ತುಮಕೂರು | ಇತಿಹಾಸದ ಅರಿವಿನಿಂದ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ : ಜೆ. ಸಿ. ಮಾಧುಸ್ವಾಮಿ

Date:

ಇತಿಹಾಸ ಗೊತ್ತಿಲ್ಲದವನು ವಿಜ್ಞಾನವನ್ನು ಓದಲಾರ. ನಮ್ಮ ಸಂಸ್ಕೃತಿ ಮತ್ತು ಪರಂಪರೆ ಮುಂದಿನ ಪೀಳಿಗೆಗೆ ತಲುಪಬೇಕಾದರೆ ಅಧ್ಯಯನ ಪೀಠಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ ರಾಜಮನೆತನದ ಆಳ್ವಿಕೆ ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತು ಸಂಶೋಧನೆ ನಡೆಸಬೇಕು. ಇತಿಹಾಸದ ಅರಿವಿನಿಂದ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಮಾಜಿ ಸಚಿವ ಜೆ. ಸಿ. ಮಾಧುಸ್ವಾಮಿ  ಅಭಿಪ್ರಾಯಪಟ್ಟರು.

- Advertisement -

ತುಮಕೂರು ವಿಶ್ವವಿದ್ಯಾನಿಲಯ ಹಾಗೂ ನೊಳಂಬ ಲಿಂಗಾಯತ ಸಂಘದ ಸಹಯೋಗದಲ್ಲಿ ಮೇ 14 ಗುರುವಾರ ದಂದು ಹಮ್ಮಿಕೊಂಡಿದ್ದ ನೊಳಂಬ ಸಂಸ್ಕೃತಿ  ಅಧ್ಯಯನ ಪೀಠದ ಉದ್ಘಾಟನೆ, ಲಾಂಛನ ಲೋಕಾರ್ಪಣೆ ಹಾಗೂ ನೊಳಂಬ ಸಂಸ್ಕೃತಿ  ಸಂಪದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

 ನಾವು ಅಸೂಯೆಯ ಪರಕಾಷ್ಠೆ ತಲುಪಿದ್ದೇವೆ. ಪಿತೂರಿ ಮಾಡುವುದನ್ನು ಬಿಟ್ಟು ಬೆಳೆಯುವವರನ್ನು ಪ್ರೋತ್ಸಾಹಿಸಬೇಕು. ನೊಳಂಬ ರಾಜಮನೆತನದ ಇತಿಹಾಸ ಜಗತ್ತಿಗೆ ಸರಿಯಾಗಿ ಪರಿಚಯವಾಗಿಲ್ಲ. ಸಿದ್ದರಾಮಣ್ಣನ ಮೆಂಟರ್ ಚಮಲಾದೇವಿ ಏಳು ನೊಳಂಬ ರಾಜಮನೆತನಗಳನ್ನು ಸಾಕಿದ ದೇವತೆ ಎಂಬಂತಹ ಸತ್ಯಗಳು ಹೊರಬರಬೇಕಿದೆ. ಅಧ್ಯಯನ ಪೀಠದ ಅನುದಾನವು ಕೇವಲ ಆಚರಣೆಗಲ್ಲದೆ, ಆಳವಾದ ಸಂಶೋಧನೆಗೆ ಬಳಕೆಯಾಗಲಿ ಎಂದರು.

 ಶಾಸಕ ಕೆ. ಷಡಕ್ಷರಿ ಮಾತನಾಡಿ 16ನೇ ಶತಮಾನದವರೆಗೂ ನೊಳಂಬ ಸಮಾಜ ನೀಡಿದ ಅಪಾರ ಕೊಡುಗೆಗಳು ಬೆಳಕಿಗೆ ಬಾರದಿರುವುದು ನೋವಿನ ಸಂಗತಿ. ಸಮಾಜವಿಲ್ಲದೆ ನಾವಿಲ್ಲ, ಸಮಾಜ ನಮಗೆ ನೀಡಿದ ಕೊಡುಗೆಗೆ ಪ್ರತಿಯಾಗಿ ನಾವೂ ಏನಾದರೂ ನೀಡಬೇಕು. ಈ ಅಧ್ಯಯನ ಪೀಠವು ಅಭಿವೃದ್ಧಿ ಪಥದತ್ತ ಸಾಗಲಿ ಎಂದರು. 

ಶಾಸಕ ಜ್ಯೋತಿಗಣೇಶ್ ಮಾತನಾಡಿ ನೊಳಂಬ ಸಮಾಜದವರು ಕೇವಲ ಜಯಂತಿಗಳಿಗೆ ಸೀಮಿತವಾಗಬಾರದು. ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಂಡು ಸಮಾಜದ ಇತಿಹಾಸವನ್ನು ವಿಶ್ವದಾದ್ಯಂತ ಪಸರಿಸಬೇಕು. ಅಭಿವೃದ್ಧಿ ಕಾರ್ಯಗಳಿಗೆ ಕೈಲಾದಷ್ಟು ಧನಸಹಾಯ ಮಾಡಬೇಕು ಎಂದು ಕರೆ ನೀಡಿದರು.

ದಿಕ್ಸೂಚಿ ಭಾಷಣ ಮಾಡಿದ ಹಂಪಿ ವಿವಿ ಕುಲಪತಿ ಪ್ರೊ. ಡಿ. ವಿ. ಪರಶಿವಮೂರ್ತಿ , ಅಧ್ಯಯನ ಪೀಠಗಳು ವಿಘಟನೆಗಾಗಿ ಅಲ್ಲ, ಸಂಘಟನೆಗಾಗಿ ಇರಬೇಕು. ಮರೆಯಾಗಿರುವ ಕೃಷಿ, ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಅಧ್ಯಯನ ನಡೆಯಬೇಕು. ತುಮಕೂರು ವಿವಿಯಲ್ಲಿ ಈ ಪೀಠ ಸ್ಥಾಪನೆಯಾಗಿರುವುದು ಶೈಕ್ಷಣಿಕ ಮೆರಗು ತಂದಿದೆ ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧ್ಯಯನ ಪೀಠವು ಕೇವಲ ಹೆಸರಿಗೆ ಸೀಮಿತವಾಗದೆ ಕ್ರಿಯಾತ್ಮಕವಾಗಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.

 ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷರಾದ ಬಿ. ಕೆ. ಚಂದ್ರಶೇಖರ್, ನೊಳಂಬ ಲಿಂಗಾಯತ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಎಸ್. ಆರ್. ಪಾಟೀಲ್, ತುಮಕೂರು ವಿವಿ ನಿಕಟ ಪೂರ್ವ ಸಿಂಡಿಕೆಟ್ ಸದಸ್ಯರಾದ ಟಿ. ಎಸ್. ಸುನೀಲ್ ಪ್ರಸಾದ್ ಮಾತನಾಡಿದರು. 

ತುಮಕೂರು ವಿವಿ ನೊಳಂಬ ಸಂಸ್ಕೃತಿ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ನೀಲಕಂಠ ಎನ್.ಟಿ. ಅವರು ಸ್ವಾಗತಿಸಿದರೆ, ಪ್ರೊ. ಬಿ.ರವೀಂದ್ರ ಕುಮಾರ್ ಅವರು ನಿರೂಪಿಸಿದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಜನಪ್ರತಿನಿಧಿಗಳ ಸಹಕಾರ ಅಗತ್ಯ : ಆರೋಗ್ಯ ಸಚಿವ ಯು.ಟಿ. ಖದರ್

 ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.95ರಷ್ಟು ಅಗತ್ಯ ಸವಲತ್ತುಗಳು ಲಭ್ಯವಿದ್ದು, ಯಾವುದೇ ಕೊರತೆಗಳಿದ್ದರೆ...

ತುಮಕೂರು | ರೇಡಿಯೋದಿಂದ ಕ್ಯಾಮೆರಾವರೆಗೆ : ವಿದ್ಯಾರ್ಥಿಗಳ ಕೈಗೆ ಬಂದ ಮಾಧ್ಯಮದ ನೈಜ ಅನುಭವ

ಮೂರು ದಿನಗಳ ಮಾಧ್ಯಮ ಕಾರ್ಯಾಗಾರದಲ್ಲಿ ಸಂದರ್ಶನ, ರೇಡಿಯೋ ಕಾರ್ಯಕ್ರಮ ನಿರ್ಮಾಣ ಹಾಗೂ...

ತುಮಕೂರು | ಜಿಪಂ – ತಾಪಂ ಮೀಸಲು ಅಂತಿಮ: ಮಹಿಳೆಯರಿಗೆ ಸಿಂಹಪಾಲು

ತುಮಕೂರು ಜಿಲ್ಲೆಯ ಗ್ರಾಮೀಣ ರಾಜಕೀಯದ ಮುಂದಿನ ಚಿತ್ರಣಕ್ಕೆ ಮುನ್ನುಡಿ ಬರೆಯುವಂತೆ ಜಿಲ್ಲಾ...

ತುಮಕೂರು | ಬೆಳೆ ಕಟಾವು ಪ್ರಯೋಗ ಶೇ.100ರಷ್ಟು ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

ತುಮಕೂರು ಜಿಲ್ಲೆಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನಡಿ ಹಂಚಿಕೆಯಾಗಿರುವ ಎಲ್ಲಾ 5,120...