ಆಧಾರ್ ಸಂಖ್ಯೆ ಪ್ರಮಾಣೀಕರಣ: ಶಾಲಾ ಮಕ್ಕಳನ್ನು ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರನ್ನಾಗಿಸುವ ಹುನ್ನಾರ

Date:

Advertisements
ಸ್ಯಾಟ್ ತಂತ್ರಾಂಶದಲ್ಲಿ ಆಧಾರ್ ಕಾರ್ಡನ್ನು ಪ್ರಮಾಣೀಕರಿಸದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಷ್ಟ್ರೀಯ ಶಾಲಾ ಶಿಕ್ಷಣ ಯೋಜನೆಗಳ ಅಡಿಯಲ್ಲಿ ಅನೇಕ ಅನುಕೂಲ ಹೊಂದಲು ಶಾಲಾ ಶಿಕ್ಷಣ ಕಲಿಕಾರ್ಥಿಗಳಿಗೆ ಅನ್ಯಾಯವಾಗತೊಡಗಿದೆ. ಅದರಲ್ಲೂ ಬಡವರ ಮಕ್ಕಳಿಗೆ ಹೆಚ್ಚಿನ ತೊಂದರೆಯಾಗಿದೆ. ಇದಕ್ಕೆ ಕಾರಣಕರ್ತರು ಯಾರು ಎನ್ನುವ ಪ್ರಶ್ನೆ ಎದುರಾಗಿದೆ.

SAT ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು ಪ್ರಮಾಣೀಕರಿಸದೆ ಶಾಲಾ ಮಕ್ಕಳು  ಸೌಲಭ್ಯಗಳನ್ನು ಪಡೆಯಲು ಹಿನ್ನಡೆಯಾಗಿದೆ. ಶಾಲಾ ಶಿಕ್ಷಣವನ್ನು ಕಲಿಯುತ್ತಿರುವ ಮಕ್ಕಳು ಅನೇಕ ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತವಾಗುವಂತಹ ಸಂದರ್ಭ ಎದುರಾಗಿರುವುದು ದುರದೃಷ್ಟಕರ.

ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯದ ಸೇವೆ, ಆಯುಷ್ಮಾನ್ ಭಾರತ್ ಕಾರ್ಡ್, ಉನ್ನತ ಶಿಕ್ಷಣ, ಬ್ಯಾಂಕ್ ಖಾತೆ ತೆರೆಯಲು, ಜಾತಿ ಮತ್ತು ಪ್ರಮಾಣ ಪತ್ರ ಪಡೆಯಲು, ವಂಶವೃಕ್ಷ, ಶಾಲಾ ಶುಲ್ಕ ವಿನಾಯಿತಿ ಪಡೆಯಲು ಅನಾನುಕೂಲ. ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಪಡೆಯಲೂ ಅನಾನುಕೂಲ. ಹೀಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಷ್ಟ್ರೀಯ ಶಾಲಾ ಶಿಕ್ಷಣ ಯೋಜನೆಗಳ ಅಡಿಯಲ್ಲಿ ಅನೇಕ ಅನುಕೂಲ ಹೊಂದಲು ಶಾಲಾ ಶಿಕ್ಷಣ ಕಲಿಕಾರ್ಥಿಗಳಿಗೆ ಅನ್ಯಾಯವಾಗತೊಡಗಿದೆ. ಅದರಲ್ಲೂ ಬಡವರ ಮಕ್ಕಳಿಗೆ ಹೆಚ್ಚಿನ ಅನ್ಯಾಯವಾಗಿದೆ. ಇದಕ್ಕೆ ಕಾರಣಕರ್ತರು ಯಾರು ಎನ್ನುವ ಪ್ರಶ್ನೆ ಎದುರಾಗಿದೆ.

ಸ್ಯಾಟ್ ತಂತ್ರಾಂಶದಲ್ಲಿ ಆದಾರ್ ಕಾರ್ಡನ್ನು ಪ್ರಮಾಣೀಕರಿಸದಿರುವುದರಿಂದ ಮಕ್ಕಳು ಸೌಲಭ್ಯಗಳನ್ನು ಪಡೆಯಲು ಅಡಚಣೆಯಾಗಿದೆ ಎಂಬುದು ವಾಸ್ತವ. ಮತ್ತು ಆತಂಕಕಾರಿ ಸಂಗತಿ. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳು ಆದ್ಯತೆಯ ಮೇರೆಗೆ ಶೈಕ್ಷಣಿಕ ವರ್ಷದ ಆರಂಭದ ದಿನಗಳಲ್ಲಿಯೇ ಶ್ರಮಹಿಸಿ ಸೂಕ್ತ ಕ್ರಮಗಳನ್ನು ಕೈಗೊಂಡು, ಸಂಬಂಧಪಟ್ಟ ಮಕ್ಕಳಿಗೆ ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಯೋಜನೆಗಳ, ಎಲ್ಲಾ ಶೈಕ್ಷಣಿಕ ಸೌಲಭ್ಯಗಳು ದೊರಕುವಂತೆ ಮುತುವರ್ಜಿ ವಹಿಸಬೇಕಾಗಿತ್ತು. ವಿಷಾದನೀಯ ಸಂಗತಿ ಎಂದರೆ ಬಹುತೇಕವಾಗಿ ಆಧಾರ್ ಮೌಲ್ಯೀಕರಣ ಪ್ರಕ್ರಿಯೆಯನ್ನು ನಿರ್ಲಕ್ಷಿಸಲಾಗಿರುವುದು ಮೇಲ್ನೋಟಕ್ಕೇ ಗೋಚರಿಸತೊಡಗಿದೆ.

Advertisements

ಶಾಲಾ ಮಕ್ಕಳು, ಪೋಷಕರು, ಶಾಲೆಗಳನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಿ ಶಾಲಾ ಶಿಕ್ಷಣ ಇಲಾಖೆ ಸುಮ್ಮನಾಗಬಾರದಾಗಿತ್ತು. ಶಾಲಾ ಶಿಕ್ಷಣ ಇಲಾಖೆಯೂ ಈ ಪ್ರಕ್ರಿಯೆಯನ್ನು ಆದ್ಯತೆಯ ಮೇರೆಗೆ ನಿರ್ವಹಿಸಲು ಮುಂದಾಗಬೇಕಾಗಿತ್ತು. ಆದರೆ ಅಂತಹ ಕೆಲಸ ಶಾಲಾ ಶಿಕ್ಷಣ ಇಲಾಖೆಯಿಂದ ನಡೆಯದೆ ಹೋಗಿದೆ. ಶೈಕ್ಷಣಿಕ ವರ್ಷ ಮುಗಿಯುವುದರೊಳಗೆ ಈ ಕಾರ್ಯಕ್ರಮ ಅಂತ್ಯಗೊಳ್ಳಬೇಕಾಗಿತ್ತು. ಆದರೆ ನ್ಯೂನತೆಗಳನ್ನು ಉಳಿಸಿಕೊಂಡು, ಮಕ್ಕಳು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವಂತೆ ಮಾಡಲಾಗಿದೆ.

ಈಗಾಗಲೇ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಮುಕ್ತಾಯವಾಗುವ ಹಂತ ತಲುಪಿದ್ದರೂ ಸಹ ಆಧಾರ್ ಕಾರ್ಡ್ ಮೌಲ್ಯೀಕರಣ ಹಿಂದೆ ಬಿದ್ದಿದೆ. ಎನ್‌.ಟಿ.ಎಸ್‌.ಸಿ. ಮತ್ತು ಎನ್.ಎಂ.ಎಂ.ಎಸ್ ಕೇಂದ್ರ ಸರ್ಕಾರ ಶಿಷ್ಯವೇತನ ಪಡೆಯಲೂ ಅನಾನುಕೂಲವಾಗಿದೆ. ವಿದ್ಯಾರ್ಥಿಗಳ ಆಧಾರ್ ಕಾರ್ಡುಗಳನ್ನು ಸರಿಪಡಿಸದೆ, ಅರ್ಹರು ಅರ್ಜಿಗಳನ್ನು ಹಾಕಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲಾ ಮಕ್ಕಳು1

ವಿದ್ಯುತ್ ಅವಘಡ, ರಸ್ತೆ ಅಪಘಾತ, ಬೆಂಕಿ ಅನಾಹುತ, ತೀವ್ರತರದ ಅನಾರೋಗ್ಯಕ್ಕೆ ಮಕ್ಕಳು ಒಳಗಾದಾಗ ಪರಿಹಾರಗಳಂತಹ ಸೂಕ್ತ ಹಾಗೂ ಸಂದರ್ಭೋಚಿತವಾದ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಮೌಲ್ಯೀಕರಣ ಮುಖ್ಯ.

ಅವಘಡಗಳಿಗೆ ಮಕ್ಕಳು ತುತ್ತಾದಾಗ, ತಲಾ 50,000 ಪರಿಹಾರ ಧನ ಮಗುವಿನ ಖಾತೆಗೆ ಸರ್ಕಾರ ಹಾಕುವ ಅವಕಾಶವಿರುತ್ತದೆ. ಆದರೆ ಆಧಾರ್ ಕಾರ್ಡ್‌ನಲ್ಲಿ ಉಂಟಾಗಿರುವ ನ್ಯೂನತೆಯನ್ನು ಸರಿಪಡಿಸದೇ ಇರುವುದರಿಂದ ಆಕಸ್ಮಿಕ ಅವಘಡಗಳಿಗೆ ಒಳಗಾಗಬಹುದಾದಂತಹ ಮಕ್ಕಳು ಬ್ಯಾಂಕ್ ಖಾತೆಯನ್ನು ತೆರೆಯಲು ಸಾಧ್ಯವಾಗದಿರುವುದರಿಂದ ಅವಕಾಶ ವಂಚಿತರಾಗುತ್ತಾರೆ.

ಸ್ಯಾಟ್ ತಂತ್ರಾಂಶದಲ್ಲಿ ಸಂಬಂಧಪಟ್ಟ ಮಕ್ಕಳ ಆಧಾರ್ ಕಾರ್ಡ್ ಪ್ರಮಾಣೀಕರಿಸದೆ ಇರುವುದರಿಂದ ಯಾವುದೇ ಸೌಲಭ್ಯಗಳನ್ನು ಪಡೆಯಲು ಇವರಿಗೆ ಅವಕಾಶ ಇರುವುದಿಲ್ಲ ಎಂಬ ಸಾಮಾನ್ಯ ಅರಿವು, ತಿಳಿವಳಿಕೆ, ಶಿಕ್ಷಣ ಸಂಸ್ಥೆಗಳಿಗೆ, ಶಾಲಾಡಳಿತಕ್ಕೆ, ಶಾಲಾ ಶಿಕ್ಷಣ ಇಲಾಖೆಗೆ ಇರದಿದ್ದರೆ ಹೇಗೆ? ಬಡವರ ಮಕ್ಕಳನ್ನು ಬೇಕೆಂದೇ ಶಾಲಾ ಸೌಲಭ್ಯಗಳಿಂದ ವಂಚಿತರಾಗಲು ಉದ್ದೇಶಪೂರ್ವಕವಾಗಿ ಸುಮ್ಮನಾಗಿದ್ದಾರೆಯೇ ಎಂಬ ಪ್ರಶ್ನೆ ಮೂಡುವುದು ಸಹಜ.

ಆಡಳಿತಾತ್ಮಕ ಸಮಸ್ಯೆಗಳು ಏನೇ ಇದ್ದರೂ ಸಹ ಈಗಾಗಲೇ ಸರಿಪಡಿಸಬೇಕಾಗಿತ್ತು. ಸಂಬಂದಪಟ್ಟ ತಾಲೂಕುಗಳ ಆಡಳಿತವೂ ಈ ಪ್ರಕ್ರಿಯೆಯನ್ನು ಕಡೆಗಣಿಸಬಾರದಾಗಿತ್ತು. ತುಮಕೂರು, ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್, ತಹಶೀಲ್ದಾರರುಗಳು ಇಂತಹ ಮಹತ್ವದ ಪ್ರಕ್ರಿಯೆಗಳನ್ನು ಕಾಲಕಾಲಕ್ಕಾದರೂ ಅವಲೋಕಿಸಬೇಕಾಗುತ್ತದೆ. ಇದಕ್ಕೆ ವರಿಷ್ಠರ ಆದೇಶಗಳನ್ನೇ ಕಾಯಬೇಕೆಂದೇನಿಲ್ಲ. ಬಡವರ ಮಕ್ಕಳ ಶಾಲಾ ಶಿಕ್ಷಣ ಕುಂಠಿತವಾಗದಂತೆ ನಿಗಾ ವಹಿಸುವುದೇ ಕಡ್ಡಾಯ ಶಿಕ್ಷಣದ ಮೂಲ ಉದ್ದೇಶ.

ಆಧಾರ್ ಕಾರ್ಡ್ ನ್ಯೂನತೆಗಳನ್ನು ಸರಿಪಡಿಸಲಾಗದಂತಹ ದಿವ್ಯ ಮೌನಕ್ಕೆ ಒಳಗಾಗಿರುವ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲ್ವಿಚಾರಣೆ ಕಾಲಕಾಲಕ್ಕೆ ನಡೆಯದೆ ಇರುವುದೂ ಸಹ ಪ್ರಮುಖ ಕಾರಣವಾಗಿದೆ. ಡಿಡಿಪಿಐ ಮತ್ತು ಡಿಸಿಯವರ ಪ್ರಗತಿಪರಿಶೀಲನಾ ಸಭೆಗಳಲ್ಲಿ ಚರ್ಚಿಸಿಯೂ ಉಪಯೋಗವಿಲ್ಲದಂತಾಗಿದೆ.

ಇದುವರೆಗೆ 2,28,953 ಮಕ್ಕಳಲ್ಲಿ, 1,86,815 ಮಕ್ಕಳಿಗೆ ಮಾತ್ರ ಆಧಾರ್ ಮೌಲ್ಯೀಕರಣ ಮಾಡಲಾಗಿದೆ. ಆಯುಕ್ತರು, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಈ ಪ್ರಗತಿಯನ್ನು ದೈನಂದಿನ ಮೇಲ್ವಿಚಾರಣೆ ಮಾಡಲು ತಿಳಿಸಿದ್ದೂ ಆಗಿದೆ. ಜಿಲ್ಲಾಧಿಕಾರಿಗಳು ಸೂಚಿಸಿರುವಂತೆ ಇನ್ನೂ ಬಾಕಿ ಉಳಿದಿರುವ ಎಲ್ಲಾ ಮಕ್ಕಳಿಗೆ ಆಧಾರ್ ಮೌಲ್ಯೀಕರಣವನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ದಿನಾಂಕ 8.12. 2023ರ ವರೆಗೆ ಪೂರ್ಣಗೊಳಿಸಬೇಕಾಗಿತ್ತು.

ಗುಬ್ಬಿ 6,024, ಚಿಕ್ಕನಾಯಕನಹಳ್ಳಿ 5,234, ಕುಣಿಗಲ್ 4,905, ತಿಪಟೂರು 2,562, ತುಮಕೂರು 20,861 ತುರುವೇಕೆರೆ 2,562. ತುಮಕೂರು ದಕ್ಷಿಣ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿಗಳ ವ್ಯಾಪ್ತಿಯಲ್ಲಿ 42,138 ಮಕ್ಕಳು ಆಧಾರ್ ಮೌಲ್ಯೀಕರಣ ಆಗಬೇಕಾಗಿದೆ.

ಇದನ್ನು ಓದಿದ್ದೀರಾ?: ಹಿಂದೂಸ್ಥಾನ್ ಕೋ ಲೀಡರೋ ಸೆ ಬಚಾವೋ: ಎಲ್ಲ ಕಾಲಕ್ಕೂ ಸಲ್ಲುವ ಮಂಟೋ ಚಿಂತನೆ 

ಆಧಾರ್ ಮೌಲ್ಯೀಕರಣ ಮಾಡುವಾಗ ದಾಖಲಾತಿ ವಹಿಯಲ್ಲಿನ ಹೆಸರು ಅಥವಾ ಅಕ್ಷರಗಳನ್ನು ಆಧಾರ್‍‌ನಲ್ಲಿರುವಂತೆ ಬದಲಾಯಿಸುವಂತಿಲ್ಲ. ಆದರೆ ಆಧಾರ್‍‌ನಲ್ಲಿರುವ ಹೆಸರು, ಅಕ್ಷರಗಳನ್ನು ದಾಖಲಾತಿ ವಹಿಯಲ್ಲಿರುವಂತೆ ಅಪ್ಡೇಟ್ ಮಾಡಿಸಿ ಸ್ಯಾಟ್ ತಂತ್ರಾಂಶದಲ್ಲಿ ಆಧಾರ್ ಮೌಲ್ಯೀಕರಣವನ್ನು ಎಲ್ಲಾ ಮಕ್ಕಳಿಗೂ ಒಂದು ವಾರದೊಳಗೆ ಪೂರ್ಣಗೊಳಿಸಲು ಕ್ರಮ ವಹಿಸಬೇಕಾಗಿದೆ. ಬ್ಲಾಕ್ ಹಾಗೂ ಹೋಬಳಿ ಮಟ್ಟದಲ್ಲಿ ಅಂಚೆ ಕಚೇರಿಗಳನ್ನು ಭೇಟಿ ಮಾಡಿ ಆಧಾರ್ ತಿದ್ದುಪಡಿ ಮಾಡಿಸಿ ಮೌಲ್ಯೀಕರಣ ಮಾಡಿಸಲು ಕ್ರಮ ವಹಿಸಬೇಕಾಗಿದೆ. ಎನ್.ಪಿ.ಸಿ.ಐ. ಮುಗಿದಿರುವ ಮಕ್ಕಳ ಸಂಖ್ಯೆ ಅತಿ ಕಡಿಮೆ ಇದ್ದು ಈ ಬಗ್ಗೆ ಮುಖ್ಯ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಸೂಚನೆ ನೀಡಿ ವೆರಿಫಿಕೇಶನ್ ಹಾಗೂ ಎನ್.ಪಿ.ಸಿ.ಐ ಎರಡನ್ನೂ ಬಾಕಿ ಇರುವ ಎಲ್ಲಾ ಮಕ್ಕಳಿಗೆ ಒಂದು ವಾರದಲ್ಲಿ ಪೂರ್ಣಗೊಳಿಸಬೇಕಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಉಜ್ಜಜ್ಜಿ ರಾಜಣ್ಣ
ಉಜ್ಜಜ್ಜಿ ರಾಜಣ್ಣ
ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಸಿಡಿಲು ಬಸವೇಶ್ವರಸ್ವಾಮಿ ಅದ್ದೂರಿ ಪರೇವು ಜಾತ್ರೆ

ಶ್ರಾವಣ ಮಾಸದ ಕಡೇ ಸೋಮವಾರ ನಡೆಯುವ ಗುಬ್ಬಿಯ ಇತಿಹಾಸ ಪ್ರಸಿದ್ಧ...

ಗುಬ್ಬಿ | ಕೇಶಿಪ್ ರಸ್ತೆಗೆ ಟೋಲ್ ನಿರ್ಮಾಣ ವಿರೋಧಿಸಿ ರೈತಸಂಘದಿಂದ ಪ್ರತಿಭಟನೆ

ಬಹುತೇಕ ರೈತ ವರ್ಗವೇ ಬಳಸುವ ಸಿ.ಎಸ್.ಪುರ ಕೇಶಿಪ್ ರಸ್ತೆಗೆ ದಿಢೀರ್...

ದಾವಣಗೆರೆ | ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತ ಸಂಘಟನೆಗಳಿಂದ ಹರಿಹರದಲ್ಲಿ ಆ.18ಕ್ಕೆ ಪ್ರತಿಭಟನೆ

ಪರಿಶಿಷ್ಟ ಜಾತಿ ಜನಾಂಗದವರಿಗೆ ಯಥಾವತ್ತಾಗಿ ಒಳ ಮೀಸಲಾತಿ ಜಾರಿ ಮಾಡಲು ಒತ್ತಾಯಿಸಿ,...

ಗುಬ್ಬಿ | ನವಂಬರ್ ನಲ್ಲಿ ಸಾಹಿತ್ಯ ಸಮ್ಮೇಳನ : ಪೂರ್ವಭಾವಿ ಸಭೆಯಲ್ಲಿ ಚಿಂತನೆ

ಗುಬ್ಬಿ ತಾಲ್ಲೂಕು ಮಟ್ಟದ 6 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದಿನ...

Download Eedina App Android / iOS

X