ತಿಪಟೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 5, 4 ಎನ್‌ಸಿಸಿ ಕಂಪನಿಗೆ ಹೆಮ್ಮೆಯ ಕ್ಷಣವಾಗಿದ್ದು, ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳಾದ ಮನೋಜ್ (ಅಂತಿಮ ವರ್ಷದ ಬಿಬಿಎ), ಅಜಯ್ (ದ್ವಿತೀಯ ವರ್ಷದ ಬಿಸಿಎ), ಅಭಿಷೇಕ್ – (ಬಿ.ಕಾಂ) ಈ ಮೂವರು ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ.
ಈ ಮಹತ್ವದ ಸಾಧನೆಯನ್ನು ಸಂಭ್ರಮಿಸಲು ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ.ಶಶಿಕುಮಾರ್. ಎಚ್.ಸಿ , ರಾಷ್ಟ್ರಸೇವೆ ಅತ್ಯುನ್ನತ ಕರ್ತವ್ಯವಾಗಿದೆ. ಈ ಯುವ ಅಗ್ನಿವೀರರು ತಮ್ಮ ಮುಂದಿನ ಪಯಣದಲ್ಲಿ ಧೈರ್ಯ, ಶಿಸ್ತು ಮತ್ತು ಸಮರ್ಪಣೆಯ ಮೌಲ್ಯಗಳನ್ನು ಸದಾ ಉಳಿಸಿಕೊಳ್ಳಲಿ. ರಾಷ್ಟ್ರಸೇವೆಯತ್ತ ಕೆಡೆಟ್‌ಗಳು ತೋರಿದ ಸಮರ್ಪಣೆ, ಪರಿಶ್ರಮ ಮತ್ತು ಬದ್ಧತೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಅಲ್ಲದೆ, ಭಾರತೀಯ ಸೇನೆಯಲ್ಲಿ ಅವರ ಮುಂದಿನ ವೃತ್ತಿಜೀವನ ಯಶಸ್ವಿ ಹಾಗೂ ಉಜ್ವಲವಾಗಿರಲೆಂದು ಶುಭ ಹಾರೈಸಿದರು.
ಸಹಾಯಕ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಡಾ. ವಿರೂಪಾಕ್ಷ ಜೆ. ಡಿ ಮಾತನಾಡಿ, ಈ ಕಾರ್ಯಕ್ರಮವು ಎಲ್ಲಾ ವಿದ್ಯಾರ್ಥಿಗಳು ಹಾಗೂ ಎನ್‌ಸಿಸಿ ಕೆಡೆಟ್‌ಗಳಿಗೆ ಪ್ರೇರಣೆಯಾಗಿದ್ದು, ಶಿಸ್ತುಬದ್ಧ, ಜವಾಬ್ದಾರಿಯುತ ಮತ್ತು ದೇಶಭಕ್ತ ಯುವಜನರನ್ನು ರೂಪಿಸುವಲ್ಲಿ ಎನ್‌ಸಿಸಿ ನೀಡುವ ಅವಕಾಶಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎನ್‌ಸಿಸಿ ಕೆಡೆಟ್‌ಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





