಸ್ಥಾಪಿಸಿದ ಸಂವಿಧಾನದಡಿಯಲ್ಲಿ ಶೋಷಿತ, ದಮನಿತ, ದಲಿತರ ಪರವಾಗಿ ಸಾಮಾಜಿಕ ನ್ಯಾಯ ಒದಗಿಸಿ ಎಲ್ಲಾ ಜಾತಿಗಳ ಪರವಾಗಿ ಹೋರಾಟ ನಡೆಸುತ್ತಾ ಸಮಿತಿ ಸಾಗಿದೆ ಎಂದು ದಸಂಸ ತುಮಕೂರು ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಹೇಳಿದರು.
ತುಮಕೂರಿನ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತಿಪಟೂರಿನಲ್ಲಿ ಸ್ಥಾಪಿತವಾಗಿ 46ವರ್ಷ ತುಂಬಿದೆ. ಶೋಷಿತರಾ, ಸಾಮಾಜಿಕ ನ್ಯಾಯಕ್ಕಾಗಿ ಸಾವಿರಾರು ಕಿ.ಮೀ. ಪಾದಯಾತ್ರೆ ನಡೆಸಿ ನ್ಯಾಯ ದೊರಕಿಸಿ ಕೊಟ್ಟಿದ್ದೇವೆ. ಸಮಿತಿಯ ಆದೇಶದಂತೆ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ ಎಂದರು.
ಸಾಮಾಜಿಕ ನ್ಯಾಯಗಳಿಂದ ವಂಚಿತರಾದ ಯಾವುದೇ ಸಮುದಾಯದ ಪರ ಹೋರಾಟ ಮಾಡಲು ಸಮಿತಿ ಸಿದ್ಧವಿದೆ. ಇತ್ತೀಚೆಗೆ ತಮ್ಮ ವೈಯಕ್ತಿಕ ವಿಚಾರಕ್ಕೆ ಧನವಂತರು ದಲಿತರನ್ನು ಜಾತಿನಿಂದನೆ ಪ್ರಕರಣಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ದಲಿತರು ಎಚ್ಚೆತ್ತುಕೊಳ್ಳಬೇಕು, ಸಮಿತಿ ನ್ಯಾಯದ ಪರವಿರುತ್ತದೆ ಎಂದರು.
ಕರ್ನಾಟಕ ದಸಂಸ ಸ್ಥಾಪಿತವಾಗಿ 50ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ ಈ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಮೊದಲ ಬಾರಿಗೆ ತಾಲೂಕು ಸಂಚಾಲಕನಾಗಿ ಆಯ್ಕೆಯಾದಾಗ ಪಾದಯಾತ್ರೆಯ ಮುಖಾಂತರ, ಹೋರಾಟ ನಡೆಸಿ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟಿದ್ದೇವು ಎಂದರು.
ತಿಪಟೂರು ತಾಲೂಕು ಸಂಚಾಲಕರಾಗಿ ಮೋಹನ್ ಜಕ್ಕನಹಳ್ಳಿ, ಸಂಘಟನಾ ಸಂಚಾಲಕರಾಗಿ ಮಂಜುನಾಥ್ ಹರಚನಹಳ್ಳಿ, ರಂಗಸ್ವಾಮಿ ಹುಲಿಹಳ್ಳಿ, ಉಗ್ರ ನರಸಿಂಹಯ್ಯ ಯಗಚಿಕಟ್ಟೆ, ಚಂದ್ರಶೇಖರ್ ಗಡಬನಹಳ್ಳಿ, ಚಂದ್ರಶೇಖರ್ ಕರಡಾಳು, ಸುರೇಶ್ ಕರಿಕೆರೆ, ಲೋಕೇಶ್ ಚಿಗ್ಗಾವಿ, ರವೀಶ್ ಮಂಜುನಾಥ್ ಪುರ, ಮೋಹನ್ ಬಾಬು ಬೈರಾಪುರ, ಖಜಾಂಚಿಯಾಗಿ ರಮೇಶ್ ಶಿವಪುರ, ಕಾನೂನು ಸಲಹೆಗಾರರಾಗಿ ವೆಂಕಟೇಶ್, ತಿಪಟೂರು, ಮಹಿಳಾ ಸಂಚಾಲಕಿಯಾಗಿ ಧನಲಕ್ಷ್ಮಿ ಕೊನೇಹಳ್ಳಿ, ಸಂಘಟನಾ ಸಂಚಾಲಕರಾಗಿ ನಂದಿನಿ, ಮಡೆ ನೂರು, ಶಾರದಾ ಕಲ್ಲು ಶೆಟ್ಟಿಹಳ್ಳಿ, ನಗರ ಸಂಚಾಲಕರಾಗಿ ರಮೇಶ್ ಮಾರನಗೆರೆ ನಗರ ಸಂಘಟನಾ ಸಂಚಾಲಕರಾಗಿ, ಮಂಜುನಾಥ್ ಮಾರನಗೆರೆ, ಸಂದೀಪ್ ಮಣಿಕಂಠ ಮುನ್ನು ಕಂಚಾಘಟ್ಟ ಮನೋಜ್ ಲೋಕೇಶ್, ಕಸಬಾ ಹೋಬಳಿ ಸಂಚಾಲಕರಾಗಿ ಗಿರೀಶ್ ಕುಮಾರ್ ನಾಗಹಳ್ಳಿ, ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರುಗಳಾದ ನಾಗತಿಹಳ್ಳಿ ಕೃಷ್ಣಮೂರ್ತಿ, ಶಿವಲಿಂಗಪ್ಪ, ಮುರುಳಿ, ಮಧುಸೂಧನ್, ಧನಲಕ್ಷ್ಮಿ ಇದ್ದರು.