ಡಿಸಿಎಂ ಸ್ಥಾನಕ್ಕೆ ಬೀದಿಗಿಳಿಯುವ ಕಾರ್ಯಕರ್ತರಿಗೆ, ಸ್ಥಳೀಯ ಸರ್ಕಾರಗಳ ಅರಿವಿಲ್ಲವೇಕೆ?

Date:

ಗ್ರಾಮ ಸಭೆ(ಹಳ್ಳಿಯ ವಿಧಾನಸಭೆ), ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಫಲಾನುಭವಿಗಳ ಆಯ್ಕೆ ಮಾಡುವುದನ್ನು ಬಿಟ್ಟು! ಶಾಸಕ ಕೇಂದ್ರಿತ ಆಡಳಿತ ನಡೆಸುತ್ತಿರುವ ನಿಮಗೆ 2028ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಲಕ್ಷಣಗಳು ಹೇರಳವಾಗಿ ಕಾಣಿಸುತ್ತಿವೆ. ಇತ್ತೀಚಿಗೆ ನಡೆದ ತಮಿಳುನಾಡು ಚುನಾವಣೆ ಫಲಿತಾಂಶ 2028ಕ್ಕೆ ಕರ್ನಾಟಕದಲ್ಲಿ ಬಂದರೂ ಆಶ್ಚರ್ಯವಿಲ್ಲ.

ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರಂತಹ ವಿಚಾರಗಳನ್ನು ಓದಿಕೊಂಡು ಬೆಳೆದ ನನಗೆ ಇಂದಿನ ರಾಜಕೀಯ ನಡೆಗಳು ನಡುಕು ಹುಟ್ಟಿಸುವ ರೀತಿಯಲ್ಲಿದೆ. ಸಾಂವಿಧಾನಿಕ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡುತ್ತಿರುವ ಕಾರ್ಯಕರ್ತರಿಗೆ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆ ವಿಧಾನಮಂಡಲದಲ್ಲಿ ಚಕಾರ, ಶಬ್ದ ಎತ್ತಿ ಸ್ಥಳೀಯ ಸರ್ಕಾರಗಳ ರಚನೆಗೆ ಮುಂದಾಗದ ಶಾಸಕರ ಮೇಲೆ ಏಕಿಷ್ಟು ಪ್ರೀತಿ.. ಸರ್ಕಾರಕ್ಕಿಂತ ಸಂವಿಧಾನ ದೊಡ್ಡದು, ಪಾಳೆಗಾರಿಕೆಗಿಂತ ಪ್ರಜಾಪ್ರಭುತ್ವ ದೊಡ್ಡದು.

- Advertisement -

ಶಾಸಕರು ಹಾಗೂ ಸಂಸದರನ್ನು ಆಯ್ಕೆ ಮಾಡುತ್ತಿರುವುದು ಪಕ್ಷಗಳಾ? ಪಕ್ಷಗಳಿಗೆ ಹಣ ನೀಡುತ್ತಿರುವ ವ್ಯಾಪಾರಿಗಳಾ? ಅಥವಾ ಮತದಾರ ಪ್ರಭುಗಳಾ? ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಚುನಾವಣೆ ಪೂರ್ವದಲ್ಲಿ ಮತಕ್ಷೇತ್ರಗಳಿಗೆ ಶಾಸಕ, ಸಂಸದ ಅಭ್ಯರ್ಥಿಗಳು ಯಾರಾಗಬೇಕು, ಟಿಕೆಟ್ ಯಾರಿಗೆ ನೀಡಬೇಕೆಂನ ನಿರ್ಧಾರವನ್ನು ಪಕ್ಷಗಳು ಮಾಡುತ್ತವೆ. ಪಕ್ಷಗಳಿಗೆ ಪಾರ್ಟಿ ನೀಡುವ ವ್ಯಾಪಾರಿಗಳು, ಪಕ್ಷಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತವೆ. ಇದರಲ್ಲಿ ಪ್ರಜೆಗಳ ಪಾತ್ರ ಎಲ್ಲಿಂದ ಬಂತು ಇವಿಎಂ ಮಷೀನ್‌ಗಳ ಹಾಗೆ ಮತದಾರ ಪ್ರಭುಗಳನ್ನು ಮತದಾನದ ಮಷೀರ್‌ಗಳಾಗಿ ಬಳಸಿಕೊಳ್ಳುತ್ತಿದ್ದಾರೆ.

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಗ್ರಾಮ ಸರ್ಕಾರ(ಪಂಚಾಯತ್)ಗಳು ಸ್ಥಳೀಯ ರಾಜಕೀಯ ಗರಡಿ ಮನೆಗಳು. ಗ್ರಾಮೀಣ ಮತ್ತು ಸಾಮಾನ್ಯ ಕುಟುಂಬದಿಂದ ದೇಶದ ರಾಜ್ಯದ ಉನ್ನತ ಹುದ್ದೆಗಳವರೆಗೆ ಏರಿದ ಪ್ರೇರಣಾದಾಯಕ ಗರಡಿ(ಪಂಚಾಯತ್) ಮನೆಗಳ ಬೀಗ ಹಾಕಿ ಅಧಿಕಾರಗಳ ಕೈಯಲ್ಲಿ ಬೀಗದ ಕೈ ನೀಡುವುದು ಯಾವ ನ್ಯಾಯ?

ಗ್ರಾಮಗಳು ಸ್ವಾವಲಂಬಿಯಾಗಬೇಕಾದರೆ ಉತ್ತಮ ಶಿಕ್ಷಣ, ಆರೋಗ್ಯದ ಜತೆಗೆ ವ್ಯಸನ ಮುಕ್ತ ಗ್ರಾಮಗಳನ್ನು ಕಟ್ಟಿಕೊಳ್ಳಲು ಸ್ಥಳೀಯ ಸರ್ಕಾರಗಳ ಜೀವಂತಿಕೆಯು ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮ ಸಭೆ(ಹಳ್ಳಿಯ ವಿಧಾನಸಭೆ), ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಫಲಾನುಭವಿಗಳ ಆಯ್ಕೆ ಮಾಡುವುದನ್ನು ಬಿಟ್ಟು! ಶಾಸಕ ಕೇಂದ್ರಿತ ಆಡಳಿತ ನಡೆಸುತ್ತಿರುವ ನಿಮಗೆ 2028ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಲಕ್ಷಣಗಳು ಹೇರಳವಾಗಿ ಕಾಣಿಸುತ್ತಿವೆ. ಇತ್ತೀಚಿಗೆ ನಡೆದ ತಮಿಳುನಾಡು ಚುನಾವಣೆ ಫಲಿತಾಂಶ 2028ಕ್ಕೆ ಕರ್ನಾಟಕದಲ್ಲಿ ಬಂದರೂ ಆಶ್ಚರ್ಯವಿಲ್ಲ.

“ಕಾಂಗೈ ಕೊಚ್ಚೆಯಲ್ಲಿ ಒಂದು ಕಮಲ. ನಜೀರ ಸಾಬ್ 1976ರಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಪ್ರಸ್ತುತ 50 ವರ್ಷ ಕಳೆದಿವೆ. 2026ರ ಏಪ್ರಿಲ್ 24ರಂದು ಮೂರು ಹಂತದ ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳಿಲ್ಲದೆ ನರಳುತ್ತಿರುವುದನ್ನು ʼಕರಾಳ ಪಂಚಾಯತ್ ದಿವಸ‌ʼ ಎಂದು ಕರೆಯಬಹುದು.

ಇದನ್ನೂ ಓದಿದ್ದೀರಾ? ಗ್ರಾಮ ಸ್ವರಾಜ್, ಪಂಚಾಯತ್ ರಾಜ್ ಕಾಯ್ದೆಗೆ ಬಿಡಿಗಾಸಿನ ಬೆಲೆ ನೀಡದ ಸರ್ಕಾರದ ನಡೆ ಖಂಡನೀಯ

ರಾಜ್ಯದ ಬಹುತೇಕ ಶಾಸಕರಿಗೆ ಅವರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸರಾಸರಿ 25ರಿಂದ 35 ಗ್ರಾಮ ಪಂಚಾಯಿತಿಗಳು ಬರುತ್ತವೆ. ಕೂಡಲೇ ಮೂರು ಪಕ್ಷದ ಶಾಸಕರು ಸ್ಥಳೀಯ ಹಂತದ ಚುನಾವಣೆ ನಡೆಸಲು ಪೂರಕ ವಾತಾವರಣ ಸೃಷ್ಟಿಸಿ, ಮಳೆಗಾಲದ ಅಧಿವೇಶನಕ್ಕೂ ಮೊದಲು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಸಭೆಗಳನ್ನು ನಡೆಸಬೇಕು. ಜನರ ಬೇಡಿಕೆಗಳನ್ನು ಆಲಿಸಿ, ರಾಜ್ಯ ಸರ್ಕಾರದ ಯೋಜನೆಗಳನ್ನು ತಯಾರಿಸಿ ಸ್ಥಳೀಯ ಸರ್ಕಾರಗಳಿಗೆ ಚುನಾವಣೆಗಳನ್ನು ನಡೆಸುವ ಮೂಲಕ ಬಸವಣ್ಣ, ಅಂಬೇಡ್ಕರ್ ಅವರ ಆಶಯಗಳಂತೆ ನಡೆದುಕೊಳ್ಳಬೇಕು ಎಂಬುದು ಹಳ್ಳಿಗಳಲ್ಲಿನ ಮತದಾರ ಪ್ರಭುಗಳ ಮನದಾಳದ ಮಾತಾಗಿದೆ.

Capture 40
ಪ್ರದೀಪ ಚ ಪಾಟೀಲ್ ನಾಗರದಿನ್ನಿ
+ posts

ಗ್ರಾಮ ಸ್ವರಾಜ್ಯ, ಕರ್ನಾಟಕ ರಾಜ್ಯ ಉಪಾಧ್ಯಕ್ಷರು

ಪೋಸ್ಟ್ ಹಂಚಿಕೊಳ್ಳಿ:

ಪ್ರದೀಪ ಚ ಪಾಟೀಲ್ ನಾಗರದಿನ್ನಿ
ಪ್ರದೀಪ ಚ ಪಾಟೀಲ್ ನಾಗರದಿನ್ನಿ
ಗ್ರಾಮ ಸ್ವರಾಜ್ಯ, ಕರ್ನಾಟಕ ರಾಜ್ಯ ಉಪಾಧ್ಯಕ್ಷರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು

ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡಿದ ಆರೋಪದ ಹಿನ್ನೆಲೆ ಜಿಲ್ಲೆಯ ಏಳು...

ʼತ್ರಿವರ್ಣ ಧ್ವಜ ಹಾರಿಸಲು ಅನುಮತಿ ಬೇಕಿಲ್ಲʼ; ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ವಾದಿಸಿರುವ ಎಐಎಸ್‌ಎ (AISA)...

ಬೀದರ್‌ | ಕನಿಷ್ಠ ವೇತನ ಪಾವತಿಗೆ ಅರಣ್ಯ ಇಲಾಖೆ ದಿನಗೂಲಿ ನೌಕರರ ಮನವಿ

ಔರಾದ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಕ್ಷಕರು ಹಾಗೂ ದಿನಗೂಲಿ...

ಬೀದರ್‌ | ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಡಿಸಿ ಶಿಲ್ಪಾ ಶರ್ಮಾ

ಬೀದರ್ ಜಿಲ್ಲೆಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ...