ತುರುವೇಕೆರೆ | ಮಲ್ಲೂರಿನಲ್ಲಿ ಯಶಸ್ವಿಯಾಗಿ ನಡೆದ ಶಾಂತಿಸಭೆ

Date:

  ಮೂಢನಂಬಿಕೆಗಳ ಮೇಲೆ ವ್ಯವಸ್ಥೆ ನಿಂತಿಲ್ಲ. ವ್ಯವಸ್ಥೆ ನಡೆಯುತ್ತಿರುವುದು ಸಂವಿಧಾನ ಮತ್ತು ಕಾನೂನುಗಳ ಮೇಲೆ. ಎಲ್ಲರೂ ಸಂವಿಧಾನವನ್ನು ಓದಿಕೊಂಡು ಸಂವಿಧಾನಬದ್ಧವಾಗಿ ನಡೆಯಬೇಕು ಎಂದು ತುರುವೇಕೆರೆ ತಹಶಿಲ್ದಾರ್ ಕುಂಜಿ ಅಹಮದ್ ಅಭಿಪ್ರಾಯಪಟ್ಟರು.

- Advertisement -

ಏ.18ರಂದು ದಲಿತ ಸಮುದಾಯದ ಕುಟುಂಬವೊಂದು ದೇವಾಲಯ ಪ್ರವೇಶ ಮಾಡಿದ್ದಕ್ಕೆ ಜಾತಿನಿಂದನೆ ಮಾಡಿದ ಪ್ರಕರಣ ಸಂಬಂಧ ಬುಧವಾರ ತಾಲ್ಲೂಕಿನ ಮಲ್ಲೂರು ಗ್ರಾಮದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ ವತಿಯಿಂದ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಮಲ್ಲೂರು ಗ್ರಾಮದಲ್ಲಿ ಎಲ್ಲರೂ ಅಣ್ಣತಮ್ಮಂದಿರಂತೆ, ಸಹೋದರ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಸಾರ್ವಜನಿಕ ಸ್ಥಳ, ಸರಕಾರಿ ಸ್ಥಳಗಳಿಗೆ ಜಾತಿ, ಧರ್ಮದ ಹಂಗಿಲ್ಲ. ಎಲ್ಲವನ್ನೂ ದಾಟಿ ಬದುಕಬೇಕು. ಎಲ್ಲರ ದೇಹದಲ್ಲೂ ರಕ್ತವೇ ಹರಿಯುತ್ತದೆ. ತುರ್ತು ಸಂದರ್ಭ ಬಂದರೆ ರಕ್ತ ಕೊಡಲು ನಾವು ಜಾತಿ, ಧರ್ಮ ನೋಡುವುದಿಲ್ಲ. ಅಂತೆಯೇ ನಾವು ಮಾನವೀಯತೆ ಬೆಳೆಸಿಕೊಂಡು ಬದುಕಬೇಕು ಎಂದು ಅವರು ತಿಳಿಸಿದರು.

1003435254

ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣ ಶರವೇಗದಲ್ಲಿದೆ. ಈ ಹಿನ್ನೆಲೆ ನಾವೆಲ್ಲರೂ ಎಚ್ಚರಿಕೆಯಿಂದ ಬದುಕಬೇಕಿದೆ. ಕಾನೂನು ಬಾಹಿರವಾಗಿ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕ್ಷಣಾರ್ಧದಲ್ಲಿ ಘಟನೆ ಜಗಜ್ಜಾಹೀರಾಗುತ್ತದೆ. ಅಷ್ಟೇ ವೇಗದಲ್ಲಿ ಕ್ರಮವೂ ಆಗುತ್ತದೆ ಎಂದು ಕುಂಜಿ ಅಹಮದ್ ಹೇಳಿದರು.

ದೇಶದಲ್ಲಿ ಸಂವಿಧಾನಕ್ಕಿಂತ ದೊಡ್ಡದು ಯಾವುದೂ ಇಲ್ಲ. 17ನೇ ವಿಧಿ ಅಸ್ಪೃಶ್ಯತೆ ನಿವಾರಣೆಗಾಗಿ ಇದೆ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ. ಎಲ್ಲರೂ ಸಮಾನವಾಗಿ ಮಾನವರಂತೆ ಬದುಕೋಣ. “ಇವ ನಮ್ಮವ ಇವ ನಮ್ಮವ” ಎಂಬ ಬಸವಣ್ಣನ ವಚನದಂತೆ ನಮ್ಮ ಬದುಕು ರೂಪಿತವಾಗಲಿ. ಅಂಬೇಡ್ಕರ್, ಬುದ್ಧ, ಬಸವಣ್ಣ, ಕನಕದಾಸರ ಆಶಯಗಳು ಬದುಕಿಗೆ ದಾರಿಯಾಗಲಿ ಎಂದು ಕುಂಜಿ ಅಹಮದ್ ತಿಳಿಸಿದರು.

1003435247

ತುರುವೇಕೆರೆ ಪಿಎಸ್ಐ ಮೂರ್ತಿ ಮಾತನಾಡಿ, ಅಸ್ಪೃಶ್ಯತೆ ಆಚರಣೆ ಬಗ್ಗೆ ಮಾಹಿತಿ ಸಿಕ್ಕಿದ ಒಂದೆರಡು ಗಂಟೆಗಳಲ್ಲೇ ಆರೋಪಿ ವಿರುದ್ಧ ಕ್ರಮ ಜರುಗಿಸಿದ್ದೇವೆ. ಕಾನೂನು ಮೊದಲಿನಂತಿಲ್ಲ, ಈಗ ಬಿಎನ್ಎಸ್, ಬಿಎನ್ಎಸ್ಎಸ್ ಬಂದ ನಂತರ ಕಾನೂನು ಬಹಳ ಕಠಿಣವಾಗಿದೆ. ಯಾರನ್ನೂ ಅಷ್ಟು ಸುಲಭಕ್ಕೆ ಬಿಡುವ ಮಾತಿಲ್ಲ. ಗ್ರಾಮೀಣ ಭಾಗದಲ್ಲಿ ಶಾಂತಿ ವಾತಾವರಣ ಇರಬೇಕು. ಎಲ್ಲರೂ ಕಾನೂನಿನೊಳಗಡೆ ಎಚ್ಚರಿಕೆಯಿಂದ ಬದುಕಬೇಕು ಎಂದರು.

ಡಿಎಸ್ಎಸ್ ತಾಲೂಕು ಸಂಚಾಲಕ ಎಂ.ತಿಮ್ಮೇಶ್ ಮಾತನಾಡಿ, ಹಿಂದಿನಿಂದ ನಡೆದುಕೊಂಡು ಬಂದಂತೆ ಈಗಿನ ವ್ಯವಸ್ಥೆ ಇಲ್ಲ. ಇದು ಆಧುನಿಕ ಜಗತ್ತು. ಎಲ್ಲರ ಮನೆಯಲ್ಲಿಯೂ ವಿದ್ಯಾವಂತರಿದ್ದಾರೆ‌. ಅಸ್ಪೃಶ್ಯತೆ ಎನ್ನುವುದು ಇವತ್ತಿನ ಝೆನ್ ಝೀ ಪೀಳಿಗೆಗೆ ತಟ್ಟಬಾರದು. ವ್ಯವಸ್ಥೆಯ ಬದಲಾವಣೆಗೆ ಹೋರಾಟ ಮಾಡಬೇಕು. ಉತ್ತಮ ಸಮಾನ ನಿರ್ಮಾಣ ಮಾಡಲು ಶ್ರಮಿಸಬೇಕಿದೆ. ಸಮಾಜ ಕಲ್ಯಾಣ ಇಲಾಖೆ ಪ್ರತಿ ಗ್ರಾಮಗಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಕೆಆರ್ ಎಸ್ ಪಕ್ಷದ ಎಸ್ಸಿಎಸ್ಟಿ ಘಟಕದ ರಾಜ್ಯ ಕಾರ್ಯದರ್ಶಿ ಸಿ.ಚನ್ನಯ್ಯ ಮಾತನಾಡಿ, ಸಂವಿಧಾನ ಈ ದೇಶದ ಅತಿದೊಡ್ಡ ಗ್ರಂಥ. ಇಂದಿನ ಯುವ ಸಮೂಹ ಸಂವಿಧಾನವನ್ನು ಓದಬೇಕು. ಅಸ್ಪೃಶ್ಯತೆ ದೊಡ್ಡ ಪಿಡುಗು. ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಸಮಾನ ಬದುಕಿದೆ ಎಂದರು.

ಪತ್ರಕರ್ತ ಯೋಗೇಶ್ ಮಲ್ಲೂರು ಮಾತನಾಡಿ, ಹುಟ್ಟುವಾಗ ಯಾರೂ ಇಂಥದ್ದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಹುಟ್ಟಿದ ನಂತರ ಈ ಜಾತಿ, ಧರ್ಮ ಅನ್ನುವ ಪೀಡೆ ಅಂಟಿಕೊಳ್ಳುತ್ತದೆ. ಯುವಜನಾಂಗ, ಅಕ್ಷರ ಜ್ಞಾನ ಇರುವವರು ಇದೆಲ್ಲವನ್ನೂ ಹೋಗಲಾಡಿಸಿ ಸಮಾನತೆಯಿಂದ ಬದುಕಬೇಕು. ಕುವೆಂಪು ಆಶಯದಂತೆ ವಿಶ್ವ ಮಾನವರಾಗಿ ಬಾಳಬೇಕು ಎಂದರು.

ನಮ್ಮ ಇಡೀ ಆಡಳಿತ ವ್ಯವಸ್ಥೆ ನಿಂತಿರುವುದೇ ಸಂವಿಧಾನದ ಮೇಲೆ. ಅಂತಹ ಸಂವಿಧಾನ ಪೀಠಿಕೆ ಶುರುವಾಗುವುದು “ಭಾರತೀಯ ಪ್ರಜೆಗಳಾದ ನಾವು” ಎಂದು. ಬದಲಾಗಿ ನಾವು ಲಿಂಗಾಯತರು, ನಾವು ದಲಿತರು, ನಾವು ಒಕ್ಕಲಿಗರು, ನಾವು ಮುಸ್ಲಿಮರು, ನಾವು ಕ್ರಿಶ್ಚಿಯನ್ ಎಂದು ಯಾವ ಸಂವಿಧಾನ ಪುಟದಲ್ಲೂ ಬರೆದಿಲ್ಲ. ಆಯಾ ಜಾತಿಯೇ ಮೇಲಾಗಿದ್ದರೆ ಇಡೀ ವ್ಯವಸ್ಥೆಯನ್ನು ನಿಯಂತ್ರಣ ಮಾಡುತ್ತಿರುವ ಸಂವಿಧಾನ ಪುಸ್ತಕದಲ್ಲಿ ಜಾತಿಗಳ ಹೆಸರು ಬರೆಯಬೇಕಿತ್ತಲ್ಲವೇ? ಆದರೆ ಎಲ್ಲೂ ಬರೆದಿಲ್ಲ. ಭಾರತೀಯ ಪ್ರಜೆಗಳಾದ ನಾವು ಎಂಬ ವಿಶಾಲ ಅರ್ಥದಿಂದ ಸಂವಿಧಾನ ಪ್ರಾರಂಭಗೊಳ್ಳುತ್ತದೆ. ಅಂದರೆ ನಾವೆಲ್ಲ ಒಂದು, ನಾವೆಲ್ಲ ಭಾರತೀಯರು ಎಂಬ ಮನೋಭಾವ ನಮ್ಮೊಳಗೆ ಬರಬೇಕು. ಯುವಕರು ಇದನ್ನು ತಿಳಿದುಕೊಂಡು ಸಾಗಬೇಕು ಎಂದು ಯೋಗೇಶ್ ತಿಳಿಸಿದರು.

“ದೇವರಿಗೆ ಮೈಲಿಗೆ ಆಗಲ್ಲ; ಮನಸು ಮೈಲಿಗೆ ಮಾಡಿಕೊಳ್ಳಬಾರದು”

ತುರುವೇಕೆರೆ ತಾಲೂಕಿನಲ್ಲಿ ಅಸ್ಪೃಶ್ಯತೆ ಆಚರಣೆಗೆ ಸಂಬಂಧಿಸಿದಂತೆ ಇದು ಎರಡನೇ ಘಟನೆಯಾಗಿದೆ. ಮೇಲಿನವಳಗೆರೆಹಳ್ಳಿಯಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿ ಇದುವರೆಗೂ ಆರೋಪಿಗೆ ಜಾಮೀನು ಸಿಕ್ಕಿಲ್ಲ. ಈಗ ಮಲ್ಲೂರು ಘಟನೆ ಎರಡನೇಯದು. ಸದ್ಯ ಆರೋಪಿಗೆ ಕಾನೂನು ಕ್ರಮವಾಗಿದೆ. ಇನ್ನುಮುಂದೆ ಗ್ರಾಮದಲ್ಲಿ ಎಲ್ಲರೂ ಅಣ್ಣತಮ್ಮಂದಿರಂತೆ ಹೋಗಬೇಕು. ದಲಿತರು ದೇವಾಲಯದೊಳಗೆ ಹೋಗುತ್ತಿದ್ದಂತೆ ದೇವರು ಮೈಲಿಗೆ ಆಗುವುದಿಲ್ಲ, ಆದರೆ, ನೀವು ಮನಸುಗಳನ್ನು ಮೈಲಿಗೆ ಮಾಡಿಕೊಳ್ಳಬೇಡಿ. ದೇವಸ್ಥಾನದಲ್ಲಿ ಸರ್ವರಿಗೂ ಮುಕ್ತ ಪ್ರವೇಶ ಕಲ್ಪಿಸಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಮಲ್ಲೂರಿನ ಜನರು ಸಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಡಿಎಸ್ಎಸ್ ಜಿಲ್ಲಾ ಸಂಚಾಲಕ ದಂಡಿನಶಿವರ ಕುಮಾರ್ ಹೇಳಿದರು.

ಸಭೆಯಲ್ಲಿ ವಿಎಸ್ಎಸ್ಎನ್ ನಿರ್ದೇಶಕ ಮಧು ಎಂ., ಅರ್ಚಕರಾದ ರಂಗನಾಥ್, ಗ್ರಾಮಸ್ಥರಾದ ಹರೀಶ್ ಎಂ., ರಮೇಶ್ ಎಂ.ಆರ್., ಸೋಮಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು ದಸರಾ:ಸನ್ಮಾನದ ಹೆಸರಿನಲ್ಲಿ ಪೌರಕಾರ್ಮಿಕರನ್ನು ಕರೆದು ಅವಮಾನಿಸಿದ ಜಿಲ್ಲಾಡಳಿತ!

ತುಮಕೂರು ನಗರದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುವ ಪೌರಕಾರ್ಮಿಕರನ್ನು ಸನ್ಮಾನಿಸುವುದಾಗಿ ಕರೆದು, ಬಳಿಕ...

ತುಮಕೂರು ದಸರಾ : ಅಧಿಕಾರಿಗಳ ಕುಟುಂಬಸ್ಥರ ಕಾಲಿನ ಬಳಿ ಮಾಧ್ಯಮದವರಿಗೆ ಆಸನ

 'ತುಮಕೂರು ದಸರಾ' ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಕುಟುಂಬಸ್ಥರು, ರಾಜಕಾರಣಿಗಳ ಹಿಂಬಾಲಕರು...

ತುಮಕೂರು ದಸರಾ: ಹೊರ ರಾಜ್ಯದವರಿಗೆ ವಿಶೇಷ ಆತಿಥ್ಯ- ಸ್ಥಳೀಯರಿಗೆ ಗೇಟಿನಾಚೆ ಆಸನ

ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ...

ಕೆಪಿಎಸ್‌ಸಿ ಪರೀಕ್ಷಾ ಅಕ್ರಮದ ಆರೋಪಿ ಬಸವರಾಜ್ ಕಿನ್ನಾಳೆ RSS ಪಥಸಂಚಲನದ ಫೋಟೊ ವೈರಲ್

ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಸಿಐಡಿಯಿಂದ ಬಂಧನಕ್ಕೊಳಗಾಗಿ, ಮಧ್ಯಂತರ ಜಾಮೀನಿನ ಮೇಲೆ...