ತುಮಕೂರು | ಹೇಮಾವತಿ ನಾಲೆ ಕಳಪೆ ಕಾಮಗಾರಿ ಆರೋಪ; ರೈತರ ಪ್ರತಿಭಟನೆ

Date:

Advertisements

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮೇಲಿನವಳಗೆರೆಹಳ್ಳಿ ಬಳಿ ನಡೆಯುತ್ತಿರುವ ಹೇಮಾವತಿ ನಾಲೆ ಕಾಮಗಾರಿ ಅತ್ಯಂತ ಕಳಪೆಯಾಗಿದೆ ಎಂದು ಆರೋಪಿಸಿ ರೈತರು ಮಾಯಸಂದ್ರ ಹೇಮಾವತಿ ನಾಲಾ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಮೇಲಿನವಳಗೆರೆಹಳ್ಳಿ ಗ್ರಾಮದಿಂದ ಹೇಮಾವತಿ ನಾಲೆಯ ಕಳಪೆ ಕಾಮಗಾರಿ ಬಗ್ಗೆ ದೂರು ನೀಡಲು ಬಂದ ರೈತರ ಅಹವಾಲು ಕೇಳಲು ಎಂಜಿನಿಯರ್‌ಗಳು ಬರಲೇ ಇಲ್ಲ, ಇದರಿಂದ ರೊಚ್ಚಿಗೆದ್ದ ರೈತರು ಎಂಜಿನಿಯರ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಉದ್ದಟತನದ ಉತ್ತರ ನೀಡಿದ ಎಇಇ: ಹೇಮಾವತಿ ನಾಲಾ ಕಚೇರಿಯ ವ್ಯವಸ್ಥಾಪಕ ಪೆರುಮಾಳ್ ಅವರಿಂದ ಮೊಬೈಲ್ ನಂಬರ್ ಪಡೆದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚರಣ್‌ಸಿಂಗ್ ಚೌಹಾಣ್ ಅವರಿಗೆ ಕರೆ ಮಾಡಿದರೆ, “ನಾನು ಬರುವುದಿಲ್ಲ, ನೀವು ಬೇಕಾದರೆ ಅಲ್ಲಿಯೇ ಮಲಗಿಕೊಳ್ಳಿ, ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಉದ್ದಟತನದ ಉತ್ತರ ನೀಡಿದ್ದರಿಂದ ರೈತರು ಮತ್ತಷ್ಟು ಆಕ್ರೋಶ ಭರಿತರಾದರು.

Advertisements

ಹೇಮಾವತಿ ಎಇಇ ಚರಣ್‌ಸಿಂಗ್ ಚೌಹಾಣ್ ನೀಡಿದ ಉದ್ದಟತನದ ಉತ್ತರದಿಂದ ಆಕ್ರೋಶ ಭರಿತರಾದ ರೈತರು ಕಚೇರಿಗೆ ಬೀಗ ಜಡಿದ ಪ್ರತಿಭಟನೆ ಮುಂದುವರೆಸುವ ನಿರ್ಧಾರ ಕೈಗೊಂಡರು. ಹೇಮಾವತಿ ಮುಖ್ಯ ಎಂಜಿನಿಯರ್ ವರದಯ್ಯನವರಿಗೆ ದೂರವಾಣಿ ಮೂಲಕ ರೈತರು ತಮ್ಮ ಅಹವಾಲು ಹೇಳಿಕೊಂಡರು. ರೈತರ ಮನವಿಗೆ ಸ್ಪಂದಿಸಿದ ಸಿಇ ಅವರು ಯಡಿಯೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್ ಅವರನ್ನು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡುವಂತೆ ತಿಳಿಸಿರುವುದಾಗಿ ಹೇಳಿ ರೈತರನ್ನು ಸಮಾಧಾನಪಡಿಸಿದರು.

ಎಇಇ ವಿರುದ್ಧ ಕ್ರಮ: ಸಮಸ್ಯೆ ಹೇಳಲು ಬಂದ ರೈತರೊಂದಿಗೆ ಉದ್ದಟತನದ ಮಾತುಗಳನ್ನಾಡಿದ ಎಇಇ ಚರಣ್‌ಸಿಂಗ್ ಚೌಹಾಣ್ ನಡೆಯ ಬಗ್ಗೆ ಸಿ ಇ ವರದಯ್ಯನವರು ಬೇಸರ ವ್ಯಕ್ತಪಡಿಸಿದರು. ಎಇಇಗೆ ಅಗತ್ಯ ಸೂಚನೆ ನೀಡುವುದಾಗಿ ತಿಳಿಸಿದರು. ಕಾಮಗಾರಿ ನಡೆಯುವ ಸ್ಥಳಕ್ಕೆ ಕಾರ್ಯಪಾಲಕ ಎಂಜಿನಿಯರ್‌ ಕಳುಹಿಸಿಕೊಡುವ ಸಿಇ ಮಾತಿಗೆ ಸಮ್ಮತಿಸಿದ ರೈತರು ಪ್ರತಿಭಟನೆಗೆ ಅಂತ್ಯ ಹಾಡಿ ಗ್ರಾಮದತ್ತ ಹೆಜ್ಜೆ ಹಾಕಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಪಿಡಿಒ ಅಕ್ರಮ ಎಸಗಿದರೂ ಅಧಿಕಾರಿಗಳು ಮೌನ; ಗ್ರಾ.ಪಂ ಅಧ್ಯಕ್ಷೆ ಆರೋಪ

ಪ್ರತಿಭಟನೆಯಲ್ಲಿ ರೈತರುಗಳಾದ ಜಗದೀಶ್, ಪುಟ್ಟರಾಜ್, ಛಾಯೇಶ್, ನಾಗರಾಜ್, ಶರತ್, ಆನಂದ್, ನಟರಾಜ್, ಮೋಹನ್ ಸೇರಿದಂತೆ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

Download Eedina App Android / iOS

X