ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಅವರ ಬೆಂಬಲಿಗರು ನನ್ನ ಬಳಿ ಮತ್ತು ಡಾ. ಜಿ ಪರಮೇಶ್ವರ್ ಬಳಿಯೂ ಪ್ರಸ್ತಾಪಿಸಿದ್ದಾರೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿಕೆ ನೀಡಿದ್ದಾರೆ.
ತುಮಕೂರು ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, “ಮಾಜಿ ಸಚಿವ ವಿ ಸೋಮಣ್ಣ ಕಾಂಗ್ರೆಸ್ ಸೇರುವ ಬಗ್ಗೆಯೂ ಚರ್ಚೆ ನಡೆದಿರಬಹುದು, ನನಗೆ ಮಾಹಿತಿ ಇಲ್ಲ. ಆದರೆ ಡಿಸೆಂಬರ್ 6ರಂದು ಸಿದ್ಧಗಂಗಾ ಮಠದಲ್ಲಿ ವಿ ಸೋಮಣ್ಣ ದೊಡ್ಡ ಕಾರ್ಯಕ್ರಮ ಮಾಡುತ್ತಿದ್ದಾರೆ. ಆ ಕಾರ್ಯಕ್ರಮಕ್ಕೆ ನನಗೂ ಆಹ್ವಾನ ನೀಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಜಾತಿ ಗಣತಿ | ಅಧಿವೇಶನದ ನಂತರ ವರದಿ ಬಿಡುಗಡೆ ಸಾಧ್ಯತೆ: ಸತೀಶ್ ಜಾರಕಿಹೊಳಿ
“ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧಿಸಬೇಕೆಂದು ನಾನೂ ಆಸಕ್ತನಾಗಿದ್ದು, ಟಿಕೆಟ್ ಕೇಳಿದ್ದೇನೆ. ಕಾಂಗ್ರೆಸ್ ಎನ್ನುವುದು ಒಂದು ಮಹಾಸಾಗರ. ಅಲ್ಲಿಗೆ ಗಂಗಾನದಿಯ ನೀರು ಬರುತ್ತದೆ, ಕಾವೇರಿಯ ನೀರೂ ಸೇರುತ್ತದೆ. ಕಾಂಗ್ರೆಸ್ ಸಾಮೂಹಿಕ ನಾಯಕತ್ವದ ಪಾರ್ಟಿ, ಕೇಡರ್ ಬೇಸ್ ಪಾರ್ಟಿಯಲ್ಲ” ಎಂದರು.