ಸಿದ್ದರಾಮಯ್ಯ ಪ್ರಾಮಾಣಿಕ ಮನುಷ್ಯ ಹಣ ಸಂಪಾದನೆ ಮಾಡಲಿಲ್ಲ ಜನ ಸಂಪಾದನೆ ಮಾಡಿದ್ದಾರೆ. ಅಲ್ಲಿ ಏನಾಗಿದೆ, ನಾವು ಬಿಟ್ಟ ಮೇಲೆ ಸಿದ್ದರಾಮಯ್ಯ ಅವರ ಬಳಿ ಸಲಹೆಗಾರರೇ ಇಲ್ಲ ಎಂದು ಮಾಜಿ ಸಚಿವ ಸಿ ಎಂ ಇಬ್ರಾಹಿಂ ಹೇಳಿದರು
ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರು ಮೊದಲು ಏನ್ ಮಾಡಕಿತ್ತು ಅಂದ್ರೆ. 14 ಸೈಟ್ ಬೇಡಾ ತಗೊಂಡುಬಿಡಿ.ನನ್ನ ಜಮೀನು ಹೌದೋ ಅಲ್ವೋ ತನಿಖೆ ಆದಮೇಲೆ, ಅದೇನು ತೀರ್ಮಾನ ಆಗುತ್ತೋ ಆಗಲಿ ಅಂತಾ ಅಂದೇ ಹೇಳಿಬಿಟ್ಟಿದ್ರೆ ಮುಗಿದೇ ಹೋಗಿತ್ತು. ಸಿದ್ದರಾಮಯ್ಯ ಯಾರು ಎಂದು ಇಡೀ ರಾಜ್ಯಕ್ಕೆ ಗೊತ್ತು. ರಾಜ್ಯದ ಮುಖ್ಯಮಂತ್ರಿಗೆ ಮೂರುವರೆ ಎಕರೆ ಜಮೀನು ದೊಡ್ಡದೇನ್ರಿ. ಈ ಮಂಗಮುಂಡೇವು ಏನು ಆಸ್ವಾದನೆ ಮಾಡುತ್ತವೆ ಎಂದರು.
ಪಾಪಾ ಆತ ಪ್ರಾಮಾಣಿಕ ಮನುಷ್ಯ. ಸಿದ್ದರಾಮಯ್ಯ ನನಗೆ ರಾಜಶೇಖರ್ ಮೂರ್ತಿ ಕಾಲದಿಂದ ಹಿಡಿದು, ಶಿವಾನಂದಸ್ವಾಮಿ,ಎಂಸಿ ಬಸಪ್ಪನವರು, ಮೈಸೂರಿನ ಹಳೆಯ ಇತಿಹಾಸ, ಶಾಂತಮೂರ್ತಿ ತಾ.ಪಂ ಸದಸ್ಯರಾಗಿದ್ದವರು. ಸೈಕಲ್ ನಲ್ಲಿ ತಿರುಗಾಗಿ ಪಕ್ಷೇತರ ಶಾಸಕನಾಗಿದ್ದ ಮನುಷ್ಯ ಆತ. ಹಣ ಮಾಡಲಿಲ್ಲ, ಜನ ಸಂಪಾದನೆ ಮಾಡಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ನವರ ಪರ ನಿಲ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸಿದ್ದರಾಮಯ್ಯ ನವರು ನನ್ನ ಸ್ನೇಹಿತರೇ. ಸ್ನೇಹ ಬೇರೆ, ಪಕ್ಷ ಬೇರೆ. ಇದೇ 29 ರಂದು ಶರಣರ ಸಭೆ ಕರೆದಿದ್ದೇನೆ. ಸಾಣೇಹಳ್ಳಿ ಶ್ರೀಗಳು, ದಿಂಗಾಲೇಶ್ವರ ಸ್ವಾಮೀಗಳು, ಮಹಿಮಾ ಪಾಟೀಲ್, ನಾಡಗೌಡರು, ನಾವೇಲ್ಲ ಕೂತು ತೀರ್ಮಾನ ಮಾಡ್ತಿವಿ. ಮುಂದಿನ ನಡೆ, ಯಾವ ಕಡೆ ಎಂಬುದನ್ನು ತೀರ್ಮಾನಿಸುತ್ತೇವೆ ಎಂದರು.
ಆಗಸ್ಟ್ 29 ರಂದು ರಾಮಕೃಷ್ಣ ಹೆಗಡೆ ಜನ್ಮದಿನ ವನ್ನು ಗಾಂಧಿ ಭವನದಲ್ಲಿ ಆಚರಿಸುತ್ತಿದ್ದೇವೆ. ಅಂದು ಸಂಜೆ ತೀರ್ಮಾನ ಮಾಡಿ ಅದಾದ್ಮೇಲೆ ನೋಡೋಣ..ಒಟ್ಟಿನಲ್ಲಿ ಬಿಜೆಪಿ ರಾಜ್ಯದಲ್ಲಿ ಬರಬಾರದು ಎಂದರು.
ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕರೆದರೆ ಹೋಗಲಿಕ್ಕೆ ನಾನು ಒಬ್ಬನೇ ಅಲ್ಲವಲ್ಲ. ನಾನು ಯಾವತ್ತು ಆನೆ ಸವಾರಿ ಕೇಳಲ್ಲ. ಕುದುರೇ ಸವಾರಿ ಕೇಳೊದು, ಆನೆ ಮೇಲೆ ಕುಳಿತರೆ ಪ್ರಯೋಜನವಿಲ್ಲ,ಅದು ಕರೆದುಕೊಂಡು ಹೋದ ಕಡೆ ಹೋಗಬೇಕು.ಅದೇ ಕುದುರೆ ಮೇಲೆ ಕುಳಿತರೆ ಲಗಾಮು ನಮ್ಮ ಕೈಲಿ ಇರುತ್ತದೆ. ನಮಗೆ ಬೇಕಾದ ಕಡೆ ಹೋಗಬಹುದು. ಹಾಗಾಗಿ ಸ್ನೇಹಿತರು ಜನರು ಏನು ತೀರ್ಮಾನ ಮಾಡ್ತಾರೆ ನೋಡೊಣ. ನನಗೆ ಅಧಿಕಾರದ ಆಸೆ ಇಲ್ಲಾ, ಎಲ್ಲಾ ನೋಡಿ ಆಗಿದೆ.
ನನಗೆ ಉತ್ತಮವಾದ ಜನ ಬರಬೇಕು ಎಂದರು.
ಕುಮಾರಸ್ವಾಮಿಯವರಿಗೆ ಏನಾಗಿದೆ ಅಂದ್ರೆ,ಸಕೈಲಾಗದವರು ಮೈಯೆಲ್ಲಾ ಪರಚಿಕೊಂಡರು ಎಂಬಂತೆ. ಪಾಪ ಮೋದಿ ದೊಡ್ಡದಾಗಿ ಅವರಿಗೆ ಸೀಟು ಕೊಟ್ಟಿದ್ದಾರೆ. ಅವರ ಪರಿಸ್ಥಿತಿ ಹೇಗಾಗಿದೆ ಅಂದ್ರೆ ಗೌಡ್ರು ಹೇಳಿ ಮದುವೆ ಮಾಡಿದ್ಮೆಲೆ ಅಳಿಯ ಸ್ಥಿತಿ ಹೇಗಾಯ್ತು ಅಂದ್ರೆ. ಕುರ್ಚಿ ಮೇಲೆ ಕೂತು ಮೆಂಬರ್ ಹಾಕುವ ಅಧಿಕಾರ ಇಲ್ಲ. ಎಂಪಿಎಂ ಫ್ಯಾಕ್ಟರಿ ಶುರುಮಾಡಿಸಿ ಬಿಡ್ತಿನಿ ಅಂತಾ ಹೇಳಿಕೆ ಕೊಟ್ರು. ಅದಕ್ಕೆ ಇಲ್ಲ ಬಂದ್ ಮಾಡಿದ್ದೇವೆ ಅಂತಾ ಪಾರ್ಲಿಮೆಂಟ್ ನಲ್ಲಿ ರಿಪ್ಲೇ ಕೊಟ್ರು. ಕುಮಾರಸ್ವಾಮಿ ತಪ್ಪು ಮಾಡಿದ್ದಾರೆ. ಈಗ ಮತ್ತೆ ಅದೇ ತಪ್ಪು ಮಾಡೋ ಅಗತ್ಯವಿರಲಿಲ್ಲ. ಇರುವಷ್ಟು ದಿನ ಇರಲಿ, ಸೆಪ್ಟೆಂಬರ್ ಅಕ್ಟೋಬರ್ ಮುಗಿಯುತ್ತೆ ಎಂದರು.
ನನಗೆ ಕರೆದುಕೊಂಡು ಹೋಗಿ ನಂಬಿಸಿ ಮೋಸ ಮಾಡಿದ್ದಾರೆ, ನಾನು ದೇವರಿಗೆ ಕೈಯೆತ್ತಿ ಮುಗಿಯುತ್ತೇನೆ. ನಾನು ದೇವರಿಗೆ ಕೈಮುಗಿದೆ. ಪರಮಾತ್ಮ ನೀನೆ ನೋಡ್ಕಳಪ್ಪಾ. ಈಗ ದೇವರು ಅವರಿಗೆ ಒಂದೊಂದೆ ತೋರಿಸುತ್ತಿದ್ದಾನೆ. ಜೆಡಿಎಸ್ ಗೆ ನಾನಿನ್ನು ತಲಾಕ್ ಹೇಳಿಲ್ಲ. ನಾನೇ ಗಂಡ. ನಾನು ಎಲೆಕ್ಟೆಡ್, ಜನತಾ ದಳದ ಕಾರ್ಯಕರ್ತರು ಆರಿಸಿಕಳಿಸಿದ್ದು. ಕುಮಾರಸ್ವಾಮಿಗೆ ಅವರಪ್ಪ ಮಾಡಿದ್ರು.ನನಗೆ ನಮ್ಮಪ್ಪ ಮಾಡಿಲ್ಲ. ನನಗೆ ಜೆಡಿಎಸ್ ನ ಕಾರ್ಯಕರ್ತರು ಮಾಡಿದ್ದು. ಹಾಗಾಗಿ ಲೈಟ್ ಆಫ್ ಆಗಲಿ ಹೊರಗೆ ಬರ್ತಾರೆ ನೋಡಿ ಎಂದು ಹೇಳಿದರು.
ವರದಿ – ಮುಂಜುನಾಥ್ ಹಾಲ್ಕುರಿಕೆ, ಸಿಟಿಜನ್ ಜರ್ನಲಿಸ್ಟ್.
