ಬೀದಿ ನಾಯಿಗೆ ಅನ್ನ ಹಾಕಲು ಮನೆಯಿಂದ ಹೊರ ಬಂದ ಮಹಿಳೆಯ ಕತ್ತಿನಲ್ಲಿದ ಚಿನ್ನದಸರವನ್ನು ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಿತ್ತು ಪರಾರಿಯಾದ ಘಟನೆ ಗುಬ್ಬಿ ಪಟ್ಟಣದ ಕೋಟೆ ಬೀದಿಯಲ್ಲಿ ನಡೆದಿದೆ.
ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಮಾಮೂಲಿಯಂತೆ ನಾಯಿಗೆ ಅನ್ನ ಹಾಕಲು ದಂಪತಿಗಳು ಮನೆಯಿಂದ ಹೊರ ಬಂದ ಸಮಯದಲ್ಲಿ ಗಿರಿಜಮ್ಮ ಎಂಬ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 58 ಗ್ರಾಂ ತೂಕದ ಚಿನ್ನದ ಸರವನ್ನು ಡಿಯೋ ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ಚಿನ್ನದಸರ ಕಿತ್ತು ವೇಗವಾಗಿ ಪರಾರಿಯಾದರು. ಅಲ್ಲೇ ನಾಯಿಗೆ ಅನ್ನ ಹಾಕುತ್ತಿದ್ದ ಪತಿ ರೇಣುಕಾರಾಧ್ಯ ಬೈಕ್ ಹಿಂಬಾಲಿಸಿ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿ ಕೆಳಗೆ ಬಿದ್ದರು.
ಸಂತ್ರಸ್ತರು ಗುಬ್ಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.