ಕೆ. ಎನ್ ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೆ ಪ್ರಯತ್ನಪಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು.
ತುಮಕೂರು ನಗರದ ಮಾಜಿ ಸಚಿವ ರಾಜಣ್ಣ ಮನೆಯಲ್ಲಿ ಸಭೆ ನಡೆಸಿ ಬಳಿಕ ಮಾತನಾಡಿದ ಡಿಸಿಎಂ ಡಾ.ಜಿ.ಪರಮೇಶ್ವರ್ , ರಾಜಣ್ಣ ಅವರದ್ದು ನಂದು 50 ವರ್ಷದ ಗೆಳೆತನ. ಈ ಸಂದರ್ಭದಲ್ಲಿ ಒಟ್ಟಿಗೆ ರಾಜಕಾರಣ ಮಾಡಿದವರು. ನಾವೆಲ್ಲಾ ಒಟ್ಟಿಗೆ ಇದ್ದೀವಿ ಅಂತಾ ಸಂದೇಶ ಹೋಗಬೇಕು ಅಂತ ಭೇಟಿ ಮಾಡಿದ್ದೇನೆ. ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಎಂದರು

ರಾಮಲಿಂಗರೆಡ್ಡಿ ಅವರನ್ನು ಮನವೊಲಿಸಿ ಸಿಎಂ ಮಾತನಾಡಿದ್ದಾರೆ. ಅವರಿಬ್ಬರೂ ಏನು ಚರ್ಚೆ ಮಾಡಿದ್ದಾರೆ ಗೊತ್ತಿಲ್ಲ. ಅವಶ್ಯಕತೆ ಬಿದ್ದರೆ ನಾನು ರಾಮಲಿಂಗರೆಡ್ಡಿಯವರ ಜೊತೆ ಮಾತನಾಡುತ್ತೇನೆ. ಸಚಿವ ಸಂಪುಟ ವಿಸ್ತರಣೆಯಾದರೆ ರಾಜಣ್ಣ ಅವರ ಹೆಸರಿಗೆ ಪ್ರಯತ್ನ ಮಾಡ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ ಕೊಡುತ್ತೇವೆ, ಕೊಡಬೇಕಾಗಿತ್ತು ಅಂತ ಭರವಸೆ ಕೊಟ್ಟಿರಲಿಲ್ಲ. ಅಧ್ಯಕ್ಷ ಸ್ಥಾನ ಬದಲಾವಣೆ ನಡೆಯುವಾಗ ಹತ್ತಾರು ಹೆಸರುಗಳು ಬರ್ತಾ ಇರ್ತಾವೆ ಎಂದರು.
ಸಿಎಂ ಡಿಕೆ ಶಿವಕುಮಾರ್ ತುಮಕೂರು ಜಿಲ್ಲೆಗೆ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ ಅವರು ನೊಣವಿನಕೆರೆ ಮಠಕ್ಕೆ ಭೇಟಿ ಕೊಡ್ತಿದ್ದಾರೆ. ಸಿಎಂ ಅವರು ಖಾಸಗಿ ಭೇಟಿ ಆಗಾಗಿ ನಾನು ಹೋಗ್ತಾ ಇಲ್ಲ ಎಂದರು.
ತುಮಕೂರು ಸಿಎಂ ಸ್ಥಾನ ಸಿಗುತ್ತೆ ಎಂಬ ನೀರೀಕ್ಷೆಯಿತ್ತು ಎನ್ನುವ ವಿಚಾರವಾಗಿ, ಅದು ಹೈಕಮಾಂಡ್ ತೀರ್ಮಾನ. ಅವರು ತೀರ್ಮಾನ ತೆಗೆದುಕೊಂಡಿದ್ದಾರೆ. ಡಿಕೆಶಿ ಅವರನ್ನ ಪರಿಗಣಿಸಿದ್ದಾರೆ. ಅವರು ಡಿಸಿಎಂ ಆಗಿದ್ದವರು, ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಅವರನ್ನ ಪರಿಗಣಿಸಿದ್ದಾರೆ. ನಾವು ಅವರ ಜೊತೆ ಒಟ್ಟಾಗಿ ಕೆಲಸ ಮಾಡುತ್ತೇವೆ. ನಾವು ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೆರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತ ಕೊಟ್ಟು, ಹಣಕಾಸಿನ ಶಿಸ್ತು ಕಾಪಾಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರಿಗೂ ಸಹ ಅಭಿನಂದನೆ ಸಲ್ಲಿಸುತ್ತೇನೆ. ಅವರ ಮಾರ್ಗದರ್ಶನ ಕೂಡ ಸರ್ಕಾರಕ್ಕೆ ಇರುತ್ತೆ ಎಂದರು.
ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ತೃಪ್ತಿಯಾಗಿದೆಯಾ ಎಂಬ ವಿಚಾರವಾಗಿ, ನಾನು ಯಾವಾಗಲೂ ಅತೃಪ್ತಿಯಾಗಿಲ್ಲ ನಾನು ತೃಪ್ತಿಯಾಗಿದ್ದೇನೆ ಎಂದರು.





