ತುಮಕೂರು | ಪರಿಶಿಷ್ಟ ಜಾತಿ/ಪಂಗಡಗಳ ಸಂಶೋಧನೆ ಬಿಡುಗಡೆ ಮತ್ತು ಸಮಾಲೋಚನೆ

Date:

ತುಮಕೂರು ಜಿಲ್ಲೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪರ್ಯಾಯ ಕಾನೂನು ವೇದಿಕೆಯಿಂದ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989, ಕರ್ನಾಟಕ ಭೂ ಕಂದಾಯ ಕಾಯ್ದೆ ಮತ್ತು ಸುಧಾರಣ ಕಾಯ್ದೆ 1964 ಹಾಗೂ ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ಗಳ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013ರ ಅನುಷ್ಠಾನ ಕುರಿತು ಕೈಗೊಂಡ ಸಮೀಕ್ಷೆ ಜಿಲ್ಲೆಯಲ್ಲಿ ಪೂರ್ವಯೋಜನೆಯಿರದೆ ಮಾಡಿದ್ದು, ವಾಸ್ತವ ವ್ಯವಸ್ಥೆಯನ್ನು ವರದಿಯಲ್ಲಿ ವಿಶ್ಲೇಷಿಸಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್ ತಿಪ್ಪೇಸ್ವಾಮಿ ಹೇಳಿದರು.

- Advertisement -

ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪರ್ಯಾಯ ಕಾನೂನು ವೇದಿಕೆ ವತಿಯಿಂದ ವಿಶ್ವಗುರು ಬಸವಣ್ಣನವರ 895ನೇ ಜಯಂತಿ ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 135ನೇ ಜಯಂತಿ ಹಾಗೂ ಡಾ, ಬಾಬು ಜಗಜೀವನ್‌ರಾಂ ಅವರ 119ನೇ ಜಯಂತಿಯ ಅಂಗವಾಗಿ ತುಮಕೂರು ನಗರದ ಸಮೃದ್ಧಿ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ/ಪರಿಶಿಷ್ಪ ಪಂಗಡ ಸಮುದಾಯಕ್ಕೆ ಸೇರಿದ ಕಾನೂನುಗಳ ಅನುಷ್ಠಾನ ಕುರಿತ ಸಂಶೋಧನಾ ವರದಿ ಬಿಡುಗಡೆ ಮತ್ತು ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

“ಈ ಸಮೀಕ್ಷೆ ಜಿಲ್ಲೆ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿರುವ ಪರಿಶಿಷ್ಟ ಜಾತಿ/ಪಂಗಡಗಳ ಕಲ್ಯಾಣಕ್ಕೆ ಸಂಬಂಧಿಸಿದ ಕಾನೂನುಗಳ ಅನುಷ್ಠಾನ ಕುರಿತು ಅವಲೋಕಿಸಿರುವುದು ಪ್ರಜ್ಞಾವಂತರನ್ನು ಎಚ್ಚರಿಸಿದೆ. ಪ್ರಮುಖವಾಗಿ ಎಸ್‌ಸಿ/ಎಸ್‌ಟಿ ಜನರು ಭೂ ಮಂಜೂರಾತಿ ಅಥವಾ ಸುಧಾರಣೆಯಲ್ಲಿ ಭೂಮಿ ಪಡೆಯಬೇಕಾದರೆ ದಾಖಲಾತಿಗಳ ಕೊರತೆ ಎದ್ದುಕಾಣುತ್ತದೆ. ಜತೆಗೆ ಮೇಲಿನ ಹಂತದಲ್ಲಿ ನಮ್ಮಿಂದ ದೊರೆಯುವ ಸ್ಪಂದನೆ ಕೆಳಹಂತದಲ್ಲಿ ದೊರೆಯುವುದಿಲ್ಲ. ಇದರಿಂದ ನಮ್ಮ ಜನರಿಗೆ ಸೋಲಾಗುತ್ತಿದೆ. ಇದಕ್ಕೆ ಕಾರಣಗಳನ್ನು ಹುಡುಕಬೇಕಾಗಿದೆ” ಎಂದು ಹೇಳಿದರು.

“ಕಳೆದ ಒಂದೂವರೆ ವರ್ಷಗಳಿಂದ ಜಿಲ್ಲೆಯಲ್ಲಿ ನಾನು ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಂದಾಯ ಗ್ರಾಮ, ಪೋಡಿ ಮುಕ್ತ ಗ್ರಾಮ, ಪೌತಿ ವಾರಸುದಾರಿಕೆ, 94ಸಿ/94ಸಿಸಿ ಮತ್ತು ಭೂ ಒಡೆತನ ಯೋಜನೆಗಳು ಕಾಯಿದೆಗಳ ನಿಯಮಗಳ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯಕ್ಕೆ ತುಮಕೂರು ಜಿಲ್ಲೆ ಮೊದಲ ಸ್ಥಾನದಲ್ಲಿ ಮಾದರಿಯಾಗಿದೆ. ಪರಿಶಿಷ್ಟ ಜಾತಿ/ಪ.ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳ ಶಿಕ್ಷೆ ಪ್ರಮಾಣ ಕಡಿಮೆಯಾಗಲು ಸಾಕ್ಷಿಗಳ ಕೊರತೆ ಐಒಗಳ ಬದ್ದತೆ ದೂರುದಾರರಿಗೆ ಮೊದಲಿದ್ದ ಉತ್ಸಾಹ, ದಿನ ಕಳೆದಂತೆ ಕಡಿಮೆಯಾಗುವುದರ ಜತೆಗೆ ಸಾಕ್ಷಿಗಳ ನಾಶ ಎಫ್‌ಐಆರ್‌ನಲ್ಲಿ ಸರಿಯಾಗಿ ದಾಖಲಿಸದೇ ಇರುವುದೂ ಕೂಡ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಜಿಲ್ಲಾ ಮೇಲುಸ್ತುವಾರಿ ಸಮಿತಿಯು ಕ್ರಮಬದ್ಧವಾಗಿ ಸಭೆಯನ್ನು ತೆಗೆದುಕೊಂಡು ಹೋದರೆ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ಸಿಗಲು ಸಾಧ್ಯ. ಇದಾಗದಿದ್ದಾಗ ಅಪರಾಧಿಗಳು ಖುಲಾಸೆಯಾಗುತ್ತಾರೆ. ಇದಕ್ಕೆ ನಮ್ಮ ಜನರಲ್ಲಿ ಕಾನೂನಿನ ತಿಳುವಳಿಕೆ ಇಲ್ಲದಿರುವುದು ಹಾಗೂ ಜಾತಿ ಆಧಾರತಿ ವ್ಯವಸ್ಥೆ ನಮ್ಮದಾಗಿದೆ” ಎಂದರು.

ಸಫಾಯಿ ಕರ್ಮಾಚಾರಿ ನಿಷೇಧ ಮತ್ತು ಪುನರ್ವಸತಿ ಸಮೀಕ್ಷೆಯಲ್ಲಿನ ಲೋಪದೋಷ ಸೇರಿದಂತೆ ಜಿಲ್ಲೆಗೆ ಸಂಬಂಧಿಸಿದ ಈ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಿರುವ ಶಿಫಾರಸುಗಳು ಸಾಮಾನ್ಯವಾಗಿದ್ದು, ಜಿಲ್ಲೆಗೆ ಸಂಬಂಧಿಸಿದಂತೆ ಪಿಟಿಸಿಎಲ್ ಮಂಜೂರಿದಾರರ ಮೇಲ್ಮನವಿಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವುದು ಸೇರಿದಂತೆ ಈಗಾಗಲೇ ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ಗಳ ಸಮೀಕ್ಷೆಯಲ್ಲಿ ಗುರುತಿಸಿಕೊಂಡಿರುವ ಸಫಾಯಿ ಕರ್ಮಚಾರಿಗಳಿಗೆ ಉದ್ಯೋಗ ಮತ್ತು ಪುನರ್‌ವಸತಿಗೆ ಸಂಬಂಧಿಸಿದ ನಿರ್ಧಿಷ್ಠ ಶಿಫಾರಸುಗಳು ಹಾಗೂ ಇನ್ನಿತರೆ ಅಂಶಗಳ ಬಗ್ಗೆ ಚರ್ಚಿಸಲು ಜಿಲ್ಲಾಡಳಿತದಿಂದ ಸಭೆ ಕರೆದು ಕಾನೂನುಗಳ ಅನುಷ್ಠಾನಕ್ಕೆ ಕ್ರಮವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು” ಎಂದು ಹೇಳಿದರು.

“ಕಳೆದ 2024-25ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಸಂಶೋಧನೆ ಕೈಗೊಂಡ ಮುಖ್ಯಾಂಶಗಳ ಬಗ್ಗೆ ಸಂಶೋಧಕ ಡಾ.ಸಿದ್ದಾರ್ಥ್ ಜೋಶಿ, ವಿಶ್ಲೇಷಿತ ವರದಿಯನ್ನು ಮಂಡಿಸಿದ್ದರು. ಅದರಂತೆ ತುಮಕೂರಿನಲ್ಲಿ ಭೂ ರಹಿತ ಎಸ್‌ಸಿ/ಎಸ್‌ಟಿಗಳ ಪ್ರಮಾಣ 260 ಕುಟುಂಬಗಳಲ್ಲಿ ಸಂಶೋಧನೆ ಮಾಡಿದಾಗ ಭೂ ಮಾಲಿಕರು ಶೇ. 75.58ರಷ್ಟು ಎಸ್‌ಸಿ ಕುಟುಂಬಗಳಿದ್ದರೆ, ಭೂ ರಹಿತರ ಸಂಖ್ಯೆ ಶೇ.24.42ರಷ್ಟಿದೆ. ಭೂಮಿಯ ಮೂಲ ನೋಡಿದರೆ ಪಿತ್ರಾರ್ಜಿತವಾಗಿ ಶೇ.75ರಷ್ಟು ಸ್ವಯಾರ್ಜಿತವಾಗಿ ಶೇ.7ರಷ್ಟು, ಇನಾಮ್‌ನಲ್ಲಿ ಶೇ.3.5ರಷ್ಟು, ಬಗರ್‌ ಹುಕುಂನಲ್ಲಿ ಶೇ.11.84ರಷ್ಟು, ಭೂ ಕಂದಾಯ ಕಾಯಿದೆಯಲ್ಲಿ 0.39ರಷ್ಟು, ಸರ್ಕಾರಿ ಯೋಜನೆಗಳಲ್ಲಿ 0.24ರಷ್ಟು, ಇತರೆ ಶೇ.1.77ರಷ್ಟು ಇದೆ” ಎಂದರು.

“ಪಿಟಿಸಿಎಲ್ ಕಾಯಿದೆಯಲ್ಲಿ ಭೂಮಿಯ ಮೂಲ ಶೇ.50ರಷ್ಟು ಇನಾಮು ಭೂಮಿಯದ್ದಾಗಿದ್ದರೆ, ದರಕಾಸ್ತು/ಬಗರ್‌ಹುಕುಂ ಶೇ.16.7ರಷ್ಟಿದೆ. ಭೂ ಕಂದಾಯ ಕಾಯಿದೆಯಲ್ಲಿ ಶೇ.7.1ರಷ್ಟು ಪಿತ್ರಾರ್ಜಿತ ಶೇ.14.3ರಷ್ಟು ಸರ್ಕಾರಿ ಯೋಜನೆಗಳಲ್ಲಿ ಶೇ.4.8ರಷ್ಟಿದ್ದು, ಈ ಕಾಯಿದೆಯಡಿಯಲ್ಲಿ ಎಸಿ ಮತ್ತು ಡಿಸಿ ನ್ಯಾಯಾಲಯಗಳಲ್ಲಿ ಅರ್ಜಿಗಳ ಮೇಲ್ಮನವಿ ವಿಲೇವಾರಿಗೆ ತೆಗೆದುಕೊಂಡ ಸಮಯ ಸರಾಸರಿ 3 ರಿಂದ 10 ವರ್ಷಗಳಾಗಿವೆ. ಇನ್ನು ಜಿಲ್ಲೆಯಲ್ಲಿ ಗುಬ್ಬಿ ಪಟ್ಟಣದ ಶೌಚಾ ನೈರ್ಮಲ್ಯದ ಸ್ಥಿತಿಗತಿಗಳಲ್ಲಿ ಶೇ.23.98ರಷ್ಟು ಶೌಚಾಲಯ ಇಲ್ಲ. ಹಾಗೂ ಜಿಲ್ಲೆಯಲ್ಲಿ ಶೇ.1.15 ಲಕ್ಷ ಶೌಚಾಲಯಗಳಿದ್ದು, ಸ್ವಯಂ ಘೋಷಿತವಾಗಿ 157 ಜನರು ಮಾತ್ರ ಸಫಾಯಿ ಕರ್ಮಚಾರಿಗಳನ್ನು ಗುರುತಿಸಲಾಗಿದೆ. ಹಾಗಾಗಿ ಒಟ್ಟಾರೆ ಶಿಫಾರಸುಗಳನ್ನು ನಾವು ಈ ವರದಿಯಲ್ಲಿ ನೀಡಿದ್ದು, ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ಗಳಲ್ಲಿ ಗುರುತಿಸಲಾಗಿ 1 ವರ್ಷದ ಅವಧಿಯಲ್ಲಿ ಪುನರ್‌ವಸತಿ ಕಲ್ಪಿಸಬೇಕು” ಎಂದು ಹೇಳಿದರು.

“ಕರ್ನಾಟಕ ಭೂ ಸುಧಾರಣಾ ಕಾಯಿದೆ 1961ರ ಪ್ರತಿ ಗ್ರಾಮ ಮತ್ತು ತಾಲೂಕಿನಲ್ಲಿ ಮಂಜೂರು ಮಾಡಬೇಕಾದ ಭೂಮಿಯಲ್ಲಿ ಕನಿಷ್ಠ 50 ಎಸ್‌ಸಿ/ಎಸ್‌ಟಿಗಳಿಗೆ ಮಂಜೂರು ಮಾಡಲಾಗಿದೆಯೇ ಎಂದು ಖಾತ್ರಿಪಡಿಸಿ ಶೇ.75ಕ್ಕೆ ಹೆಚ್ಚಿಸಬೇಕು. ಕರ್ನಾಟಕ ಭೂ ಕಂದಾಯ ಕಾಯಿದೆ 1964 ಮತ್ತು ನಿಯಮ 1969 ಈಗಾಗಲೇ ಜಿಲ್ಲೆಯಲ್ಲಿ ನಮೂನೆ 50.53.57ರಲ್ಲಿ ಸಲ್ಲಿಸಲಾದ ಅರ್ಜಿಗಳ ವಿಲೇವಾರಿ 1 ವರ್ಷದ ಕಾಲಮಿತಿ ಮಾಡಬೇಕು. ಪಿಟಿಸಿಎಲ್ 1978 ರಡಿಯಲ್ಲಿ ಎಸಿ ಮತ್ತು ಡಿಸಿ ನ್ಯಾಯಾಲಯಗಳಲ್ಲಿ 5ಎ ಅಡಿಯಲ್ಲಿ ಸಲ್ಲಿಸಲಾದ ಅರ್ಜಿ ಹಾಗೂ ಮೇಲ್ಮನವಿಗಳನ್ನು 1 ವರ್ಷದ ಅವಧಿಯಲ್ಲಿ ವಿಲೇವಾರಿ ಮಾಡಲು ಮುಂದಾಗಬೇಕು. ಹೀಗೆ ಹಲವಾರು ಶಿಫಾರಸುಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ” ಎಂದರು.

ಹೋರಾಟಗಾರರಿಗೆ ಕಾನೂನುಗಳ ತಿಳುವಳಿಕೆ ಬೇಕು: ಕೆ ದೊರೈರಾಜ್

ಸಭೆಯಲ್ಲಿ ವರದಿ ಮತ್ತು ಶಿಫಾರಸುಗಳ ಮೇಲೆ ತಮ್ಮ ಪ್ರತಿಕ್ರಿಯೆ ನೀಡಿದ ಜಿಲ್ಲೆಯ ಹಿರಿಯ ಚಿಂತಕ ಕೆ ದೊರೈರಾಜು ಮಾತನಾಡಿ, “ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಸಫಾಯಿ ಕರ್ಮಚಾರಿಗಳ ಸಮೀಕ್ಷೆಯಲ್ಲಿ ಸಂಘಟನೆಯ ನಾಯಕರು ಶಿಸ್ತನ್ನು ರೂಪಿಸಿಕೊಳ್ಳಬೇಕು. ಆಡಳಿತಾತ್ಮಕ ವ್ಯವಸ್ಥೆಯಲ್ಲಿ ನಾವು ಯಾವ ರೀತಿ ಟ್ಯಾಕಲ್ ಮಾಡಬೇಕೆಂದು ಮೈಗೂಡಿಸಿಕೊಳ್ಳಬೇಕು. ಅಂದರೆ ಒಂದು ಸಂಘಟನೆ ಒಂದು ಕಚೇರಿಯ ವ್ಯವಸ್ಥೆಯನ್ನೇ ಅಳವಡಿಸಿಕೊಳ್ಳಬೇಕು. ಮೊದಲು ಸೂಕ್ಷ್ಮ ಸಂವೇದಿ ಆಡಳಿತ ವ್ಯವಸ್ಥೆ ಇತ್ತು. ಈಗ ಅಂತಹ ಆಡಲಿತ ವ್ಯವಸ್ಥೆ ಇಲ್ಲ. ವಾಸ್ಥವವಾಗಿ ಜಿಲ್ಲೆಯಲ್ಲಿ ಕೈಗೊಂಡ ಈ ಸಮೀಕ್ಷಾ ತಂಡಕ್ಕೆ ಅಭಿನಂದನೆಗಳು. ಏಕೆಂದರೆ ನೈಜವಾದ ಅಂಕಿಅಂಶಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ” ಎಂದು ಹೇಳಿದರು.

“ಹೋರಾಟಕ್ಕೆ ಶಕ್ತಿ ನೀಡಲು ಇಂತಹ ಅಂಕಿಅಂಶಗಳು ಅಗತ್ಯವಿದೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾದ ರಾಜಕೀಯ ವ್ಯವಸ್ಥೆಯನ್ನು ವೈಧಿಕ ಮನೋಭೂಮಿಕೆಯಲ್ಲಿ ಜನಪ್ರತಿನಿಧಿಗಳ ಕಾರ್ಯನಿರ್ವಹಿಸುತ್ತಿದ್ದರೆ ಬದಲಾದ ಸಾಮಾಜಿಕ ವ್ಯವಸ್ಥೆ ಮನುವಾದ ಇಡೀ ಪ್ರಭುತ್ವವೇ ಕಾನೂನು ಹಾದಿಯಲ್ಲಿ ಸೋಲುವಂತೆ ಮಾಡಿ ಕೆಳಜಾತಿ ಜನರಿಗೆ ಭೂಮಿ ದಕ್ಕದಂತೆ ಮಾಡಲಾಗಿದೆ. ಮೂರನೇದಾಗಿ ಆರ್ಥಿಕ ವ್ಯವಸ್ಥೆ ಬಂಡವಾಳ ಶಾಹಿಗಳಿಗೆ ಅನುಕೂಲವಾಗುವಂತೆ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆದ್ದರಿಂದ ಈ ಸಾಮಾಜಿಕ ವ್ಯವಸ್ಥೆಯನ್ನು ಮಣಿಸಲು ನಮ್ಮ ನಿರಂತರ ಪ್ರಯತ್ನ ಇರಬೇಕು. ಇದರಿಂದ ಸಾಮಾಜಿಕ ನ್ಯಾಯ ಮತ್ತು ಬದಲಾವಣೆಗೆ ದಾರಿಯಾಗುತ್ತದೆ. ಈಗಿನ ಸಂದರ್ಭದಲ್ಲಿ ಎಸ್‌ಸಿ/ಎಸ್‌ಟಿಗಳ ದೌರ್ಜನ್ಯ ಪ್ರಕರಣಗಳು ಪಿಟಿಸಿಎಲ್ ಲ್ಯಾಂಡ್, ಇನಾಮ್ ಲ್ಯಾಂಡ್ ರಾಜಕಾರಣಿಗಳಿಗೆ ಗೋಲ್ಡನ್ ಕೇಕ್ ಆಗಿದ್ದು, ಹೋರಾಟಗಾರರು ತಮ್ಮ ಹೋರಾಟಗಳ ತಂತ್ರಗಳನ್ನು ಇದಕ್ಕನುಗುಣವಾಗಿ ಬದಲಾಯಿಸಿಕೊಳ್ಳಬೇಕಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಸ್ತೆ ಪಕ್ಕದ ಚರಂಡಿಗೆ ತಡೆಗೋಡೆ ನಿರ್ಮಿಸಲು ಜಯಕರ್ನಾಟಕ ಆಗ್ರಹ

ಕಾರ್ಯಕ್ರಮದಲ್ಲಿ ಮಧುಗಿರಿ ಉಪವಿಭಾಗಧಿಕಾರಿಗಳಾದ ಗೋಟೂರು ಶಿವಪ್ಪ ಪಾಲ್ಗೊಂಡಿದ್ದರು. ಸಮೀಕ್ಷಾ ವರದಿಗೆ ಪ್ರತಿಕ್ರಿಯಿಸಿ ಹಿರಿಯರಾದ ನರಸೀಯಪ್ಪ, ಬೆಲ್ಲದಮಡು ಕೃಷ್ಣಪ್ಪ, ಎ ನರಸಿಂಹಮೂರ್ತಿ, ಕೊಟ್ಟಶಂಕರ್, ಅನುಪಮಾ, ದೀಪಿಕಾ, ಚೋಳೂರು ಶಿವನಂಜಪ್ಪ, ಭರತ್‌ಬೆಲ್ಲದಮಡು, ರೆಡ್ಸ್ ರಂಗಯ್ಯ, ಮೇಲುಸ್ತುವಾರಿ ಸಮಿತಿಯ ರಂಜನ್, ಕೊಳಗೇರಿ ಸಮಿತಿಯ ಅರುಣ್, ತಿರುಮಲಯ್ಯ, ಕೃಷ್ಣಮೂರ್ತಿ, ಪಿ ಎನ್ ರಾಮಯ್ಯ ಹಾಗೂ ಹಲವು ಪ್ರಕರಣಗಳ ಸಂತ್ರಸ್ಥರು ಮಾತನಾಡಿದರು.

ಕಾರ್ಯಕ್ರಮದದಲ್ಲಿ ಸಮಾಲೋಚನ ಸಭೆಯಲ್ಲಿ ಜಿಲ್ಲೆಯ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯ ಬಾಧಿತರು/ಸಂತ್ರಸ್ಥರು ಪಿಟಿಸಿಎಲ್ ಕಾಯಿದೆ ಸಂತ್ರಸ್ತರು, ಡಿಎಸ್‌ಎಸ್ ಸಂಘಟನೆಯ ಮುಖಂಡರು, ಸಾವಿತ್ರಿ ಬಾಯಿ ಫುಲೆ ಮತ್ತು ಸ್ಲಂ ಸಮಿತಿಯ ಮುಖಂಡರು ಪಾಲ್ಗೊಂಡಿದ್ದರು. ವಕೀಲ ಎಸ್ ಶಿವಣ್ಣ ನಿರೂಪಿಸಿದರು, ಹೈಕೋರ್ಟ್ ವಕೀಲ ವಿನಯ್‌ಶ್ರೀನಿವಾಸ್ ಸ್ವಾಗತ ಕೋರಿದರು, ಮನೋಜ್‌ಕುಮಾರ್ ವಂದನಾರ್ಪಣೆ ನೆರವೇರಿಸಿದರು.‌

ವರದಿ : ಅರುಣ್

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಕ್ಕಳಿಗೆ ಇಂಟರ್ನೆಟ್‌ ನಿರ್ಬಂಧ | ಸ್ವಾತಂತ್ರ್ಯಕ್ಕೆ ಕಡಿವಾಣವಲ್ಲ, ಡಿಜಿಟಲ್ ಜಗತ್ತಿಗೆ ಹೊಣೆಗಾರಿಕೆಯ ಚೌಕಟ್ಟು ಅಗತ್ಯ

ಇಂಟರ್ನೆಟ್ ಪ್ರವೇಶವನ್ನು ಕೇವಲ ತಾಂತ್ರಿಕ ಸೌಲಭ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಇದೇ ಡಿಜಿಟಲ್...

ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ...

ಕೇಂದ್ರದ ಆಡಳಿತ ಕರಡು ತಿರಸ್ಕರಿಸಿದ ಲಡಾಖ್ ನಾಯಕರು: ‘ಏಕಪಕ್ಷೀಯ’ ನಿರ್ಧಾರ ಖಂಡಿಸಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಲಡಾಖ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ನೂತನ ಆಡಳಿತಾತ್ಮಕ ಕರಡನ್ನು ಪ್ರಮುಖ...